ಕಳೆದ ವರ್ಷ ಒಡಿಶಾದ ಬಾಲಾಸೋರ್‌ನಲ್ಲಿ ಸಂಭವಿಸಿದ 293 ಜನರನ್ನು ಬಲಿಪಡೆದ ರೈಲು ದುರಂತಕ್ಕೆ ಕಾರಣವಾದ ಆರೋಪಿಗಳಿಗೆ ಜಾಮೀನು ನೀಡಿದ ಒರಿಸ್ಸಾ ಹೈ ಕೋರ್ಟ್, ಅಪಘಾತಕ್ಕೆ ಸಿಗ್ನಲಿಂಗ್ ವ್ಯವಸ್ಥೆ ನಿರ್ವಹಿಸುತ್ತಿದ್ದ ರೈಲ್ವೇ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದೆ.
ನವದೆಹಲಿ: ಕಳೆದ ವರ್ಷ ಒಡಿಶಾದ ಬಾಲಾಸೋರ್‌ನಲ್ಲಿ ಸಂಭವಿಸಿದ 293 ಜನರನ್ನು ಬಲಿಪಡೆದ ರೈಲು ದುರಂತಕ್ಕೆ ಕಾರಣವಾದ ಆರೋಪಿಗಳಿಗೆ ಜಾಮೀನು ನೀಡಿದ ಒರಿಸ್ಸಾ ಹೈ ಕೋರ್ಟ್, ಅಪಘಾತಕ್ಕೆ ಸಿಗ್ನಲಿಂಗ್ ವ್ಯವಸ್ಥೆ ನಿರ್ವಹಿಸುತ್ತಿದ್ದ ರೈಲ್ವೇ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದೆ.
ಅಪಘಾತ ನಡೆದಂದು ಆ ಪ್ರದೇಶದಲ್ಲಿ 2 ಸಿಬ್ಬಂದಿಯನ್ನು ಸಿಗ್ನಲಿಂಗ್ ವ್ಯವಸ್ಥೆಯನ್ನು ನಿಭಾಯಿಸಲು ಬೇರೆ ವಿಭಾಗದಿಂದ ಕರೆಸಲಾಗಿತ್ತು ಎಂಬುದನ್ನು ಗಮನಿಸಿದ ಕೋರ್ಟ್, ‘ಆ ಸಿಬ್ಬಂದಿಗಳಿಗೆ ನಕ್ಷೆಗಳನ್ನೂ ನೀಡದೆ ಸಿಗ್ನಲಿಂಗ್ ಕೆಲಸಕ್ಕೆ ಕರೆಸಿಕೊಂಡದ್ದು, ಇಂತಹ ಗಂಭೀರ ವಿಷಯಗಳನ್ನು ರೈಲ್ವೆ ಇಲಾಖೆ ನಿಭಾಯಿಸುವ ರೀತಿ ಆತಂಕ ಸೃಷ್ಟಿಸಿದೆ. ಸಿಗ್ನಲ್‌ಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದವರೇ ಅಪಘಾತಕ್ಕೆ ಕಾರಣ’ ಎಂದಿದೆ. ಜೊತೆಗೆ, ಸಿಬಿಐ ಈ ಪ್ರಕರಣದ ತನಿಖೆ ನಡೆಸಿದ ರೀತಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ.
--
ಬೆಂಗಳೂರು ರೈಲಿನ 293 ಜನರ ಸಾವಾಗಿತ್ತು
2023ರ ಅ.2ರಂದು ಒಡಿಶಾದ ಬಾಲಾಸೋರ್‌ನ ಬಾಹಾನಗಾ ಬಜಾರ್ ಬಳಿ ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್- ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲು ಒಂದಕ್ಕೊಂದು ಡಿಕ್ಕಿಯಾಗಿ, 293 ಜನ ಸಾವನ್ನಪ್ಪಿದ್ದರು. ಸಿಗ್ನಲಿಂಗ್ ವೈಫಲ್ಯದ ಕಾರಣ ಲೂಪ್ ಲೈನ್‌ಗೆ ಬೆಂಗಳೂರು ರೈಲು ನುಗ್ಗಿ ನಿಂತ ರೈಲಿಗೆ ಹಾಗೂ ಗೂಡ್ಸ್ ರೈಲಿಗೆ ಡಿಕ್ಕಿ ಆಗಿತ್ತು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.