ನ್ಯೂಯಾರ್ಕ್: ಮಾನಸಿಕ ಖಿನ್ನತೆ ತಾವು ಪಡೆದುಕೊಳ್ಳುತ್ತಿರುವ ಕೆಟಾಮಿನ್ ಎಂಬ ಡ್ರಗ್ ತಾವು ಟೆಸ್ಲಾ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಲು ನೆರವು ನೀಡಿದೆ ಎಂದು ವಿಶ್ವದ ಟಾಪ್ ಶ್ರೀಮಂತರ ಪೈಕಿ ಒಬ್ಬರಾದ ಎಲಾನ್ ಮಸ್ಕ್ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಸ್ಕ್ ಡ್ರಗ್ಸ್ ಸೇವಿಸುತ್ತಾರೆ. ಅವರ ಈ ಅಭ್ಯಾಸ ಟೆಸ್ಲಾ ಸೇರಿದಂತೆ ಅವರ ವಿವಿಧ ಕಂಪನಿಗಳ ಆಡಳಿತ ಮಂಡಳಿ ಸದಸ್ಯರಲ್ಲಿ ಕಳವಳಕ್ಕೆ ಕಾರಣವಾಗಿದೆ ಎಂದು ವರದಿಯಾಗಿತ್ತು.
ಅದರ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ತಮ್ಮ ಡ್ರಗ್ಸ್ ಸೇವನೆ ಕುರಿತು ಮುಕ್ತವಾಗಿ ಮಾತನಾಡಿರುವ ಎಲಾನ್ ಮಸ್ಕ್ ‘ಕೆಲವೊಂದು ವೇಳೆ ನನ್ನ ಮಾನಸಿಕ ಸ್ಥಿತಿ ನಕಾರಾತ್ಮಕವಾಗಿರುತ್ತದೆ, ಅದನ್ನು ಮಾನಸಿಕ ಖಿನ್ನತೆ ಎನ್ನಬಹುದು.
ಆದರೆ ಇಂಥ ವೇಳೆ ವೈದ್ಯರ ಮೇರೆಗೆ ನಾನು ವಾರಕ್ಕೆ ಒಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಕೆಟಾಮಿನ್ ಸೇವಿಸುತ್ತೇನೆ. ಇದು ನಾನು ನಕಾರಾತ್ಮಕ ಮನಸ್ಥಿತಿಯಿಂದ ಹೊರಬರಲು ನೆರವಾಗುತ್ತದೆ.
ದಿನಕ್ಕೆ 16 ಗಂಟೆಗಿಂತ ಹೆಚ್ಚಿನ ಕೆಲಸ ಮಾಡಲು ನೆರವಾಗುತ್ತದೆ. ಆದರೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಅದು ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.