ಬಾಲಕಿಯ ಮೊಬೈಲ್ ಗೀಳು ಬಿಡಿಸಲು ಬೌನ್ಸರ್‌ ನೇಮಕ

Published : May 04, 2026, 09:43 AM IST
Bouncers hired to break daughter s mobile addiction monthly salary of Rs 65000 fixed for bouncers

ಸಾರಾಂಶ

ಸೋಶಿಯಲ್‌ ಮೀಡಿಯಾ ಗೀಳು ಹತ್ತಿಸಿಕೊಂಡಿರುವ 16 ವರ್ಷದ ಬಾಲಕಿಯನ್ನು ಕಾವಲು ಕಾದು ಚಟ ಬಿಡಿಸಲು, ಆಕೆಯ ಪೋಷಕರು ತಿಂಗಳಿಗೆ 65,000 ರು. ಖರ್ಚು ಮಾಡಿ 4 ಬೌನ್ಸರ್‌ಗಳನ್ನು ನೇಮಿಸಿರುವ ವಿಚಿತ್ರ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

 ಅಹಮದಾಬಾದ್‌: ಸೋಶಿಯಲ್‌ ಮೀಡಿಯಾ ಗೀಳು ಹತ್ತಿಸಿಕೊಂಡಿರುವ 16 ವರ್ಷದ ಬಾಲಕಿಯನ್ನು ಕಾವಲು ಕಾದು ಚಟ ಬಿಡಿಸಲು, ಆಕೆಯ ಪೋಷಕರು ತಿಂಗಳಿಗೆ 65,000 ರು. ಖರ್ಚು ಮಾಡಿ 4 ಬೌನ್ಸರ್‌ಗಳನ್ನು ನೇಮಿಸಿರುವ ವಿಚಿತ್ರ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

24 ಗಂಟೆ ಕಾವಲು ಕಾಯುತ್ತಾರೆ.

ಈ ಬೌನ್ಸರ್‌ಗಳು 2 ಶಿಫ್ಟ್‌ಗಳಲ್ಲಿ ಆಕೆಯನ್ನು 24 ಗಂಟೆ ಕಾವಲು ಕಾಯುತ್ತಾರೆ.

ಬಾಲಕಿ ಮೊಬೈಲ್‌ ವ್ಯಸನಕ್ಕೆ ತುತ್ತಾಗಿದ್ದಳು. ಸೋಶಿಯಲ್‌ ಮೀಡಿಯಾದಲ್ಲಿ ಪದೇ ಪದೇ ತನ್ನ ಫೋಟೊಗಳನ್ನು ಹಂಚಿಕೊಳ್ಳುವುದು, ಇಡೀ ದಿನ ಲೈಕ್‌ಗಳನ್ನು ಪರಿಶೀಲಿಸುವುದು ಮಾಡುತ್ತಿದ್ದಳು. ಅಲ್ಲಿ ಪರಿಚಯವಾದವರನ್ನು ಮುಖತಃ ಭೇಟಿಯಾಗಲೂ ಪ್ರಾರಂಭಿಸಿದ್ದಳು. ತಂದೆ ತಾಯಿ ಮೊಬೈಲ್‌ ಕಸಿದರೆ ಟೀವಿ ಮೊದಲಾದ ವಸ್ತುಗಳನ್ನು ಅಪಾರ್ಟ್‌ಮೆಂಟ್‌ನಿಂದ ಹೊರಗೆ ಎಸೆಯುತ್ತಿದ್ದಳು. ಒಮ್ಮೆಯಂತೂ ಸಿಟ್ಟಿನಿಂದ ಸ್ವಂತ ತಾಯಿಯ ಮೇಲೆ ಹಲ್ಲೆಗೆ ಮುಂದಾಗಿದ್ದಳು. ವೈದ್ಯರ ಬಳಿ ಕರೆದೊಯ್ದಾಗ, ಆಕೆಗೆ ಚಿಕಿತ್ಸೆಯ ಜತೆಗೆ ನಿಯಂತ್ರಣದ ಕ್ರಮವೂ ಅಗತ್ಯವಿದೆ ಎಂದಿದ್ದರು. ಹೀಗಾಗಿ ಪೋಷಕರು ಬೌನ್ಸರ್‌ಗಳ ನೇಮಕ ಮಾಡಿದ್ದಾರೆ.

ಹಲವು ಪ್ರಕರಣ:

ಇದೇ ರೀತಿ ಸೂರತ್‌ನಲ್ಲಿ 17 ವರ್ಷದ ಹುಡುಗ ಗೇಮಿಂಗ್ ವ್ಯಸನದಿಂದ ಕೋಪಗೊಂಡು ತಂದೆಯ ಪ್ರೀತಿಯ ನಾಯಿಯನ್ನು ಹೊಡೆಯುತ್ತಿದ್ದ. ಅವನನ್ನು ಕಾವಲು ಕಾಯಲು ಬೌನ್ಸರ್‌ಗಳನ್ನು ನೇಮಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ, ಡ್ರಗ್ ವ್ಯಸನಕ್ಕೆ ಚಿಕಿತ್ಸೆ ಪಡೆದ ಹುಡುಗನನ್ನು ಮತ್ತೆ ಮಾದಕವಸ್ತುಗಳಿಗೆ ಅಂಟದಂತೆ ಕಾವಲು ಕಾಯಲು ಬೌನ್ಸರ್‌ಗಳನ್ನು ನಿಯೋಜಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಾಕ್‌, ಚೀನಾ ಮೇಲೆ ಬೆಂಗಳೂರಿನ ದೃಷ್ಟಿ ಮೂಲಕ ಕಣ್ಗಾವಲು ಸುಲಭ
- ಇಂದು 5 ರಾಜ್ಯಗಳ ವಿಧಾನಸಭಾ ಫಲಿತಾಂಶ - ಪಂಚ ಗದ್ದುಗೆ ಯಾರಿಗೆ?