ತೆಲಂಗಾಣ: ಅಜರುದ್ದೀನ್‌ಗೆ ಕಾಂಗ್ರೆಸ್ ಟಿಕೆಟ್‌

KannadaprabhaNewsNetwork |  
Published : Oct 28, 2023, 01:15 AM IST
ಅಜರುದ್ದಿನ್‌ | Kannada Prabha

ಸಾರಾಂಶ

ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ಗೆ ಜುಬಿಲಿ ಹಿಲ್ಸ್‌ ಕ್ಷೇತ್ರದಿಂದ ಟಿಕೆಟ್‌ ನೀಡಿದೆ.

ನವದೆಹಲಿ: ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ಗೆ ಜುಬಿಲಿ ಹಿಲ್ಸ್‌ ಕ್ಷೇತ್ರದಿಂದ ಟಿಕೆಟ್‌ ನೀಡಿದೆ. ಅಲ್ಲದೇ ಮಾಜಿ ಸಂಸದ ಮಧು ಗೌಡ ಯಾಕ್ಷಿ, ಪೊನ್ನಮ್‌ ಪ್ರಭಾಕರ್‌, ಕಂಡಿ ಶ್ರೀನಿವಾಸ್‌ ರೆಡ್ಡಿ, ತುಮ್ಲಾ ನಾಗೇಶ್ವರರಾವ್‌ ಮತ್ತು ರಾಜ್‌ಗೋಪಾಲ್‌ ರೆಡ್ಡಿ ಅವರಿಗೂ ಟಿಕೆಟ್‌ ನೀಡಿದೆ. ಇಲ್ಲಿಯವರೆಗೆ ಕಾಂಗ್ರೆಸ್‌ 100 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದ್ದು, ಇನ್ನು 19 ಸ್ಥಾನಗಳು ಬಾಕಿ ಇವೆ. ಶುಕ್ರವಾರ ದೆಹಲಿಯಲ್ಲಿ ನಡೆದ ಪಕ್ಷದ ಚುನಾವಣಾ ಸಮಿತಿಯ ಸಭೆಯ ಬಳಿಕ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ