ಅರುಣಾಚಲದಲ್ಲಿ ಮತ್ತೆ ಜಯಗಳಿಸಿದ ಬಿಜೆಪಿ

KannadaprabhaNewsNetwork |  
Published : Jun 03, 2024, 12:31 AM ISTUpdated : Jun 03, 2024, 06:28 AM IST
ಅರುಣಾಚಲ ಪ್ರದೇಶ | Kannada Prabha

ಸಾರಾಂಶ

ಚೀನಾ ಗಡಿಗೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 60 ಸ್ಥಾನಗಳ ಪೈಕಿ ಬಿಜೆಪಿ 46 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿದೆ.

ಇಟಾನಗರ: ಚೀನಾ ಗಡಿಗೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 60 ಸ್ಥಾನಗಳ ಪೈಕಿ ಬಿಜೆಪಿ 46 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿದೆ.

ಮತ್ತೊಂದೆಡೆ ಸ್ಥಳೀಯ ಪಕ್ಷವಾಗಿರುವ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ ಕೇವಲ 5 ಸ್ಥಾನಗಳಿಗೆ ಸೀಮಿತವಾಗಿದ್ದು, ಕಾಂಗ್ರೆಸ್‌ ಬಾಮೆಂಗ್‌ ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿದೆ.

ಅರುಣಾಚಲ ಪ್ರದೇಶದಲ್ಲಿ 60 ಸ್ಥಾನಗಳ ವಿಧಾನಸಭೆಯಿದ್ದರೂ ಮುಖ್ಯಮಂತ್ರಿ ಪೆಮಾ ಖಂಡು ಅವರ ಮುಕ್ತೊಂಗ್‌ ಸೇರಿದಂತೆ 10 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ ಕೇವಲ 50 ಸ್ಥಾನಗಳಿಗೆ ಮಾತ್ರ ಏ.19ರಂದು ಚುನಾವಣೆ ನಡೆದಿತ್ತು. ಈ ಪೈಕಿ ಬಿಜೆಪಿ 36 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಎನ್‌ಪಿಪಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಮತ್ತೊಂದೆಡೆ ಶರದ್‌ ಪವಾರ್‌ ಅವರ ಎನ್‌ಸಿಪಿ ಇಂಡಿಯಾ ಮೈತ್ರಿಕೂಟದ ಭಾಗವಾಗಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್‌ ಕೇವಲ 1 ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟುಕೊಂಡಿದೆ. ಮತ್ತೊಂದೆಡೆ ಸ್ಥಳೀಯ ಪಕ್ಷವಾದ ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ ಎರಡು ಸ್ಥಾನಗಳಲ್ಲಿ ಗೆದ್ದಿದ್ದರೆ ಇತರರು 8 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ.

ಬಿಜೆಪಿ ಗಳಿಕೆ ಇಲ್ಲ:

ಬಿಜೆಪಿಗೆ ತಾಂತ್ರಿಕವಾಗಿ ಕಳೆದ ಬಾರಿಗಿಂತ ಐದು ಸ್ಥಾನಗಳಲ್ಲಿ ಹೆಚ್ಚು ಸ್ಥಾನ ಲಭಿಸಿದ್ದರೂ ಯಾವುದೇ ಗಳಿಕೆ ಕಂಡಿಲ್ಲ. ಏಕೆಂದರೆ 2024ರ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನ ಅರುಣಾಚಲ ವಿಧಾನಸಭೆಯಲ್ಲಿ ಜೆಡಿಯು, ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಂದ ಹಲವು ಜನ ಬಿಜೆಪಿಗೆ ಸೇರಿದ್ದರು. ಹಾಗಾಗಿ ಬಿಜೆಪಿಯ ಬಲ ಹೆಚ್ಚಿತ್ತು.

ಮತದಾರರಿಗೆ ಧನ್ಯವಾದ: ಮೋದಿ

ಅರುಣಾಚಲ ಪ್ರದೇಶದಲ್ಲಿ 2/3ರಷ್ಟು ಬಹುಮತದೊಂದಿಗೆ ಮರಳಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಪ್ರಧಾನಿ ಮೋದಿ ಟ್ವೀಟ್‌ ಮಾಡಿ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಮತದಾರರನ್ನು ಅಭಿನಂದಿಸಿದ್ದಾರೆ. ಅಲ್ಲದೆ ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತಷ್ಟು ಹುಮ್ಮಸ್ಸಿನಿಂದ ರಾಜ್ಯವನ್ನು ಪ್ರಗತಿಯ ಪಥಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅರುಣಾಚಲ ವಿಧಾನಸಭೆ (ಸ್ಥಾನ 60/ಬಹುಮತಕ್ಕೆ 31)

ಪಕ್ಷ20242019ವ್ಯತ್ಯಾಸ

ಬಿಜೆಪಿ4641+5

ಎನ್‌ಪಿಪಿ55-

ಕಾಂಗ್ರೆಸ್‌14-3

ಇತರರು810-2

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು