ನವದೆಹಲಿ: ಅಯೋಧ್ಯೆಗೆ ಭೇಟಿ ನೀಡಲು ಇಚ್ಛಿಸುವ ರಾಮಭಕ್ತರಿಗೆ ಜ.25ರಿಂದ 2 ತಿಂಗಳವರೆಗೆ ರೈಲು ಪ್ರಯಾಣದ ಅನುಕೂಲ ಕಲ್ಪಿಸಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಆದರೆ ಅಯೋಧ್ಯೆಗೆ ಪ್ರಯಾಣ ವೆಚ್ಚವನ್ನು ಭಕ್ತಾದಿಗಳೇ ಭರಿಸಬೇಕು. ಭಕ್ತರಿರುಗೆ ಪ್ರಯಾಣಕ್ಕೆ ಬೇಕಾದ ಅಗತ್ಯ ಸಹಾಯವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು. ಈ ಮೂಲಕ ಹೆಚ್ಚಿನ ಜನರಿಗೆ ರಾಮನ ದರ್ಶನ ಮಾಡಿಸಲು ಪಣ ತೊಡಬೇಕು ಎಂದು ಪಕ್ಷದಿಂದ ಸೂಚಿಸಲಾಗಿದೆ ಎಂದು ಮೂಳಗಳು ಹೇಳಿವೆ.ರಾಮಮಂದಿರ ಉದ್ಘಾಟನೆಗೆ ರಜನೀಕಾಂತ್‌ಗೆ ಆಹ್ವಾನ
ಚೆನ್ನೈ: ಅಯೋಧ್ಯೆ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ಪ್ರಾಣಪ್ರತಿಷ್ಠಾಪನೆಗೆ ಆಗಮಿಸುವಂತೆ ಖ್ಯಾತ ತಮಿಳು ನಟ ರಜನಿಕಾಂತ್‌ಗೆ ಆಹ್ವಾನ ನೀಡಲಾಗಿದೆ.
ಆರ್‌ಎಸ್‌ಎಸ್ ದಕ್ಷಿಣ ಪ್ರಾಂತದ ಸಂಚಾಲಕ ಮುಂತಾದವರು ನಗರದಲ್ಲಿರುವ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿ ಆಹ್ವಾನ ಪತ್ರಿಕೆ ನೀಡುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಜನಿಕಾಂತ್ ಅವರೂ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿ ಪ್ರಾಣಪ್ರತಿಷ್ಠಾಪನೆಗೆ ಆಗಮಿಸಲು ಸಹಮತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ರಾಮಮಂದಿರ ಉದ್ಘಾಟನೆಗೆ ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ವಿವಿಧ ಕ್ಷೇತ್ರದ 7000 ಅಪ್ರತಿಮ ಸಾಧಕರನ್ನು ಆಹ್ವಾನಿಸಲಾಗುತ್ತಿದೆ.