ಸ್ವಂತ ಮಗಳನ್ನೇ ರೇಪ್‌ ಮಾಡಿಸಿದ್ದ ಬಿಜೆಪಿ ನಾಯಕಿ ಬಂಧನ!

KannadaprabhaNewsNetwork |  
Published : Jun 06, 2025, 12:20 AM ISTUpdated : Jun 06, 2025, 04:39 AM IST
ರೇಪ್ | Kannada Prabha

ಸಾರಾಂಶ

ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿಗೆ ಅಪಚಾರವೆಂಬಂತೆ, ಉತ್ತರಾಖಂಡದ ಹರಿದ್ವಾರದಲ್ಲಿ ಬಿಜೆಪಿ ನಾಯಕಿ ತನ್ನ ಬಾಯ್‌ಫ್ರೆಂಡ್‌ ಹಾಗೂ ಆತನ ಸ್ನೇಹಿತನಿಂದ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿದ್ದಾಳೆ.

 ಹರಿದ್ವಾರ: ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿಗೆ ಅಪಚಾರವೆಂಬಂತೆ, ಉತ್ತರಾಖಂಡದ ಹರಿದ್ವಾರದಲ್ಲಿ ಬಿಜೆಪಿ ನಾಯಕಿ ತನ್ನ ಬಾಯ್‌ಫ್ರೆಂಡ್‌ ಹಾಗೂ ಆತನ ಸ್ನೇಹಿತನಿಂದ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿದ್ದಾಳೆ.

ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವ ಮಹಿಳೆ. ಘಟನೆ ಸಂಬಂಧ ಅನಾಮಿಕಾ, ಆಕೆಯ ಬಾಯ್‌ಫ್ರೆಂಡ್‌ ಸುಮಿತ್‌ ಪತ್ವಾಲ್‌ ಮತ್ತು ಆತನ ಸ್ನೇಹಿತ ಶುಭಂನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಆಕೆಯನ್ನು ಪಕ್ಷದಿಂದ ಬಿಜೆಪಿ ವಜಾ ಮಾಡಿದೆ.

ಆಗಿದ್ದೇನು?:

ಅನಾಮಿಕಾ ಶರ್ಮಾ 2024ರವರೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದಳು. ನಂತರ ಪಕ್ಷದ ಸದಸ್ಯೆ ಆಗಿ ಮುಂದುವರಿದಿದ್ದಳು. ಆಕೆ ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಆದರೆ ಮಗಳು ಅಪ್ಪನೊಂದಿಗೆ ಉಳಿದುಕೊಂಡಿದ್ದಳು. ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು. ಈ ವೇಳೆ ಅನಾಮಿಕಾ, ಸುಮಿತ್‌ನ ಪ್ರೇಮ ಸಂಪಾದಿಸಿ ಆತನ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಳು. ಜನವರಿಯಿಂದ ಮಾರ್ಚ್‌ ವೇಳೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಮಗಳ ಮೇಲೆ ಸುಮಿತ್‌ ಹಾಗೂ ಆತನ ಸ್ನೇಹಿತ ಶುಭಂನಿಂದ ಅತ್ಯಾಚಾರ ಮಾಡಿಸಿದ್ದಳು. ಜೊತೆಗೆ ಇದನ್ನು ತಂದೆಗೆ ಹೇಳದಂತೆ ಬೆದರಿಕೆಯೂ ಹಾಕಿದ್ದಳು.

ಮಂಗಳವಾರ ನಡೆದ ಘಟನೆ ಬಗ್ಗೆ ಅಪ್ರಾಪ್ತೆ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ಪರಿಣಾಮ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆ ಸೇರಿ ವಿವಿಧ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

PREV
Read more Articles on

Recommended Stories

ಫೇಸ್‌ಬುಕ್ಕಲ್ಲಿ ರಾಜಕೀಯ ಜಾಹೀರಾತು ಸ್ಥಗಿತ: ಯುರೋಪ್‌ನಲ್ಲಿ ಜಾರಿ
ರಾಹುಲ್‌ ಗಾಂಧಿ 2ನೇ ಅಂಬೇಡ್ಕರ್‌: ಕಾಂಗ್ರೆಸ್‌ ನಾಯಕ ಉದಿತ್‌ ರಾಜ್