ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಲಾದ ದೇಣಿಗೆಯಲ್ಲಿ ಅವ್ಯವಹಾರವಾಗಿರುವ ಆರೋಪದ ಹಿನ್ನೆಲೆಯಲ್ಲಿ ಅಲ್ಲಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿರುವುದನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ.

ಉಡುಪಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಲಾದ ದೇಣಿಗೆಯಲ್ಲಿ ಅವ್ಯವಹಾರವಾಗಿರುವ ಆರೋಪದ ಹಿನ್ನೆಲೆಯಲ್ಲಿ ಅಲ್ಲಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿರುವುದನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ.

ಅವ್ಯವಹಾರ ಆಗಿದೆ ಎಂದು ಅವರಿವರು ಮಾಡಿದ ಆರೋಪಗಳಿಗೆ ನಾನು ಅಭಿಪ್ರಾಯ ನೀಡಲು ಆಗುವುದಿಲ್ಲ, ಜುಲೈ 11ರಂದು ಟ್ರಸ್ಟ್‌ನ ಸಭೆ ಇದೆ. ಸಭೆಯಲ್ಲಿ ನಾನೂ ಭಾಗಿಯಾಗುತಿದ್ದೇನೆ, ಅಲ್ಲಿ ಈ ಆರೋಪಗಳ ವಿಚಾರ ಚರ್ಚೆಗೆ ಬರುತ್ತದೆ, ಅಲ್ಲಿ ವಿಚಾರ ತಿಳಿದು ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.ಸಿಂಧಿ ಸಮುದಾಯದವರು ತಾವು ರಾಮಮಂದಿರಕ್ಕೆ 200 ಕೆಜಿ ಬೆಳ್ಳಿ ನೀಡಿದ್ದೇವೆ, ಆದರೆ ತಮ್ಮನ್ನು ಗುರುತಿಸಿಲ್ಲ, ರಶೀದಿ ಕೊಟ್ಟಿಲ್ಲ ಎಂದು ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ದೊಡ್ಡ ಮಟ್ಟದ ದೇಣಿಗೆ ನೀಡಿದವರು ಅಲ್ಲಿಯೇ ರಶೀದಿ ತೆಗೆದುಕೊಳ್ಳಬೇಕು, ದೇಣಿಗೆ ನೀಡುವವರಿಗೂ ಪಡೆದುಕೊಳ್ಳವರಿಬ್ಬರಿಗೂ ಜವಾಬ್ದಾರಿ ಇದೆ, ರಶೀದಿ ಕೊಟ್ಟಿಲ್ಲ ಅನ್ನುವ ಮಾತು ನನಗೆ ನಂಬಲಾಗುತ್ತಿಲ್ಲ, ಒಂದು ವೇಳೆ ರಶೀದಿ ಕೊಟ್ಟಿಲ್ಲವಾದರೆ ಅದು ದೊಡ್ಡ ತಪ್ಪು ಎಂದು ಹೇಳಿದರು. ದೇಶವಿದೇಶದ ಸಮಸ್ತ ಶ್ರದ್ದಾಳುಗಳ ಕೇಂದ್ರ ಇದು, ಇಂತಹ ಕೇಂದ್ರದಲ್ಲಿ ಇಂತಹ ಘೋರ ಅಪಚಾರ ನಡೆಯಬಾರದು, ಎಸ್ಐಟಿ ತನಿಖೆ ನಡೆಸುತ್ತಿದೆ, ತಪ್ಪಿದ್ದಲ್ಲಿ ಪತ್ತೆಯಾಗಬೇಕು, ಸತ್ಯ ಸತ್ಯತೆ ಶೀಘ್ರವಾಗಿ ಹೊರಬರಬೇಕು, ತಪ್ಪಿತಸ್ಥರಿಗೆ ತಕ್ಕುದಾದ ಶಿಕ್ಷೆ ಖಂಡಿತಾ ಆಗಬೇಕು, ಅಲ್ಲಿನ ಸರ್ಕಾರದ ಮೇಲೆ ವಿಶ್ವಾಸ ಇದೆ ಎಂದು ಶ್ರೀಗಳು ಹೇಳಿದರು ನಾನು ಅಯೋಧ್ಯೆಗೆ ಹೋದಾಗಲೆಲ್ಲಾ ಕೆಲವು ಸಲಹೆ ನೀಡುತ್ತಿದ್ದೆ, ಟ್ರಸ್ಟ್‌ನ ಸಭೆಗಳಲ್ಲೂ ಕೂಡ ಪ್ರಸ್ತಾಪ ಮಾಡುತ್ತಿದ್ದೆ, ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು, ನಾನು ಅಲ್ಲಿಯೇ ನಿಂತು ನೋಡಲು ಸಾಧ್ಯವಿಲ್ಲ, ನಾನು ವಿಶ್ವಸ್ಥ ಮಂಡಳಿ ಸದಸ್ಯ, ಮಂಡಳಿ ಮೇಲೆ ವಿಶ್ವಾಸ ಇಟ್ಟು ಸಲಹೆ ಕೊಡುತ್ತಿದ್ದೆ, ಸಂಬಂಧಪಟ್ಟವರು ವಿಶ್ವಾಸಾರ್ಹ ವ್ಯಕ್ತಿಗಳಾಗಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಶ್ರೀಗಳು ಹೇಳಿದರು.

ಟ್ರಸ್ಟಿಗಳಲ್ಲೊಬ್ಬರಾದ ಚಂಪತ್ ರಾಯ್ ರಾಜೀನಾಮೆ ನೀಡಿರುವ ವಿಚಾರ ನನಗೆ ತಿಳಿಯದು, ಟ್ರಸ್ಟಿನ ವಾಟ್ಸಪ್ ಗ್ರೂಪಿನಲ್ಲಿ ಅವರು ಯಾವುದೇ ಮಾಹಿತಿ ನೀಡಿಲ್ಲ ಅಥವಾ ಅವರ ನಂಬರಿನಿಂದಲೂ ನನಗೆ ಮೆಸೇಜ್ ಬಂದಿಲ್ಲ, ಯಾವುದೇ ವಿಷಯಗಳಿದ್ದಾಗ ಅವರು ಮೆಸೇಜ್ ಮಾಡುತ್ತಿದ್ದರು, ಈಗ ಅಲ್ಲಿ ಏನು ಬೆಳವಣಿಗೆ ಆಗಿದೆ ಗೊತ್ತಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು. ಬೇರೆ ದೇವಾಲಯಗಳಲ್ಲಿ ಭಕ್ತರ ಸೇವೆಯ ಫಲಕ ಹಾಕಲಾಗುತ್ತದೆ, ಆದರೇ ಆಯೋಧ್ಯೆ ರಾಮಮಂದಿರದಲ್ಲಿ ಯಾವುದೇ ಸೇವೆಯ ಪಟ್ಟಿ ಹಾಕಬಾರದು ಎಂದು ಟ್ರಸ್ಟ್ ನಿಲುವು ತಳೆದಿದೆ, ಆದ್ದರಿಂದ ಅಲ್ಲಿ ಸೇವೆಗೆ ದೇಣಿಗೆ ನೀಡುವಂತಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಇತ್ತರಿಸಿದರು. ನಾವು ಮಂದಿರಕ್ಕೆ ಹಣ ಹಾಕುವುದರ ಬದಲು ಬಡವರಿಗೆ, ದೀನದಲಿತರಿಗೆ ಮನೆ ಕಟ್ಟಿಸಿ ಕೊಡಿ, ಅದೇ ರಾಮಸೇವೆ ಎಂದು ಕರೆ ನೀಡಿದ್ದೆವು, ಉಡುಪಿಯ ಪರಿಸರದಲ್ಲಿ ಅಂತಹ ಮನೆಗಳನ್ನು ಕಟ್ಟಿಸಿಕೊಟ್ಟು ರಾಮ ಸೇವೆ ಮಾಡಲಾಗುತ್ತಿದೆ, ಆದ್ದರಿಂದ ನೂರು ಕೆಜಿ ಬೆಳ್ಳಿ ಕೊಡುವುದರ ಬದಲು ಆ ಹಣದಲ್ಲಿ 1000 ಮನೆ ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ ನೊಂದಣಿಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಆರ್‌ಎಸ್‌ಎಸ್ ಸಂಘಟನೆಯನ್ನು ನೊಂದಣಿ ಮಾಡಿದ್ದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುತ್ತಿರಲಿಲ್ಲ ಎಂದಷ್ಟೇ ಹೇಳಿದರು.