ಆಧುನಿಕ ಕಾಲದ ವಿದೇಶದ ಅತಿ ಹಿಂದೂ ದೇಗುಲ ಅಮೆರಿಕದಲ್ಲಿ ಉದ್ಘಾಟನೆ

KannadaprabhaNewsNetwork |  
Published : Oct 09, 2023, 12:45 AM ISTUpdated : Oct 09, 2023, 03:55 PM IST
Hindu Temples of Canada

ಸಾರಾಂಶ

ಆಧುನಿಕ ಯುಗದಲ್ಲಿ ಭಾರತದ ಹೊರಗೆ ನಿರ್ಮಿಸಲಾಗಿರುವ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಹಿಂದೂ ದೇವಾಲಯವನ್ನು ಅ.8 ರಂದು ಉದ್ಘಾಟಿಸಲಾಯಿತು. ಆದರೆ ಭಕ್ತರಿಗೆ ಈಗ ಪ್ರವೇಶವಿಲ್ಲ. ಅ.18ರಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.

- 183 ಎಕರೆ ಪ್ರದೇಶದಲ್ಲಿರುವ ಅಕ್ಷರಧಾಮ ಮಂದಿರ - ಅ.18ರಂದು ಭಕ್ತರ ಪ್ರವೇಶಕ್ಕೆ ಮುಕ್ತ ನ್ಯೂಜೆರ್ಸಿ: ಆಧುನಿಕ ಯುಗದಲ್ಲಿ ಭಾರತದ ಹೊರಗೆ ನಿರ್ಮಿಸಲಾಗಿರುವ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಹಿಂದೂ ದೇವಾಲಯವನ್ನು ಅ.8 ರಂದು ಉದ್ಘಾಟಿಸಲಾಯಿತು. ಆದರೆ ಭಕ್ತರಿಗೆ ಈಗ ಪ್ರವೇಶವಿಲ್ಲ. ಅ.18ರಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ. ಬರೋಬ್ಬರಿ 183 ಎಕರೆ ಪ್ರದೇಶದಲ್ಲಿರುವ ಈ ದೇವಸ್ಥಾನವನ್ನು ಬಿಎಪಿಎಸ್‌ ಸ್ವಾಮಿನಾರಾಯಣ ಅಕ್ಷರಧಾಮ ಎಂದು ಕರೆಯಲಾಗುತ್ತದೆ. 12 ವರ್ಷಕ್ಕಿಂತ ಅಧಿಕ ಕಾಲ, ಅಮೆರಿಕದಲ್ಲಿರುವ 12,500ಕ್ಕೂ ಹೆಚ್ಚು ಸ್ವಯಂಸೇವಕರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. 2011ರಲ್ಲಿ ನಿರ್ಮಾಣ ಪ್ರಾರಂಭವಾಗಿದ್ದ ಈ ದೇವಾಲಯವು 2023ರಲ್ಲಿ ಪೂರ್ಣಗೊಂಡಿದೆ. 

ದೇವಸ್ಥಾನವು 255 ಅಡಿ ಉದ್ದವಿದ್ದು, 345 ಅಡಿ ಅಗಲ ಮತ್ತು 191 ಅಡಿ ಎತ್ತರವನ್ನು ಹೊಂದಿದೆ. ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿನ ದೇವಸ್ಥಾನದ ವಿನ್ಯಾಸದಂತೆ ಇದನ್ನು ನಿರ್ಮಿಸಲಾಗಿದ್ದು ಭಾರತೀಯ ಸಂಗೀತ ವಾದ್ಯಗಳು, ವಿವಿಧ ನೃತ್ಯ ಪ್ರಕಾರಗಳು ಸೇರಿದಂತೆ ಒಟ್ಟು 10,000 ಪ್ರತಿಮೆಗಳನ್ನು ದೇವಸ್ಥಾನದಲ್ಲಿ ಕೆತ್ತಲಾಗಿದೆ. ಕಾಂಬೋಡಿಯಾದಲ್ಲಿರುವ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನದ ಬಳಿಕ ಇದುವೇ ಅತಿ ದೊಡ್ಡ ದೇವಸ್ಥಾನವಾಗಿದೆ ಎನ್ನಲಾಗಿದೆ. ದೇವಾಲಯವು ಮುಖ್ಯ ದೇವಸ್ಥಾನ ಸೇರಿದಂತೆ 12 ಉಪದೇಗುಲಗಳನ್ನು ಒಳಗೊಂಡಿದ್ದು, 9 ಶಿಖರಗಳು (ಗೋಪುರ) ಮತ್ತು ಇತರ 9 ಪಿರಮಿಡ್‌ ಆಕಾರದ ಶಿಖರಗಳನ್ನು ಹೊಂದಿದೆ. ಇದನ್ನು ಸಾಂಪ್ರಾದಯಕ ಕಲ್ಲಿನ ವಾಸ್ತುಶಿಲ್ಪದೊಂದಿಗೆ ನಿರ್ಮಿಸಲ್ಗಿದೆ. ಇನ್ನು ಭಾರತದ ಪವಿತ್ರ ನದಿಗಳು, ಅಮೆರಿಕದ 50 ರಾಜ್ಯ ಸೇರಿದಂತೆ ಪ್ರಪಂಚಾದ್ಯಂತ 300ಕ್ಕೂ ಹೆಚ್ಚಿನ ಜಲಮೂಲಗಳಿಂದ ಸಂಗ್ರಹಿಸಿ ನೀರಿನ ಬಾವಿಯನ್ನು ಇಲ್ಲಿ ನಿರ್ಮಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶಬರಿಮಲೆ ಚಿನ್ನಕನ್ನ: ಕಾಂತಾರ ನಟಗೆ ಇ.ಡಿ. ಸಮನ್ಸ್‌
ಐಎಎಸ್‌, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್‌ ಇಲ್ಲ- ಯುಪಿಎಸ್ಸಿ ನಿಯಮ ಬದಲು