ಶಪಥದ ವೇಳೆ ಒವೈಸಿ ‘ಜೈ ಪ್ಯಾಲೆಸ್ತೀನ್‌’ ಘೋಷಣೆ: ವಿವಾದ

KannadaprabhaNewsNetwork |  
Published : Jun 26, 2024, 12:41 AM IST
ಅಸಾದುದ್ದೀನ್‌ ಒವೈಸಿ | Kannada Prabha

ಸಾರಾಂಶ

ವಿವಾದದ ಬಳಿಕ ಕಡತದಿಂದ ತೆಗೆಯಲು ಸ್ಪೀಕರ್‌ ಆದೇಶ ನೀಡಿದ್ದು, ಶೋಭಾ ಕರಂದ್ಲಾಜೆ ಸೇರಿ ಅನೇಕರು ಸ್ಪೀಕರ್‌ಗೆ ಅಸಾದುದ್ದೀನ್‌ ಒವೈಸಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

ನವದೆಹಲಿ: ಹೈದರಾಬಾದ್‌ ಕ್ಷೇತ್ರದಿಂದ ಸಂಸದ ಹಾಗೂ ಎಐಎಂಐಎಂ ಪಕ್ಷದ ಸ್ಥಾಪಕ ಅಸಾದುದ್ದೀನ್‌ ಒವೈಸಿ ಸಂಸತ್ತಿನಲ್ಲಿ ಸಂಸದರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ’ಜೈ ಪ್ಯಾಲೆಸ್ತೀನ್‌’ ಎಂಬ ಘೋಷಣೆ ಕೂಗಿರುವುದು ವಿವಾದಕ್ಕೆ ಕಾರಣವಾಗಿದೆ.

ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದಾರೆ ಹಾಗೂ ಸ್ಪೀಕರ್‌ ಜತೆ ಈ ಬಗ್ಗೆ ಚರ್ಚಿಸುವುದಾಗಿ ಸಂಸದೀಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಪ್ರಮಾಣವಚನ ಸ್ವೀಕಾರಕ್ಕೆ ಒವೈಸಿ ಹೆಸರನ್ನು ಕರೆದ ಕ್ಷಣ ಆಡಳಿತ ಪಕ್ಷದ ಕೆಲ ಸಂಸದರು ಜೈಶ್ರೀರಾಂ ಮತ್ತು ಭಾರತ್‌ ಮಾತಾ ಕಿ ಜೈ ಘೋಷಣೆಯನ್ನು ಕೂಗಿದರು. ಬಳಿಕ ಪ್ರಮಾಣ ಸ್ವೀಕರಿಸಿದ ಅಸಾದುದ್ದೀನ್‌, ಕೊನೆಯಲ್ಲಿ ‘ಜೈ ಭೀಮ್‌, ಜೈ ಎಂಐಎಂ, ಜೈ ಪ್ಯಾಲೆಸ್ತೀನ್‌, ಜೈ ತೆಲಂಗಾಣ, ಅಲ್ಲಾಹು ಅಕ್ಬರ್’ ಎಂದು ಕೂಗಿದರು. ಇದು ವಿವಾದಕ್ಕೆ ಕಾರಣವಾಯಿತು. ಸಂಸತ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದಾಗ ಆ ವಾಕ್ಯವನ್ನು ಕಡತದಿಂದ ತೆಗೆಯುವುದಾಗಿ ಸ್ಪೀಕರ್‌ ಪ್ರಕಟಿಸಿದರು.

ಒವೈಸಿ ಸಮರ್ಥನೆ:

ಬಳಿಕ ಸಂಸತ್‌ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಕ್ರಮ ಸಮರ್ಥಿಸಿಕೊಂಡಿರುವ ಒವೈಸಿ ‘ಇತರರೂ ಸಹ ತಮಗೆ ತೋಚಿದ ಘೋಷಣೆಗಳನ್ನು ಕೂಗಿದ್ದಾರೆ. ನಾನು ದಮನಿತರ ಪರವಾಗಿ ದನಿ ಎತ್ತಿರುವೆ. ಅದರಲ್ಲಿ ತಪ್ಪೇನು? ಮಹಾತ್ಮಾ ಗಾಂಧಿ ಪ್ಯಾಲೆಸ್ತೀನ್‌ ಬಗ್ಗೆ ಏನು ಹೇಳಿದ್ದರು ನೋಡಿ.. ಅವರು ದಮನಿತರು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ