ಸಿಬಿಎಸ್‌ಇ ತ್ರಿಭಾಷಾ ನಿಯಮ ಹಿಂಪಡೆಯಿರಿ: ಕೇಂದ್ರಕ್ಕೆ ಅಣ್ಣಾಮಲೈ

KannadaprabhaNewsNetwork |  
Published : May 27, 2026, 02:00 AM IST
ಕೇಂದ್ರ | Kannada Prabha

ಸಾರಾಂಶ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಆದೇಶವನ್ನು ಹಿಂಪಡೆಯುವಂತೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಆಗ್ರಹಿಸಿದ್ದಾರೆ.

ಚೆನ್ನೈ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಆದೇಶವನ್ನು ಹಿಂಪಡೆಯುವಂತೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಇದು ಅನೇಕ ಪೋಷಕರಿಗೆ, ವಿಶೇಷವಾಗಿ ತಮಿಳುನಾಡಿನವರಿಗೆ ಆಘಾತವನ್ನುಂಟು ಮಾಡಿದೆ. ಪರಿಷ್ಕೃತ ಅಧಿಸೂಚನೆಯು ಜು.1ರಿಂದ ಜಾರಿಗೆ ಬರುವಂತೆ 9ನೇ ತರಗತಿ ವಿದ್ಯಾರ್ಥಿಗಳು 3 ಭಾಷೆಗಳನ್ನು ಕಲಿಯಬೇಕು ಎಂದು ಆದೇಶಿಸುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ಹೊಸ ಭಾಷೆಯನ್ನು ಕಲಿಯಬೇಕೆಂದು ನಿರೀಕ್ಷಿಸುವುದು ಮಕ್ಕಳ ಮೇಲೆ ಒತ್ತಡ ಹೇರುತ್ತದೆ. ಹಾಗಾಗಿ 2029-30ರಿಂದ 3 ಭಾಷೆಗಳನ್ನು ಪರಿಚಯಿಸುವ, ಅವುಗಳಲ್ಲಿ 2 ಸ್ಥಳೀಯ ಭಾಷೆಗಳಾಗಿರಬೇಕು ಎಂಬ ಹಿಂದಿನ ಅಧಿಸೂಚನೆಯನ್ನೇ ಜಾರಿಗೊಳಿಸಬೇಕು. ಪರಿಷ್ಕೃತ ಅಧಿಸೂಚನೆಯನ್ನು ಶಿಕ್ಷಣ ಸಚಿವಾಲಯವು ತಕ್ಷಣವೇ ಹಿಂತೆಗೆದುಕೊಳ್ಳಬೇಕು’ ಎಂದು ವಿನಂತಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದ ಸಂಕಷ್ಟ ನಿವಾರಿಸಲು 3ಎಫ್‌ ಸೂತ್ರ
ತಮಿಳ್ನಾಡಲ್ಲಿ ಆಪರೇಷನ್‌ ವಿಷಲ್‌!