ಒವೈಸಿಗೆ ಬಿಜೆಪಿ ಫೈರ್‌ಬ್ರ್ಯಾಂಡ್‌ ಮಾಧವಿ ಲತಾ ಸೆಡ್ಡು

KannadaprabhaNewsNetwork |  
Published : Apr 13, 2024, 01:02 AM ISTUpdated : Apr 13, 2024, 05:44 AM IST
Madhavi Latha

ಸಾರಾಂಶ

ದೇಶದ ಅತಿಹೆಚ್ಚು ಜನಸಂಖ್ಯೆ ಇರುವ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಹೈದರಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಅಸಾದುದ್ದೀನ್‌ ಓವೈಸಿ ಕುಟುಂಬ ಕಳೆದ 40 ವರ್ಷಗಳಿಂದ ಭದ್ರಕೋಟೆ ನಿರ್ಮಿಸಿದೆ.

ದೇಶದ ಅತಿಹೆಚ್ಚು ಜನಸಂಖ್ಯೆ ಇರುವ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಹೈದರಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಅಸಾದುದ್ದೀನ್‌ ಓವೈಸಿ ಕುಟುಂಬ ಕಳೆದ 40 ವರ್ಷಗಳಿಂದ ಭದ್ರಕೋಟೆ ನಿರ್ಮಿಸಿದೆ. ಈ ಕ್ಷೇತ್ರದ ಮತದಾರರ ಪೈಕಿ ಮುಸ್ಲಿಮರೇ ಅಧಿಕವಾಗಿದ್ದರೂ (ಶೇ.70), ಬಿಜೆಪಿಯು ಮುಸ್ಲಿಮೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಲಕ್ಷಕ್ಕಿಂತಲೂ ಅಧಿಕ ಮತಗಳಿಕೆ ಮಾಡುವ ಮೂಲಕ ಪ್ರತಿಬಾರಿ ಅಸಾದುದ್ದೀನ್‌ ಓವೈಸಿ ಗೆಲುವನ್ನು ತುಸು ತ್ರಾಸಗೊಳಿಸುತ್ತಿದೆ.

ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಟ್ಟಾ ಆರ್‌ಎಸ್‌ಎಸ್‌ ಕಾರ್ಯಕರ್ತೆ, ಸಿಡಿಲು ನುಡಿಯ ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ವಲಯದಲ್ಲಿ ಗುರುತಿಸಿಕೊಳ್ಳದಿದ್ದರೂ ಹೊರಗೆ ತಮ್ಮ ವಾಕ್ಚಾತುರ್ಯದಿಂದ ಅಸಾಮಾನ್ಯ ಪ್ರಸಿದ್ಧಿ ಪಡೆದಿದ್ದಾರೆ. ಆಕೆಯ ಮೂಲಕ ಮುಸ್ಲಿಂ ಮಹಿಳೆಯರನ್ನು ಓಲೈಸುವ ಬಿಜೆಪಿಯ ಲೆಕ್ಕಾಚಾರ ಫಲಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಮತ್ತೊಂದೆಡೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿರುವ ಅಸಾದುದ್ದೀನ್‌ ಓವೈಸಿ ಮತ್ತೊಮ್ಮೆ ಕಣಕ್ಕಿಳಿದಿದ್ದು, ಸುಲಭ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಜೊತೆಗೆ ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷವು ಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ್ದು, ಅವರ ಹಾದಿಯನ್ನು ಮತ್ತಷ್ಟು ಸುಗಮಗೊಳಿಸುವ ಸಾಧ್ಯತೆ ಇದೆ. ಜೊತೆಗೆ ಬಿಆರ್‌ಎಸ್‌ನಿಂದಲೂ ಚಂದ್ರಶೇಖರ್‌ ರಾವ್‌ ಹಿಂದಿನಷ್ಟು ಆಕ್ರಮಣಕಾರಿ ಶೈಲಿಯಲ್ಲಿ ಪ್ರಚಾರ ಮಾಡದಿರುವುದು ಈ ಬಾರಿ ಕ್ಷೇತ್ರದಲ್ಲಿ ಇಬ್ಬರ ನಡುವಿನ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಳಿಸಬಹುದು.

ಸ್ಟಾರ್‌ ಕ್ಷೇತ್ರ-ಹೈದರಾಬಾದ್‌

ಮತದಾನದ ದಿನ - ಮೇ.13

ಒಟ್ಟು ವಿಧಾನಸಭಾ ಕ್ಷೇತ್ರಗಳು-7

ಪ್ರಮುಖ ಅಭ್ಯರ್ಥಿಗಳು

ಅಸಾದದುದ್ದೀನ್‌ ಓವೈಸಿ (ಎಐಎಂಐಎಂ), ಮಾಧವಿ ಲತಾ (ಬಿಜೆಪಿ), ಗದ್ದಂ ಶ್ರೀನಿವಾಸ್‌ ಯಾದವ್ (ಬಿಆರ್‌ಎಸ್‌)

2019ರ ಫಲಿತಾಂಶ:

ಗೆಲುವುಅಸಾದುದ್ದೀನ್‌ ಓವೈಸಿ (ಎಂಐಎಂ)

ಸೋಲುಭಗವಂತ ರಾವ್‌ (ಬಿಜೆಪಿ)

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ