ನವದೆಹಲಿ: ಭಾರತೀಯ ರಿಸರ್ವ ಬ್ಯಾಂಕ್ ಇದೇ ತಿಂಗಳಾಂತ್ಯದಿಂದ ಪೇಟಿಎಂ ಬ್ಯಾಂಕ್‌ನ ಮೇಲೆ ವಿವಿಧ ರೀತಿಯ ನಿರ್ಬಂಧ ವಹಿಸಿರುವ ಹಿನ್ನೆಲೆಯಲ್ಲಿ ಎಲ್ಲ ವರ್ತಕರು ಇತರ ಹಣಕಾಸು ಸಂಸ್ಥೆಗಳಿಗೆ ತಮ್ಮ ವಹಿವಾಟುಗಳನ್ನು ವರ್ಗಾಯಿಸಿಕೊಳ್ಳುವಂತೆ ಅಖಿಲ ಭಾರತ ವರ್ತಕರ ಒಕ್ಕೂಟವಾದ ಸಿಎಐಟಿ ಮನವಿ ಮಾಡಿದೆ.
ಈ ಹಿನ್ನೆಲೆ ವರ್ತಕರು ಹಣದ ಸುರಕ್ಷತೆ ಮತ್ತು ಅನಿಯಮಿತವಾಗಿ ಹಣದ ವಹಿವಾಟು ಕೈಗೊಳ್ಳುವ ದೃಷ್ಟಿಯಿಂದ ಇತರ ನಂಬಿಕಸ್ಥ ಸಂಸ್ಥೆಗಳಿಗೆ ತಮ್ಮ ವ್ಯವಹಾರಗಳನ್ನು ವರ್ಗಾಯಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಕೆವೈಸಿ ನಿಯಮಗಳ ಪಾಲಿಸದ ಹಿನ್ನೆಲೆಯಲ್ಲಿ ಪೇಟಿಎಂ ಬ್ಯಾಂಕ್‌ನ ಮೇಲೆ ಆರ್‌ಬಿಐ ನಿರ್ಬಂಧ ಹೇರಿದೆ.