ಮುಂಬೈ: ನಗರದ ಹುಕ್ಕಾ ಪಾರ್ಲರ್ ಮೇಲೆ ಮಂಗಳವಾರ ತಡರಾತ್ರಿ ನಡೆದ ದಾಳಿಯಲ್ಲಿ ಹಾಸ್ಯ ಕಲಾವಿದ ಹಾಗೂ ಬಿಗ್ ಬಾಸ್ ಸೀಸನ್ 17ರ ವಿಜೇತ ಮುನಾವರ್ ಫಾರೂಖಿ ಸೇರಿದಂತೆ 14 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.ಖಚಿತ ಮಾಹಿತಿ ಮೇರೆಗೆ ಮುಂಬೈ ಪೊಲೀಸರು ಫೋರ್ಟ್‌ನ ಬೋರಾ ಬಜಾರ್‌ನಲ್ಲಿರುವ ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಬುಧವಾರ ಬೆಳಗಿನ ಜಾವದ ವರೆಗೂ ಕಾರ್ಯಾಚರಣೆ ಮುಂದುವರೆದಿತ್ತು. ಫಾರೂಖಿ ಸೇರಿದಂತೆ ಬಂಧಿತರ ವಿರುದ್ಧ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.