ಇಂಡಿಗೋಗೆ ₹22 ಕೋಟಿ ದಂಡ, ಸಿಇಒಗೆ ಎಚ್ಚರಿಕೆ

KannadaprabhaNewsNetwork |  
Published : Jan 18, 2026, 02:00 AM IST
Indigo

ಸಾರಾಂಶ

ಕಳೆದ ಡಿಸೆಂಬರ್‌ನಲ್ಲಿ ಏಕಾಏಕಿ ಸಾವಿರಾರು ವಿಮಾನಗಳು ರದ್ದಾಗಿ ವಿಮಾನಯಾನ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) 22 ಕೋಟಿ ರು. ದಂಡ ವಿಧಿಸಿದೆ.  

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ಏಕಾಏಕಿ ಸಾವಿರಾರು ವಿಮಾನಗಳು ರದ್ದಾಗಿ ವಿಮಾನಯಾನ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) 22 ಕೋಟಿ ರು. ದಂಡ ವಿಧಿಸಿದೆ. ಜತೆಗೆ, ವಿಮಾನಗಳ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿಭಾಯಿಸದ ಸಿಇಒಗೂ ಎಚ್ಚರಿಕೆ ನೀಡಿದ್ದು, ಮುಂಬರುವ ದಿನಗಳಲ್ಲಿ ಇಂಥ ವ್ಯತ್ಯಯ ತಡೆಯುವ ಭರವಸೆಯ ಭಾಗವಾಗಿ 50 ಕೋಟಿ ರು. ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ನಿರ್ದೇಶಿಸಿದೆ.

ಪ್ರಕರಣ ಕುರಿತು ತನಿಖೆ ನಡೆಸಿದ್ದ ಡಿಜಿಸಿಎ

ಪ್ರಕರಣ ಕುರಿತು ತನಿಖೆ ನಡೆಸಿದ್ದ ಡಿಜಿಸಿಎ, ವಿಮಾನಯಾನ ಕ್ಷೇತ್ರದಲ್ಲಿ ಅತಿಹೆಚ್ಚು ಪಾಲು ಹೊಂದಿರುವ ಸಂಸ್ಥೆಯು ವಿಮಾನ ಸಂಚಾರ ನಿರ್ವಹಣೆಯಲ್ಲಿ ಸೋತಿತ್ತು. ಅದರ ಸಾಫ್ಟ್‌ವೇರ್‌ನಲ್ಲೂ ಸಮಸ್ಯೆಯಿದ್ದು, ದಿಢೀರ್‌ ಬದಲಾವಣೆ ಸಂಭಾಳಿಸುವುದು ಕಷ್ಟಕರವಾಗಿತ್ತು. ಸಮಸ್ಯೆ ಉದ್ಭವಿಸಿದಾಗ ಅದನ್ನು ನಿಭಾಯಿಸಿ ಪರಿಹರಿಸುವುದರಲ್ಲಿ ಹಿರಿಯ ಅಧಿಕಾರಿಗಳು ಸೋತಿದ್ದರು ಎಂದು ಹೇಳಿದೆ. ಅಲ್ಲದೆ ವಿಮಾನ ಕಾರ್ಯಾಚರಣೆ ಮತ್ತು ಬಿಕ್ಕಟ್ಟು ನಿರ್ವಹಣೆ ಮೇಲ್ವಿಚಾರಣೆಯ ಅಸಮರ್ಪಕತೆಗಾಗಿ ಸಿಇಒ ಪೀಟರ್‌ ಎಲ್ಬರ್ಸ್‌, ಸಿಒಒ ಮತ್ತು ಒಸಿಸಿಗೆ ಎಚ್ಚರಿಕೆ ನೀಡಲಾಗಿದೆ.

ಆಗಿದ್ದೇನು?:

ಸಂಭವನೀಯ ವೈಮಾನಿಕ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ, ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ನೀಡುವ ಡಿಜಿಸಿಎ ನಿಯಮಗಳನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರಲಾಗಿತ್ತು. ಇದರಿಂದ, 2 ವರ್ಷಗಳಿಂದ ಹೊಸ ಸಿಬ್ಬಂದಿಯನ್ನು ನೇಮಿಸಿಕೊಂಡಿರದ ಇಂಡಿಗೋ ಸಂಸ್ಥೆಯಲ್ಲಿ ಪೈಲಟ್‌ಗಳ ಕೊರತೆಯುಂಟಾಗಿ, ಸಾವಿರಾರು ವಿಮಾನಗಳು ತಡವಾಗಿದ್ದವು ಅಥವಾ ರದ್ದಾಗಿದ್ದವು. ಇದರಿಂದ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿ, ಪರಿಸ್ಥಿತಿ ನಿಭಾಯಿಸಲು ಆ ನಿಯಮವೇ ರದ್ದು ಮಾಡಬೇಕಾಗಿ ಬಂದಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಾಲಿವುಡ್‌ನಲ್ಲಿ ಕೋಮುತಾರತಮ್ಯ- 8 ವರ್ಷಗಳಿಂದ ನನಗೆ ಅವಕಾಶ ಸಿಗುತ್ತಿಲ್ಲ : ರೆಹಮಾನ್‌
ಮಹಾರಾಷ್ಟ್ರ ತಂಡಗಳಿಂದ ರಾಜ್ಯದಲ್ಲಿ ಡ್ರಗ್ಸ್‌ ಪತ್ತೆ- ನಮ್ಮ ಪೊಲೀಸ್‌ ವೈಫಲ್ಯ : ಸಿದ್ದು ಗರಂ