ಸಂಗಾರೆಡ್ಡಿ(ತೆಲಂಗಾಣ): ಸಿದ್ದಿಪೇಟ್ ಜಿಲ್ಲೆಯ ಮುನಿಗಡಪ ಗ್ರಾಮದ ಹೊರವಲಯದಲ್ಲಿ ಬರೋಬ್ಬರಿ 100 ಕೋತಿಗಳ ಕಳೇಬರ ಪತ್ತೆಯಾಗಿದೆ. ಬೇರೆಡೆ ಇವುಗಳಿಗೆ ವಿಷವುಣಿಸಿ ಸಾಯಿಸಿದ ಬಳಿಕ ಕಳೇಬರವನ್ನು ಇಲ್ಲಿ ತಂದು ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕಳೇ ಬರ ಕಂಡ ಕೂಡಲೇ ಸ್ಥಳಿಯರು ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಬಂದು ಮೃತಪಟ್ಟ ಕೋತಿಗಳ ಮಾದರಿಯನ್ನು ಸಂಗ್ರಹಿಸಿ ಹೈದರಾಬಾದ್‌ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪ್ರಯೋಗಾಲಯದ ವರದಿ ಬಂದ ನಂತರವೇ ಸಾವಿಗೀಡಾಗಲು ನಿಖರ ಕಾರಣ ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.