;Resize=(412,232))
ನವದೆಹಲಿ: ವಾರಕ್ಕೆ 5 ದಿನ ಕೆಲಸದ ಅವಧಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸೆ.28ರಿಂದ 30 ರ ತನಕ 3 ದಿನ ಮುಷ್ಕರಕ್ಕೆ ಕರೆ ನೀಡಿರುವ ಕಾರಣ, ಈ 3 ದಿನ ಎಸ್‌ಬಿಐ, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸೇರಿ ಹಲವು ಬ್ಯಾಂಕುಗಳು ಎಟಿಎಂ ಶುಲ್ಕ ಮನ್ನಾ ಮಾಡಿದೆ.
ಗ್ರಾಹಕರಿಗೆ ಈ ಅವಧಿಯಲ್ಲಿ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಅವು ಈ ಕ್ರಮ ಕೈಗೊಂಡಿವೆ. ಹೀಗಾಗಿ ಈ ಮುಷ್ಕರದ ಅವಧಿಯಲ್ಲಿ ಗ್ರಾಹಕರು ಎಷ್ಟು ಬೇಕಿದ್ದರೂ ಅಷ್ಟು ಸಲ ಹಣ ಡ್ರಾ ಮಾಡಿಕೊಳ್ಳಬಹುದು. ನಿಗದಿತ ಮಿತಿ ಮೀರಿ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಅವು ಹೇಳಿವೆ.
ಬ್ಯಾಂಕ್ ಸೇವೆ ವ್ಯತ್ಯಯ ಹಿನ್ನೆಲೆ ಗ್ರಾಹಕರು ಎಟಿಎಂ, ಆನ್‌ಲೈನ್ ಪಾವತಿಗಳನ್ನು ಅವಲಂಬಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.
ನವದೆಹಲಿ: ಅ.15ರಿಂದ ಯುಪಿಐ ಮೂಲಕ ಮಾಡಲಾಗುವ 2 ಸಾವಿರ ರು. ಮೇಲ್ಪಟ್ಟ ವ್ಯವಹಾರಗಳಿಗೆ ಎಂಡಿಆರ್ ವಿಧಿಸುವ ಕ್ರಮವು ಭಾರತಕ್ಕಷ್ಟೇ ಸೀಮಿತವಾಗಿರದೆ, ಡಿಜಿಟಲ್ ಪಾವತಿಗಾಗಿ ಆ ವೇದಿಕೆಯನ್ನು ಬಳಸುವ ಎಲ್ಲಾ 11 ದೇಶಗಳಿಗೆ ಅನ್ವಯಿಸಲಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
ಅರ್ಥಾತ್, ಭಾರತವನ್ನು ಹೊರತುಪಡಿಸಿ ಯುಪಿಐ ಬಳಸುತ್ತಿರುವ ಯುಎಇ, ಫ್ರಾನ್ಸ್, ಭೂತಾನ್, ಶ್ರೀಲಂಕಾ, ನೇಪಾಳ, ಸಿಂಗಾಪುರ, ಮಾರಿಷಸ್, ಕತಾರ್, ಕಾಂಬೋಡಿಯಾ, ಗ್ರೀಸ್ ಮತ್ತು ಮಾಲ್ಡೀವ್ಸ್‌ನಲ್ಲಿ ಯುಪಿಐ ಮಾಡಲಾಗುವ 2 ಸಾವಿರ ರು.ಗಿಂತ ಮೇಲ್ಪಟ್ಟ ವ್ಯವಹಾರಗಳಿಗೆ ಶೇ.0.04ರಷ್ಟು ಹಾಗೂ 75 ಸಾವಿರ ರು.ಗಿಂತ ಮೇಲ್ಪಟ್ಟ ವಹಿವಾಟುಗಳಿಗೆ ಗರಿಷ್ಠ 300 ರು. ಎಂಡಿಆರ್ ವಿಧಿಸಲಾಗುವುದು. ಆ ದೇಶಗಳಲ್ಲೂ ಶುಲ್ಕದ ಹೊರೆ ಗ್ರಾಹಕರ ಮೇಲೆ ಬೇಳದೆ, ವ್ಯಾಪಾರಿಗಳ ಹೆಗಲೇರಲಿದೆ.
ನವದೆಹಲಿ: ವಾರಕ್ಕೆ 5 ದಿನ ಕೆಲಸ ನಿಯಮ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಮುಷ್ಕರಕ್ಕೆ ಮುಂದಾಗಿರುವುಕ್ಕೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಇಲಾಖೆ, ‘ಬ್ಯಾಂಕ್ ನೌಕರರ ಸಂಘಗಳಿಗೆ ವಾರಕ್ಕೆ 5 ದಿನ ಕೆಲಸದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಈ ಹಿಂದೆ ಸರ್ಕಾರ ಭರವಸೆ ನೀಡಿತ್ತು ಎಂದು ಬ್ಯಾಂಕ್ ಸಂಘಗಳು ಹೇಳುತ್ತಿರುವುದು ಸುಳ್ಳು’ ಎಂದು ಸ್ಪಷ್ಟನೆ ನೀಡಿದೆ.
ವಾರಕ್ಕೆ 5 ದಿನ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘ ಸೆ.28ರಿಂದ 3 ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿದೆ. ಭಾರತೀಯ ಬ್ಯಾಂಕುಗಳ ಸಂಘ ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಸಮಯ 40 ನಿಮಿಷಗಳಷ್ಟು ಹೆಚ್ಚಿಸಿ ವಾರಕ್ಕೆ 5 ದಿನ ಮಾತ್ರ ಕೆಲಸ ಅವಧಿ ಪ್ರಸ್ತಾವನೆಯನ್ನು ಸರ್ಕಾರದ ಶಿಫಾರಸ್ಸಿಗೆ ಕಳುಹಿಸಿತ್ತು. ಅದು ಪರಿಶೀಲನೆ ಹಂತದಲ್ಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಇಲಾಖೆ ಸ್ಪಷ್ಟನೆ ನೀಡಿದೆ.