ಕೇಂದ್ರ ಬಜೆಟ್ : ಶಿಕ್ಷಣ ವಲಯಕ್ಕೆ ವಿಶೇಷ ಆದ್ಯತೆ - ಉನ್ನತ ಶಿಕ್ಷಣಕ್ಕೆ 10 ಲಕ್ಷ ರು.ರವರೆಗೆ ಸಾಲ

KannadaprabhaNewsNetwork |  
Published : Jul 24, 2024, 12:25 AM ISTUpdated : Jul 24, 2024, 05:02 AM IST
ಶಿಕ್ಷಣ | Kannada Prabha

ಸಾರಾಂಶ

ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಶಿಕ್ಷಣ ವಲಯಕ್ಕೆ ವಿಶೇಷ ಆದ್ಯತೆಯನ್ನು ನೀಡಿದ್ದು, ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

ದೆಹಲಿ:  ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಶಿಕ್ಷಣ ವಲಯಕ್ಕೆ ವಿಶೇಷ ಆದ್ಯತೆಯನ್ನು ನೀಡಿದ್ದು, ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

ಉನ್ನತ ಶಿಕ್ಷಣಕ್ಕೆ 10 ಲಕ್ಷ.ರು ರವರೆಗೆ ಸಾಲ

ದೇಶಿಯ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡುವ ವಿಧ್ಯಾರ್ಥಿಗಳಿಗೆ 10 ಲಕ್ಷ ರು.ರವರೆಗೆ ಆರ್ಥಿಕ ನೆರವನ್ನು ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಶೇ. 3ರ ಬಡ್ಡಿದರದೊಂದಿಗೆ ಇ- ವೋಚರ್‌ಗಳನ್ನು ನೀಡಲಾಗುತ್ತದೆ.ಸರ್ಕಾರದ ಯೋಜನೆ ಮತ್ತು ನಿಯಮಗಳಿಗೆ ಯಾರು ಅರ್ಹರಾಗಿರುವುದಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ 10 ಲಕ್ಷ ರು.ರವರೆಗೆ, ಸಾಲ ನೀಡಲು ಮುಂದಾಗಿದೆ.

ಐಟಿಐ ಉನ್ನತೀಕರಣ:

ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಸಾವಿರ ಐಟಿಐ ಉನ್ನತೀಕರಿಸುವುದು. ಹೊಸ ಕೋರ್ಸ್‌ಗಳ ಕಲಿಕೆಗೆ ಆದ್ಯತೆ ನೀಡುವ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. 5 ವರ್ಷಗಳಲ್ಲಿ 20 ಲಕ್ಷ ವಿದ್ಯಾರ್ಥಿಗಳು ಕೌಶಲ್ಯವಂತರನ್ನಾಗಿ ಮಾಡಬೇಕು ಎನ್ನುವ ಗುರಿ ಹೊಂದಿದೆ. ಕೌಶಲ್ಯ ಅಭಿವೃದ್ಧಿ ವಲಯದಲ್ಲಿ ಮಾದರಿ ಸಾಲಗಳನ್ನು ನೀಡುವುದಾಗಿ ವಿತ್ತ ಸಚಿವೆ ಘೋಷಿಸಿದ್ದಾರೆ. ಮಾದರಿ ಸಾಲ ಸರ್ಕಾರದ ಬಡ್ತಿ ನಿಧಿಯಿಂದ 7.5 ಲಕ್ಷ ರು ತನಕ ಒಳಗೊಂಡಿರುತ್ತದೆ. ದೇಶದಲ್ಲಿ ಪ್ರತಿ ವರ್ಷ 25 ಸಾವಿರ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ನೆರವಾಗುವ ಸಾಧ್ಯತೆಯಿದೆ.

ಕೇಂದ್ರ ಬಜೆಟ್‌ನಲ್ಲಿ 1.48 ಲಕ್ಷ ಕೋಟಿ ಹಣವನ್ನು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಗಳಿಗೆ ಮೀಸಲಿರಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ