ಇಂಡೋನೇಷ್ಯಾಕ್ಕೆ ಭಾರತದ ‘ಅಸ್ತ್ರ’,‘ಬ್ರಹ್ಮೋಸ್‌’ ರಫ್ತು

KannadaprabhaNewsNetwork |  
Published : Jul 08, 2026, 03:00 AM IST
ಮೋದಿ  | Kannada Prabha

ಸಾರಾಂಶ

ಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ರಷ್ಯಾದೊಂದಿಗೆ ಭಾರತ ಅಭಿವೃದ್ಧಿಪಡಿಸಿರುವ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾದ 2 ಬ್ರಹ್ಮೋಸ್‌ಗಳನ್ನು 1,899 ಕೋಟಿ ರು.ಗೆ ಇಂಡೋನೇಷ್ಯಾಗೆ ರಫ್ತು ಮಾಡಲಾಗುವುದು.

- ಅಲ್ಲಿ ಬೆಂಗ್ಳೂರು ಐಐಎಂ ಸ್ಥಾಪನೆ

- ಮೋದಿ ಭೇಟಿಯ ವೇಳೆ ಒಪ್ಪಂದಜಕಾರ್ತ: ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ರಷ್ಯಾದೊಂದಿಗೆ ಭಾರತ ಅಭಿವೃದ್ಧಿಪಡಿಸಿರುವ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾದ 2 ಬ್ರಹ್ಮೋಸ್‌ಗಳನ್ನು 1,899 ಕೋಟಿ ರು.ಗೆ ಇಂಡೋನೇಷ್ಯಾಗೆ ರಫ್ತು ಮಾಡಲಾಗುವುದು.

ಜತೆಗೆ, ದೃಶ್ಯ ವ್ಯಾಪ್ತಿಯನ್ನೂ ಮೀರಿದ ದೂರದಲ್ಲೇ ಗಾಳಿಯಲ್ಲಿ ಶತ್ರುಗಳ ಯುದ್ಧವಿಮಾನಗಳನ್ನು ಹೊಡೆಯಬಲ್ಲ ಅಸ್ತ್ರ ಕ್ಷಿಪಣಿಗಳನ್ನು ಸಹ ಪೂರೈಸುವ ಒಪ್ಪಂದವಾಗಿದೆ. ಇನ್ನು ಜಾವಾದಲ್ಲಿ ಐಐಎಂ ಬೆಂಗಳೂರಿನ ಕ್ಯಾಂಪಸ್‌ ಕೂಡ ತಲೆ ಎತ್ತಲಿದೆ. ಇದು, ವಿದೇಶದಲ್ಲಿ ಸ್ಥಾಪನೆ ಆಗಲಿರುವ ಭಾರತದ 2ನೇ ಐಐಎಂ ಎನಿಸಿಕೊಳ್ಳಲಿದೆ.

ಯುಪಿಐಅನ್ನು ಇಂಡೋನೇಷ್ಯಾದ ಪಾವತಿ ವ್ಯವಸ್ಥೆಯೊಂದಿಗೆ ಸಂಯೋಜಿಸುವ ನಿರ್ಧಾರ ಕೂಡ ಆಗಿದೆ.

ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ಗೌರವ35ನೇ ಜಾಗತಿಕ ಗೌರವ । ಮುಸ್ಲಿಂ ದೇಶದ 8ನೇ ಪ್ರಶಸ್ತಿಜಕಾರ್ತ: ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಇಂಡೋನೇಷ್ಯಾದ ಅತ್ಯುನ್ನತ ಗೌರವವಾದ ‘ಬಿನ್‌ತಾಂಗ್‌ ಅಧಿಪೂರ್ಣ’ ನೀಡಿ ಗೌರವಿಸಲಾಯಿತು. ಉಭಯ ದೇಶಗಳ ಸಂಬಂಧ ಸುಧಾರಣೆಗೆ ಶ್ರಮಿಸಿದ್ದಕ್ಕಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೋ ಅವರು ಈ ಗೌರವ ಪ್ರಧಾನ ಮಾಡಿದರು. ಇದು ಮೋದಿ ಅವರಿಗೆ ನೀಡಲಾದ 34ನೇ ಜಾಗತಿಕ ಗೌರವವಾಗಿದೆ. ಜೊತೆಗೆ ಮುಸ್ಲಿಂ ದೇಶಗಳಿಂದ ಪ್ರಾಪ್ತವಾದ 8ನೇ ಪ್ರಶಸ್ತಿಯಾಗಿದೆ.ಈ ನಡುವೆ ಮೋದಿ ಅವರಿಗೆ ನೀಡಲಾದ ಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ಮೋದಿ ನಾಯಕತ್ವದ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ವಿಶ್ವಾಸದ ಪ್ರತೀಕವಿದು. ಜೊತೆಗೆ ಅತ್ಯಂತ ಹೆಚ್ಚು ಮುಸ್ಲಿಮರು ಇರುವ ದೇಶ ಇಂಡೋನೇಷ್ಯಾ ಮೋದಿ ಅವರಿಗೆ ತನ್ನ ಅತ್ಯುನ್ನತ ಗೌರವ ನೀಡಿದೆ. ಇದು ಅವರಿಗೆ ಮುಸ್ಲಿಂ ದೇಶಗಳಿಂದ ಸಂದ 8ನೇ ಪ್ರಶಸ್ತಿ. ಇದು ಬಿಜೆಪಿ ಮತ್ತು ಮೋದಿ, ಮುಸ್ಲಿಂ ವಿರೋಧಿ ಎಂಬ ಆರೋಪವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ ಎಂದು ಹೇಳಿದೆ.

ಇಂಡೋನೇಷ್ಯಾಕ್ಕೆ ಭಾರತದ ಬ್ರಹ್ಮೋಸ್‌, ಅಸ್ತ್ರ ಕ್ಷಿಪಣಿ ಬಲ

ಇಂಡೋನೇಷ್ಯಾದಲ್ಲಿ ಐಐಎಂ ಬೆಂಗಳೂರು ಸ್ಥಾಪನೆಇಂಡೋನೇಷ್ಯಾಗಾಗಿ ಇವಿಎಂ ಅಭಿವೃದ್ಧಿ ।

ಆಗ್ನೇಯ ಏಷ್ಯಾ ರಾಷ್ಟ್ರದಲ್ಲೂ ಯುಪಿಐ ಬಳಕೆಜಕಾರ್ತಾ: ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿ ವೇಳೆ ಆರೋಗ್ಯ, ಶಿಕ್ಷಣ, ರಕ್ಷಣೆ, ಆನ್‌ಲೈನ್‌ ಪಾವತಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳಿಗೆ ಸಂಬಂಧಿಸಿದ ತಿಳಿವಳಿಕೆ ಪತ್ರಕ್ಕೆ ಉಭಯ ದೇಶಗಳು ಸಹಿ ಮಾಡಿವೆ. ಇದರ ಭಾಗವಾಗಿ, ಪೂರ್ವ ಜಾವಾ ಪ್ರಾಂತ್ಯದ ಸಿಂಘಸಾರಿಯ ವಿಶೇಷ ಆರ್ಥಿಕ ವಲಯದಲ್ಲಿ ಐಐಎಂ ಬೆಂಗಳೂರಿನ ಕ್ಯಾಂಪಸ್‌ ಕೂಡ ತಲೆ ಎತ್ತಲಿದೆ. ಇದು, ವಿದೇಶದಲ್ಲಿ ಸ್ಥಾಪನೆಯಾಗಲಿರುವ ಭಾರತದ 2ನೇ ಐಐಎಂ ಎನಿಸಿಕೊಳ್ಳಲಿದೆ.

ಬ್ರಹ್ಮೋಸ್‌, ಅಸ್ತ್ರ ರಫ್ತು:ರಷ್ಯಾದೊಂದಿಗೆ ಭಾರತ ಅಭಿವೃದ್ಧಿಪಡಿಸಿರುವ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾದ 2 ಬ್ರಹ್ಮೋಸ್‌ಗಳನ್ನು 1,899 ಕೋಟಿ ರು.ಗೆ ಇಂಡೋನೇಷ್ಯಾಗೆ ರಫ್ತು ಮಾಡಲಾಗುವುದು. ಇವುಗಳಲ್ಲಿ 4 ಲಾಂಚರ್‌, 12 ಕ್ಷಿಪಣಿಗಳು ಇರಲಿವೆ. ಜತೆಗೆ, ದೃಶ್ಯ ವ್ಯಾಪ್ತಿಯನ್ನೂ ಮೀರಿದ ದೂರದಲ್ಲೇ ಗಾಳಿಯಲ್ಲಿ ಶತ್ರುಗಳ ಯುದ್ಧವಿಮಾನಗಳನ್ನು ಹೊಡೆಯಬಲ್ಲ ಅಸ್ತ್ರ ಕ್ಷಿಪಣಿಗಳನ್ನು ಸಹ ಪೂರೈಸುವ ಒಪ್ಪಂದವಾಗಿದೆ.

ಮತ್ತೊಂದು ದೇಶಕ್ಕೆ ಯುಪಿಐ:ಭಾರತದಲ್ಲಿ ದೇಶವ್ಯಾಪಿ ಬಳಕೆಯಲ್ಲಿರುವ ಆನ್‌ಲೈನ್‌ ಪಾವತಿ ವೇದಿಕೆ ಯುಪಿಐಅನ್ನು ಇಂಡೋನೇಷ್ಯಾದ ಪಾವತಿ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಮಹತ್ವದ ನಿರ್ಧಾರ ಕೂಡ ಕೈಗೊಳ್ಳಲಾಗಿದೆ. ಇದರಿಂದ ಉಭಯ ದೇಶಗಳ ನಾಗರಿಕರಿಗೆ ವಾಣಿಜ್ಯ ವಹಿವಾಟುಗಳು ಮತ್ತು ಗಡಿಯಾಚೆಗಿನ ಪ್ರಯಾಣ ಸುಲಭವಾಗುವ ನಿರೀಕ್ಷೆಯಿದೆ.

ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಇವಿಎಂ:ಒಪ್ಪಂದದ ಭಾಗವಾಗಿ, ಭಾರತದಲ್ಲಿ ಯಶಸ್ವಿಯಾಗಿ ಬಳಕೆಯಲ್ಲಿರುವ ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಇಂಡೋನೇಷ್ಯಾಗಾಗಿ ವಿಶೇಷವಾಗಿ ಉತ್ಪಾದಿಸಲು ಸಹಕಾರ ನೀಡಲಾಗುವುದು. ಇದು ಕಾರ್ಯರೂಪಕ್ಕೆ ಬಂದಲ್ಲಿ, ವಿಶ್ವದ 3ನೇ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ 2029ರಿಂದ ಇವಿಎಂಗಳಲ್ಲಿ ಮತದಾನ ನಡೆಯುವುದು. ಕಳೆದ ವರ್ಷದ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಅಲ್ಲಿನ ಅಧಿಕಾರಿಗಳು ಬಂದು ಭಾರತದ ಚುನಾವಣಾ ವ್ಯವಸ್ಥೆಯನ್ನು ಅಧ್ಯಯನ ಮಾಡಿಕೊಂಡು ಹೋಗಿದ್ದನ್ನಿಲ್ಲಿ ಸ್ಮರಿಸಬಹುದು.

ಆರೋಗ್ಯ ಸಹಕಾರ:ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ಇಂಡೋನೇಷ್ಯಾದ ರಾಷ್ಟ್ರೀಯ ಔಷಧ ಮತ್ತು ಆಹಾರ ನಿಯಂತ್ರಣ ಸಂಸ್ಥೆಗಳು ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ, ಜಾಗತಿಕ ನಿಯಂತ್ರಕ ಮಾನದಂಡಗಳ ಕುರಿತು ಜ್ಞಾನ ವಿನಿಮಯ, ಭಾರತೀಯ ವೈದ್ಯಕೀಯ ಉತ್ಪನ್ನಗಳಿಗೆ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಒಪ್ಪಂದಗಳಿಗೆ ಅಂಕಿತ ಹಾಕಿವೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿ ನಡುವೆ ಸಹಯೋಗ, ವೃತ್ತಿಪರರಿಗೆ ಫೆಲೋಶಿಪ್ ಕಾರ್ಯಕ್ರಮಗಳನ್ನು ಸುಗಮಗೊಳಿಸುವುದು ಮತ್ತು ಅರ್ಹ ಆರೋಗ್ಯ ಕಾರ್ಯಕರ್ತರಿಗೆ ಅವಕಾಶಗಳ ವ್ಯಾಪ್ತಿಯನ್ನು ಹೆಚ್ಚಿಸಲು ಸಹ ನಿರ್ಧರಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಧ್ಯಪ್ರದೇಶ ವಕ್ಫ್‌ ಮಂಡಳಿಗೆ ಇಬ್ಬರು ಹಿಂದೂಗಳ ನೇಮಕ
ರಾಮಚರಿತ ಮಾನಸ ಸೇರಿ ಅಮೂಲ್ಯ ಕಾಣಿಕೆ ಪ್ರದರ್ಶನ