ರಾಮಮಂದಿರಕ್ಕೆ 60 ಲಕ್ಷ ಭಕ್ತರ ಭೇಟಿ, ರಾಮನಿಗೆ ₹25 ಕೋಟಿ ದೇಣಿಗೆ!

KannadaprabhaNewsNetwork |  
Published : Feb 25, 2024, 01:47 AM ISTUpdated : Feb 25, 2024, 10:53 AM IST
ರಾಮಮಂದಿರ | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಒಂದು ತಿಂಗಳಲ್ಲಿ ಸುಮಾರು 60 ಲಕ್ಷ ಜನರು ದೇಗುಲಕ್ಕೆ ಭೇಟಿ ನೀಡಿದ್ದು, 25 ಕೋಟಿ ರು.ಗೂ ಅಧಿಕ ನಗದು ಮತ್ತು ಭಾರೀ ಪ್ರಮಾಣದ ಚಿನ್ನಾಭರಣಗಳ ದೇಣಿಗೆ ಹರಿದು ಬಂದಿದೆ.

ಅಯೋಧ್ಯೆ: ಇಲ್ಲಿನ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯಾದ ತಿಂಗಳಿನಲ್ಲಿ ಬರೋಬ್ಬರಿ 25 ಕೋಟಿ ರು. ಕಾಣಿಕೆ ಬಂದಿದೆ ಎಂದು ರಾಮ ಮಂದಿರ ಟ್ರಸ್ಟ್‌ ತಿಳಿಸಿದೆ.

ಈವರೆಗೂ 60 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ.ಜ.23ರಿಂದ ಆರಂಭವಾದ ಸಾರ್ವಜನಿಕ ದರ್ಶನದಲ್ಲಿ ಒಟ್ಟು 25 ಕೇಜಿ ಚಿನ್ನ, ಬೆಳ್ಳಿ ಆಭರಣ, ಹುಂಡಿ ಕಾಣಿಕೆ, ಚೆಕ್‌, ಡಿಡಿಗಳು ಸೇರಿದೆ.

ಇದು ಆನ್ಲೈನ್‌ ಕಾಣಿಕೆಯನ್ನು ಹೊರತುಪಡಿದೆ ಎಂದು ಟ್ರಸ್ಟ್‌ನ ಅಧಿಕಾರಿ ತಿಳಿಸಿದ್ದಾರೆ.ಜೊತೆಗೆ ಜ.23ರಿಂದ ಇಲ್ಲಿವರೆಗೂ 60 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ. ರಾಮ ನವಮಿ ವೇಳೆ ಭಕ್ತರ ಸಂಖ್ಯೆ 50 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.

PREV

Recommended Stories

ಹೇಳದೆ, ಕೇಳದೆ ರಾಹುಲ್‌ ಫಾರಿನ್‌ಗೆಹೋಗುತ್ತಾರೆ: ಸಿಆರ್‌ಪಿಎಫ್‌ ದೂರು- ಭದ್ರತೆಯನ್ನು ಗಂಭೀರವಾಗಿ ಪರಿಗಣಿಸ್ತಿಲ್ಲ: ಖರ್ಗೆಗೆ ಪತ್ರ
ಮೊಬೈಲ್‌ನ ಇಎಂಐ ಕಟ್ಟಿಲ್ವಾ? ನಿಮ್ಮಫೋನ್‌ ಶೀಘ್ರವೇ ಲಾಕ್‌ ಆಗಬಹುದು!- ಸಾಲ ಕಟ್ಟದೆ ಓಡಾಡುತ್ತಿರುವವರಿಗೆ ಸದ್ಯವೇ ಆರ್‌ಬಿಐ ಶಾಕ್‌