ಒಪ್ಪಂದ ಉಲ್ಲಂಘನೆ ಮಾಡಿದ ಪಾಕ್‌ಗೆ ಸೂಕ್ತ ಉತ್ತರ : ಸರ್ಕಾರದ ಎಚ್ಚರಿಕೆ

Published : May 11, 2025, 04:28 AM IST
Shehbaz Sharif

ಸಾರಾಂಶ

ಕದನವಿರಾಮ ಘೋಷಣೆ ಬಳಿಕ ಪಾಕ್‌ ಅದನ್ನು ಉಲ್ಲಂಘಿಸಿದ ಬಗ್ಗೆ ಭಾರತ ಕಿಡಿಕಾರಿದೆ.

ನವದೆಹಲಿ: ಕದನವಿರಾಮ ಘೋಷಣೆ ಬಳಿಕ ಪಾಕ್‌ ಅದನ್ನು ಉಲ್ಲಂಘಿಸಿದ ಬಗ್ಗೆ ಭಾರತ ಕಿಡಿಕಾರಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಶನಿವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನ ಸಂಜೆ ಒಪ್ಪಂದ ಮಾಡಿಕೊಂಡಿದ್ದವು ಕಳೆದ ಕೆಲವು ಗಂಟೆಗಳಿಂದ, ಈ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸುತ್ತಿದೆ. 

ಭಾರತೀಯ ಸೇನೆಯು ಈ ಗಡಿ ಒಳನುಗ್ಗುವಿಕೆಗೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಮತ್ತು ಅದನ್ನು ನಿಭಾಯಿಸುತ್ತಿದೆ. ಈ ಅತಿಕ್ರಮಣವು ಅತ್ಯಂತ ಖಂಡನೀಯ ಮತ್ತು ಪಾಕಿಸ್ತಾನ ಇದಕ್ಕೆ ಕಾರಣವಾಗಿದೆ. ಪಾಕಿಸ್ತಾನವು ಈ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಈ ಒಳನುಗ್ಗುವಿಕೆಯನ್ನು ತಡೆಯಲು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು
ಪುರುಷರ ಕೋಣೆಗೆ ಹೋಗ್ದೆ ಸ್ತ್ರೀ ರಾಜಕಾರಣಿಗಳು ಯಶಸ್ವಿ ಆಗಲ್ಲ: ಪಪ್ಪು