ಯುಪೀಲಿ ಹ್ಯಾಟ್ರಿಕ್‌ ಸಾಧನೆಗೆಬಿಜೆಪಿಯಿಂದ 3 ಎಸ್‌ ಮಂತ್ರಯುಪಿ ಎಲೆಕ್ಷನ್‌ನಲ್ಲಿ ಬಿಜೆಪಿ ಹೋರಾಟ

KannadaprabhaNewsNetwork |  
Published : Nov 23, 2026, 02:00 AM IST
ಬಿಜೆಪಿ  | Kannada Prabha

ಸಾರಾಂಶ

ಸಾಂಸ್ಕೃತಿಕ ರಾಷ್ಟ್ರೀಯತೆ ಹಾಗೂ ಸೈದ್ಧಾಂತಿಕ ವಿಚಾರಗಳ ಜತೆಗೇ ಕಾನೂನು ಮತ್ತು ಸುವ್ಯವಸ್ಥೆ, ಮಹಿಳಾ ಸುರಕ್ಷತೆ, ಅಭಿವೃದ್ಧಿ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡು ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ನಿರ್ಧರಿಸಿದೆ

- ಮಹಿಳಾ ಸುರಕ್ಷತೆ, ಕಾನೂನು ಸುವ್ಯವಸ್ಥೆ ವಿಚಾರವೂ ಪ್ರಸ್ತಾಪ

ನವದೆಹಲಿ: ಸಾಂಸ್ಕೃತಿಕ ರಾಷ್ಟ್ರೀಯತೆ ಹಾಗೂ ಸೈದ್ಧಾಂತಿಕ ವಿಚಾರಗಳ ಜತೆಗೇ ಕಾನೂನು ಮತ್ತು ಸುವ್ಯವಸ್ಥೆ, ಮಹಿಳಾ ಸುರಕ್ಷತೆ, ಅಭಿವೃದ್ಧಿ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡು ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ನಿರ್ಧರಿಸಿದೆ.

ಪಕ್ಷವು ಸಂಘಟನ್‌, ಸರ್ಕಾರ್‌ ಮತ್ತು ಸಹಯೋಗಿ ದಳ್‌ (ಸಂಘಟನೆ, ಸರ್ಕಾರ ಮತ್ತು ಮಿತ್ರಪಕ್ಷಗಳ‍ು) ಎಂಬ ‘ಮೂರು ಎಸ್‌’ಗಳ ಮೇಲೆ ಚುನಾವಣೆಯಲ್ಲಿ ಬಿಜೆಪಿ ಹೋರಾಟದ ತಂತ್ರಗಾರಿಕೆ ರೂಪಿಸಲಿದೆ ಎಂದು ಪಕ್ಷ ಹೇಳಿಕೊಂಡಿದೆ.

ನಾಗರಿಕ ಸಂಹಿತೆಯೂ ಪ್ರಮುಖ ವಿಚಾರ:

ಹಿಂದಿನ ಸಮಾಜವಾದಿ ಪಕ್ಷದ ಆಡಳಿತದ ಜತೆಗೆ ಹೋಲಿಕೆ, ಏಕರೂಪದ ನಾಗರಿಕ ಸಂಹಿತೆ ಕೂಡ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗುವ ನಿರೀಕ್ಷೆ ಇದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಪಕ್ಷ ಮೂರನೇ ಬಾರಿಗೆ ಅಧಿಕಾರ ಹಿಡಿದರೆ ರಾಜ್ಯದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಈಗಾಗಲೇ ಅಮಿತ್‌ ಶಾ ಹೇಳಿಕೆಯನ್ನೂ ನೀಡಿದ್ದಾರೆ.

2027ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಜನ ನಮ್ಮ ಬಗ್ಗೆ ಮೂರು ವಿಚಾರಗಳ ಆಧಾರದ ಮೇಲೆ ನಿರ್ಧಾರ ಮಾಡಲಿದ್ದಾರೆ. ರಾತ್ರಿ ವೇಳೆ ಅವರ ಹೆಣ್ಣುಮಕ್ಕಳು ಸುರಕ್ಷಿತೆ ಇದೆಯೇ? ಸರ್ಕಾರದ ಯೋಜನೆಗಳ ಲಾಭ ಅವರ ಮನೆಗೆ ತಲುಪಿದೆಯೇ? ಮತ್ತು ಒಂದು ಕಾಲದಲ್ಲಿ ಗೂಂಡಾರಾಜ್ಯವಾಗಿದ್ದ ಉತ್ತರಪ್ರದೇಶದಲ್ಲಿ ಬದಲಾವಣೆ ಆಗಿದೆಯೇ? ಎಂಬುದ ಆ ಮೂರು ವಿಚಾರಗಳಾಗಿವೆ.

ಕಾನೂನು ಸುವ್ಯವಸ್ಥೆ, ಮಹಿಳಾ ಸುರಕ್ಷತೆ ಮತ್ತು ಫಲಾನುಭವಿಗಳ ನೆಟ್‌ವರ್ಕ್‌ ನಮ್ಮ ಪ್ರಚಾರಾಂದೋಲನದ ಪ್ರಮುಖ ಭಾಗವಾಗಿರಲಿದೆ ಎಂದು ಪಕ್ಷ ಹೇಳಿಕೊಂಡಿದೆ.

ದೇಣಿಗೆ ಕಳವು ವಿಚಾರ ಪ್ರಸ್ತಾಪ:

ಈ ನಡುವೆ, ಪ್ರತಿಪಕ್ಷಗಳು ಮಾತ್ರ 10 ವರ್ಷದ ಯೋಗಿ ಆಡಳಿತದ ಹಿನ್ನಡೆಗಳು ಮತ್ತು ರಾಮ ಮಂದಿರ ದೇಣಿಗೆ ಕಳವು ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಸೈದ್ಧಾಂತಿಕ ಪ್ರತಿ ದಾಳಿ ನಡೆಸುವ ಸುಳಿವು ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಿಜೆಪಿ, ಆರೆಸ್ಸೆಸ್‌ನದ್ದು ಅಸಭ್ಯ,ಪುರುಷವಾದಿ ಮನಃಸ್ಥಿತಿ: ರಾಗಾ
ಮೋದಿಯಿಂದ ಕೇಜಿಚಿನ್ನಕ್ಕೆ ₹65 ಲಕ್ಷ ನಷ್ಟತಪ್ಪಿತು: ವ್ಯಾಪಾರಿಗಳು- ಖರೀದಿ ಮುಂದೂಡಿ ಎಂದಿದ್ದರಿಂದ ಖರೀದಿಸಲಿಲ್ಲ- ಅವರ ಕರೆ ನಿರ್ಲಕ್ಷಿಸಿದ್ದರೆ ಸಾಲಗಾರರಾಗುತ್ತಿದ್ದೆವು- ಪ್ರಧಾನಿಗೆ ಪತ್ರ ಬರೆದು ಸಂಘಟನೆ ಅಭಿನಂದನೆ