ಹೈದರಾಬಾದ್: ಕೋವಿಡ್ ಲಸಿಕೆ ಬಿಡುಗಡೆ ಮಾಡಿದ್ದ ಹೈದರಾಬಾದ್‌ನ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಕಾಲರಾ ರೋಗದ ವಿರುದ್ಧ ಅಭಿವೃದ್ಧಿಪಡಿಸಿದ ‘ಹಿಲ್ಚೋಲ್’ ಹೆಸರಿನ ಓರಲ್ ಲಸಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ.
ಅಮೆರಿಕ ಪ್ರಾಯೋಜಿತ ಹಿಲ್ಲೆಮನ್ ಲ್ಯಾಬೊರೇಟರಿಯಿಂದ ಪರವಾನಗಿ ಪಡೆದು ಹಿಲ್ಚೋಲ್ (ಬಿಬಿವಿ131) ಅಭಿವೃದ್ಧಿಪಡಿಸಿರುವುದಾಗಿ ಭಾರತ್ ಬಯೋಟೆಕ್ ಹೇಳಿಕೊಂಡಿದ್ದು, ಈ ಲಸಿಕೆಯ ಸುರಕ್ಷತೆ, ಇಮ್ಯುನೊಜೆನೆಸಿಟಿ ಹಾಗೂ ಪರಿಣಾಮಕಾರಿತ್ವವನ್ನು ಧೃಡಪಡಿಸಲಾಗಿದೆ. ಭಾರತದ ಔಷಧ ನಿಯಂತ್ರಕರು ಇದಕ್ಕೆ ಅನುಮತಿ ನೀಡಿದ್ದು, ವಿಶ್ವದ ಇತರೆಡೆ ಕೂಡ ಅನುಮತಿ ಪಡೆಯಲಾಗುತ್ತದೆ ಎಂದು ಎಂದಿದೆ.
ಕಾಲರಾ ನಿಯಂತ್ರಣಕ್ಕೆ ಇದು ಅಗತ್ಯವಾಗಿದ್ದು, ಪ್ರತಿ ವರ್ಷ ವಿಶ್ವಾದ್ಯಂತ 100 ದಶಲಕ್ಷ ಡೋಸ್ ಲಸಿಕೆಗಳಿಗೆ ಬೇಡಿಕೆಯಿರುತ್ತದೆ. ಈಗ ಕೇವಲ ಒಂದೇ ತಯಾರಿಕಾ ಕಂಪನಿಯಾಗಿರುವ ಕಾರಣ ಲಸಿಕೆಯ ಕೊರತೆ ಎದುರಾಗಿದೆ. ಕೊರತೆಯನ್ನು ಭಾರತ್ ಬಯೋಟೆಕ್ ನೀಗಿಸುವ ಆಶಾವಾದವಿದೆ.200 ದಶಲಕ್ಷ ಡೋಸ್ ಹಿಲ್ಚೋಲ್ ತಯಾರಿಸುವ ಸಾಮರ್ಥ್ಯದ ಘಟಕಗಳನ್ನು ಹೈದರಾಬಾದ್ ಮತ್ತು ಭುವನೇಶ್ವರದಲ್ಲಿ ಸ್ಥಾಪಿಸಲಾಗಿದೆ.