ಹಮಾಸ್‌ ದಾಳಿಗೆ ಲಂಡನ್‌ನಲ್ಲಿ ಸಂಭ್ರಮ

KannadaprabhaNewsNetwork | Updated : Oct 09 2023, 03:52 PM IST

ಸಾರಾಂಶ

ಲಂಡನ್‌ನ ಬೀದಿಗಳಲ್ಲಿ ಹಲವರು ಪ್ಯಾಲೆಸ್ತಿನ್ ಧ್ವಜ ಹಿಡಿದು ಇಸ್ರೇಲ್‌ ಮೇಲಿನ ದಾಳಿಯನ್ನು ಸಂಭ್ರಮಿಸಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಲಂಡನ್‌: ಇಸ್ರೇಲ್‌ ಮೇಲೆ ದಾಳಿ ಮಾಡಿದ ಪ್ಯಾಲೆಸ್ತಿನ್‌ನ ಹಮಾಸ್‌ ಉಗ್ರರು ಹಲವಾರು ಜನರನ್ನು ಕೊಲೆ ಮಾಡಿ, ಅಪಹರಿಸಿದ ಘಟನೆ ಕುರಿತು ಲಂಡನ್‌ನಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಲಂಡನ್‌ನ ಬೀದಿಗಳಲ್ಲಿ ಹಲವರು ಪ್ಯಾಲೆಸ್ತಿನ್ ಧ್ವಜ ಹಿಡಿದು ಇಸ್ರೇಲ್‌ ಮೇಲಿನ ದಾಳಿಯನ್ನು ಸಂಭ್ರಮಿಸಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಡನ್‌ ಪೊಲೀಸರು ‘ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ಘಟನೆಗಳ ಬಗ್ಗೆ ನಮಗೆ ತಿಳಿದಿದೆ. 

ಇದು ಮುಭರುವ ದಿನಗಳಲ್ಲಿ ಪ್ರತಿಭಟನೆಗೆ ಕಾರಣವಾಗಬಹುದು ಎಂದು ನಮಗೆ ತಿಳಿದಿದ್ದು ಲಂಡನ್‌ ನಿವಾಸಿಗಳ ತೊಂದರೆಯಾಗುವಂತಹ ಯಾವುದೇ ಗದ್ದಲಗಳು ನಡೆಯದಂತೆ ಪೊಲೀಸ್‌ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ. ಇನ್ನು ಈ ಸಂಭ್ರಮಾಚರಣೆಗೆ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

Share this article