ತಾವು ದಾನವಾಗಿ ನೀಡಿದ್ದ ಸ್ವರ್ಣಲೇಪಿತ ರಾಮಚರಿತಮಾನಸದ ಪ್ರತಿ ಅಯೋಧ್ಯೆ ರಾಮಮಂದಿರದಲ್ಲಿ ಕಾಣಿಸುತ್ತಿಲ್ಲ ಎಂದು ಭಕ್ತರೊಬ್ಬರು ದೂರಿದ ಬೆನ್ನಲ್ಲೇ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಆ ಸ್ವರ್ಣಲೇಪಿತ ಪುಸ್ತಕ ಸೇರಿ ದಾನವಾಗಿ ಬಂದ ಚಿನ್ನ-ಬೆಳ್ಳಿಯ ಆಭರಣಗಳನ್ನು ಹಾಗೂ ಅವುಗಳ ದಾಖಲೆ ಪುಸ್ತಕವನ್ನು ಪ್ರದರ್ಶಿಸಿದೆ.
ನವದೆಹಲಿ: ತಾವು ದಾನವಾಗಿ ನೀಡಿದ್ದ ಸ್ವರ್ಣಲೇಪಿತ ರಾಮಚರಿತಮಾನಸದ ಪ್ರತಿ ಅಯೋಧ್ಯೆ ರಾಮಮಂದಿರದಲ್ಲಿ ಕಾಣಿಸುತ್ತಿಲ್ಲ ಎಂದು ಭಕ್ತರೊಬ್ಬರು ದೂರಿದ ಬೆನ್ನಲ್ಲೇ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಆ ಸ್ವರ್ಣಲೇಪಿತ ಪುಸ್ತಕ ಸೇರಿ ದಾನವಾಗಿ ಬಂದ ಚಿನ್ನ-ಬೆಳ್ಳಿಯ ಆಭರಣಗಳನ್ನು ಹಾಗೂ ಅವುಗಳ ದಾಖಲೆ ಪುಸ್ತಕವನ್ನು ಪ್ರದರ್ಶಿಸಿದೆ.
ಈ ಮೂಲಕ ದಾನವಾಗಿ ಬಂದ ವಸ್ತುಗಳೆಲ್ಲಾ ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸುವ ಕೆಲಸ ಮಾಡಿದೆ. ಈ ಕುರಿತು ಮಾತನಾಡಿದ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಜಿ ಮಹಾರಾಜ್, ‘ದಾನವಾಗಿ ಬಂದ ಸುಮಾರು 2,800 ವಸ್ತುಗಳ ಲೆಕ್ಕ ಇದೆ. ಅವೆಲ್ಲವೂ ಭದ್ರವಾಗಿವೆ. ಅದನ್ನು ಸಾಬೀತುಪಡಿಸಲು 5 ಕೋಟಿ ರು. ಬೆಲೆಯ ರಾಮಚರಿತಮಾನಸ ಸೇರಿ 5 ಅಮೂಲ್ಯ ವಸ್ತುಗಳನ್ನು ತೋರಿಸಿದ್ದೇವೆ’ ಎಂದರು.
ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಮಹತ್ವದ ನಿರ್ಧಾರಟ್ರಸ್ಟಿಗಳಾದ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಅಂಗೀಕಾರ
ಕೃಷ್ಣ ಮೋಹನ್ ಮಧ್ಯಂತರ ಪ್ರಧಾನ ಕಾರ್ಯದರ್ಶಿ । ಜು. 22ಕ್ಕೆ ಮತ್ತೆ ಸಭೆಅಯೋಧ್ಯೆ: ಇಲ್ಲಿನ ರಾಮಮಂದಿರದಲ್ಲಿ ಹುಂಡಿ ಕಳ್ಳತನ ದೇಶವ್ಯಾಪಿ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ದೇಗುಲದ ಉಸ್ತುವಾರಿ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರು ಸೋಮವಾರ ಇಲ್ಲಿ ಸಭೆ ಸೇರಿದ್ದರು. ಈ ವೇಳೆ ಇತ್ತೀಚಿನ ಬೆಳವಣಿಗೆ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮತ್ತು ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ಹಿರಿಯ ಟ್ರಸ್ಟಿ ಕೆ. ಪ್ರಸನ್ನ ಆನ್‌ಲೈನ್ ಮುಖೇನ ಹಾಜರಾದರು. ಉಳಿದಂತೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಉಳಿದ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಚರ್ಚೆ, ನಿರ್ಧಾರ?
ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್, ಸದಸ್ಯ ಅನಿಲ್ ಮಿಶ್ರಾ ನೀಡಿದ್ದ ರಾಜೀನಾಮೆ ಅಂಗೀಕಾರ
- ಟ್ರಸ್ಟ್‌ನ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಖಜಾಂಚಿ ಕೃಷ್ಣ ಮೋಹನ್ ಅವರ ನಿಯೋಜನೆ
- ಟ್ರಸ್ಟ್‌ಗೆ ನೂತನ ಸಿಇಒ ನೇಮಕ ಮಾಡಲು ನಿರ್ಧಾರ. ಆಯ್ಕೆಗೆ ಮೂವರು ಸದಸ್ಯರ ಸಮಿತಿ ರಚನೆ
- ದೇಗುಲಕ್ಕೆ ನೀಡಿದ ನಗದೇತರ ಕಾಣಿಕೆ ಸುರಕ್ಷಿತವಾಗಿದೆ. ಈ ಬಗ್ಗೆ ಅನುಮಾನ ಬೇಡ ಎಂಬ ಭರವಸೆ
- ಶತಮಾನಗಳ ಹೋರಾಟದ ಬಳಿಕ ನಿರ್ಮಿಸಿದ ಮಂದಿರಕ್ಕೆ ದೇಣಿಗೆ ಕಳ್ಳತನ ಕೇಸಿಂದ ಕರಿನೆರಳು
- ದೇಣಿಗೆ ಕಳವು ಕೇಸಲ್ಲಿ ತಪ್ಪಿತಸ್ಥರೆಂದು ಸಾಬೀತಾದವರಿಗೆ ಕಠಿಣ ಶಿಕ್ಷೆ ಅಗತ್ಯ ಎಂದು ಪ್ರತಿಪಾದನೆ
- ಎಸ್‌ಐಟಿ ತನಿಖೆ ಸಂಪನ್ನವಾಗಿ ಅಂತಿಮ ವರದಿ ಸಲ್ಲಿಕೆ ಬಳಿಕ ಜು.22ಕ್ಕೆ ಮತ್ತೊಂದು ಸಭೆಗೆ ನಿಶ್ಚಯ
