ಫ್ಲೈಟ್‌ ಟಿಕೆಟ್ ರದ್ದತಿ ಶುಲ್ಕ ಇನ್ನಿಲ್ಲ

KannadaprabhaNewsNetwork |  
Published : Feb 27, 2026, 02:00 AM ISTUpdated : Feb 27, 2026, 05:18 AM IST
Ticket

ಸಾರಾಂಶ

ಇನ್ನು ಮುಂದೆ ವಿಮಾನ ಟಿಕೆಟ್‌ ಅನ್ನು ಬುಕ್‌ ಮಾಡಿದ 48 ಗಂಟೆ ಒಳಗೆ ಟಿಕೆಟ್‌ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್‌ಲೈನ್ಸ್‌ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ! ಹೌದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದೀಗ ಟಿಕೆಟ್‌ ಬುಕ್ಕಿಂಗ್‌ ಕುರಿತ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ

  ನವದೆಹಲಿ :  ಇನ್ನು ಮುಂದೆ ವಿಮಾನ ಟಿಕೆಟ್‌ ಅನ್ನು ಬುಕ್‌ ಮಾಡಿದ 48 ಗಂಟೆ ಒಳಗೆ ಟಿಕೆಟ್‌ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್‌ಲೈನ್ಸ್‌ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ!

ಹೌದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದೀಗ ಟಿಕೆಟ್‌ ಬುಕ್ಕಿಂಗ್‌ ಕುರಿತ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಈ ಆದೇಶ ಹೊರಡಿಸಿದೆ.

24 ಗಂಟೆಗಳಲ್ಲಿ ಹೆಸರು ತಿದ್ದುಪಡಿಗೆ ಅವಕಾಶ:

ಇದೇ ವೇಳೆ, ಟಿಕೆಟ್ ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರು ದೋಷವನ್ನು ಎತ್ತಿ ತೋರಿಸಿದಾಗ, ವಿಮಾನಯಾನ ಸಂಸ್ಥೆಗಳು ಅದೇ ವ್ಯಕ್ತಿಯ ಹೆಸರಿನ ತಿದ್ದುಪಡಿಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು ಎಂದು ಹೇಳಿದೆ.

ಈ ಎಲ್ಲಾ ವಿನಾಯ್ತಿಗಳು ಏರ್‌ಲೈನ್ಸ್‌ನ ವೆಬ್‌ಸೈಟ್‌ನಲ್ಲಿ ನೇರವಾಗಿ ಬುಕ್ ಮಾಡಿದ ಟಿಕೆಟ್‌ಗಳಿಗಷ್ಟೇ ಅನ್ವಯ ಆಗಲಿದೆ.

ಟ್ರಾವೆಲ್‌ ಏಜೆಂಟ್‌ ಅಥವಾ ಪೋರ್ಟಲ್‌ ಮೂಲಕ ಖರೀದಿಸಿದ್ದರೆ ಶುಲ್ಕ ವಿಧಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರ ಏರ್‌ಲೈನ್ಸ್‌ ಸಂಸ್ಥೆಗಳಿಗೇ ಬಿಡಲಾಗಿದೆ. ಏಕೆಂದರೆ ಈ ಏಜೆಂಟರನ್ನು ಏರ್‌ಲೈನ್ಸ್‌ ಸಂಸ್ಥೆಗಳೇ ನೇಮಿಸಿರುತ್ತವೆ ಎಂದು ಡಿಜಿಸಿಎ ಹೇಳಿದೆ.

ರೀಫಂಡ್‌ಗೆ ಕಾಲಮಿತಿ:

ಈ ನಡುವೆ, ಇನ್ನು ಮುಂದೆ ಟಿಕೆಟ್‌ ರದ್ದತಿ ಬಳಿಕದ ರೀಫಂಡ್‌ ಅಥವಾ ಮರುಪಾವತಿ ಪ್ರಕ್ರಿಯೆ 14 ಕೆಲಸದ ದಿನದೊಳಗೆ ಪೂರ್ಣಗೊಳ್ಳಬೇಕು ಎಂದೂ ಡಿಜಿಸಿಎ ಷರತ್ತು ವಿಧಿಸಿದೆ.

ಇದಲ್ಲದೆ ವೈದ್ಯಕೀಯ ತುರ್ತು ವಿಚಾರಗಳಿಗೆ ಸಂಬಂಧಿಸಿದ ಟಿಕೆಟ್‌ ರದ್ದತಿ ವಿಚಾರದಲ್ಲೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

ಪ್ರಯಾಣಿಕರಿಂದ ಟಿಕೆಟ್‌ ರದ್ದತಿ, ಬದಲಾವಣೆ ಮತ್ತು ವಿಳಂಬವಾಗಿ ಮರುಪಾವತಿ ಕುರಿತು ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಡಿಜಿಸಿಎ ಈ ನಿರ್ಧಾರ ತೆಗೆದುಕೊಂಡಿದೆ. ಡಿಜಿಸಿಎ ಈ ಕ್ರಮವನ್ನು ಪ್ರಯಾಣಿಕ ಸ್ನೇಹಿ ನಿರ್ಧಾರ ಎಂದು ಬಣ್ಣಿಸಲಾಗಿದ್ದು, ಇದರಿಂದ ಈವರೆಗೆ ಪ್ರಯಾಣಿಕರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿದಂತಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ
ಇಸ್ರೇಲ್‌-ಲೆಬನಾನ್‌ ಕದನಕ್ಕೆ 10 ದಿನ ವಿರಾಮ : ಟ್ರಂಪ್‌