ಪಟನಾ: ಬಿಹಾರದ ಅರರಿಯಾದಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ ರು ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದ ಸೇತುವೆ ಲೋಕಾರ್ಪಣೆಗೂ ಮುನ್ನವೇ ಕುಸಿದಿರುವ ಘಟನೆ ಮಂಗಳವಾರ ನಡೆದಿದೆ.
ಕುರ್ಸಕಾಂತ್ ಹಾಗೂ ಸಿಕ್ತಿ ಗ್ರಾಮಗಳ ನಡುವೆ ಈ ಸೇತುವೆ ನಿರ್ಮಿಸಲಾಗಿತ್ತು.ಇದು ಈ ವರ್ಷದಲ್ಲಿ ಬಿಹಾರದಲ್ಲಿ ನಡೆದ ಎರಡನೇ ಸೇತುವೆ ದುರಂತ. ಕಳೆದ ಮಾರ್ಚ್‌ನಲ್ಲಿ ಸೌಪಾಲ್ ಎಂಬಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಓರ್ವ ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದರು.
ಘಟನಾ ಸ್ಥಳಕ್ಕೆ ಸಿಕ್ತಿ ಶಾಸಕ ವಿಜಯ್ ಕುಮಾರ್ ಭೇಟಿ ನೀಡಿದ್ದಾರೆ.