ಉತ್ತರಾಖಂಡ: ಏಕರೂಪ ಸಂಹಿತೆಗೆ ಸಂಪುಟ ಅಸ್ತು

KannadaprabhaNewsNetwork |  
Published : Feb 05, 2024, 01:48 AM ISTUpdated : Feb 05, 2024, 08:47 AM IST
ಧಾಮಿ | Kannada Prabha

ಸಾರಾಂಶ

ನಾಳೆ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಗೆ ಉತ್ತರಾಖಂಡ ಸಿದ್ಧವಾಗಿದೆ. ಈ ಮೂಲಕ ಸಂಹಿತೆ ಜಾರಿಗೆ ತರಲಿರುವ ದೇಶದ ಮೊದಲ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಲಿದೆ.

ಡೆಹ್ರಾಡೂನ್‌: ಉತ್ತರಾಖಂಡ ಸಚಿವ ಸಂಪುಟ ಭಾನುವಾರ ಅತಿ ಮಹತ್ವದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಸೋಮವಾರ ಆರಂಭವಾಗಲಿರುವ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ಇದರ ಮಂಡನೆಗೆ ವೇದಿಕೆ ಸಿದ್ಧವಾಗಿದೆ.

ಇದು ವಿಧಾನಸಭೆಯಲ್ಲೂ ಪಾಸಾದರೆ, ಸ್ವಾತಂತ್ರ್ಯಾನಂತರ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಭಾಜನವಾಗಲಿದೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ನ್ಯಾ। ರಂಜನಾ ಪ್ರಕಾಶ್‌ ದೇಸಾಯಿ ಅವರ ಸಮಿತಿ ಇತ್ತೀಚೆಗೆ ಸಲ್ಲಿಸಿದ ಸಂಹಿತೆಯ ಅಧ್ಯಯನ ವರದಿಯ ಬಗ್ಗೆ ಚರ್ಚಿಸಿ, ಅದರ ಮಂಡನೆಗೆ ಒಪ್ಪಿಗೆ ನೀಡಲಾಯಿತು.

ಮಂಗಳವಾರ ಮಂಡನೆಗೆ ತೀರ್ಮಾನಿಸಲಾಯಿತು. ಶನಿವಾರ ಸಂಪುಟದಲ್ಲಿ ಇದು ಮಂಡನೆಯಾದರೂ ನಿರ್ಣಯ ಮುಂದೂಡಲಾಗಿತ್ತು.

ಇದು ಜಾರಿಯಾದರೆ ರಾಜ್ಯದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಕ್ಕು- ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗಲಿದೆ. 

ಈವರೆಗೂ ಆಯಾ ಧರ್ಮಗಳು ಬೇರೆ ಬೇರೆ ವೈಯಕ್ತಿಕ ಕಾನೂನು ಅನುಸರಿಸುತ್ತಿದ್ದವು. ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿತ್ತು.

ಏನಿದು ಏಕರೂಪ ನಾಗರಿಕ ಸಂಹಿತೆ?
ಎಲ್ಲಾ ಧರ್ಮೀಯರಿಗೂ ವಿವಾಹ, ವಿಚ್ಛೇದನ, ಆಸ್ತಿ, ಭೂಮಿ ಮತ್ತು ಉತ್ತರಾಧಿಕಾರ ಕುರಿತು ವಿವಿಧ ಧರ್ಮಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ಅದನ್ನೆಲ್ಲಾ ರದ್ದುಪಡಿಸಿ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.

ಮೊದಲ ರಾಜ್ಯದ ಹಿರಿಮೆವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದರೆ ಇಂಥ ಕಾಯ್ದೆ ರೂಪಿಸಿದ ದೇಶದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಲಿದೆ. 

ಸದ್ಯ ಗೋವಾದಲ್ಲಿ ಮಾತ್ರವೇ ಈ ನಿಯಮ ಜಾರಿಯಲ್ಲಿದೆ. ಆದರೆ ಅದು ಪೋರ್ಚುಗೀಸರ ಕಾಲದಿಂದಲೂ ಇದೆ. ಸ್ವಾತಂತ್ರ್ಯಾನಂತರದ ಗೋವಾ ಸರ್ಕಾರ ಯಾವುದೇ ಹೊಸ ಕಾಯ್ದೆ ರೂಪಿಸಿಲ್ಲ.

ಏಕರೂಪ ಸಂಹಿತೆ: ಏನು ಶಿಫಾರಸು?
ಯುವತಿಯವರಿಗೆ ವಿವಾಹದ ವಯಸ್ಸು 18, ಯುವಕರಿಗೆ 21 ವರ್ಷಎಲ್ಲಾ ರೀತಿಯ ವಿವಾಹ ನೋಂದಣಿ ಮಾಡುವುದು ಕಡ್ಡಾಯವಿಚ್ಛೇದನ ಕೋರಲು ಪತಿ, ಪತ್ನಿ ಇಬ್ಬರಿಗೂ ಸಮಾನ ನಿಯಮ ಅನ್ವಯಪತಿ/ಪತ್ನಿ- ಇಬ್ಬರೂ ಜೀವಂತ ಇರುವಾಗ 2ನೇ ಮದುವೆ ಸಾಧ್ಯವಿಲ್ಲ. 

ಅಂದರೆ ಬಹು ಪತ್ನಿತ್ವ, ಬಹುಪತಿತ್ವಕ್ಕೆ ಬ್ರೇಕ್‌ನಿಖಾ ಹಲಾಲಾ, ತ್ರಿವಳಿ ತಲಾಖ್‌, ಇದ್ದತ್‌ನಂಥ ವಿಚ್ಛೇದನ ಪದ್ಧತಿ ನಿಷೇಧ ಆಸ್ತಿ, ಉತ್ತರದಾಯಿತ್ವದಲ್ಲಿ ಗಂಡು ಮಕ್ಕಳಷ್ಟೇ, ಹೆಣ್ಣು ಮಕ್ಕಳಿಗೂ ಸಮಾನ ಪಾಲುಲಿವ್‌ ಇನ್‌ ಸಂಬಂಧವನ್ನು ಸ್ವಯಂ ಘೋಷಣೆ ಮೂಲಕ ಪ್ರಕಟಿಸುವುದು ಅಗತ್ಯ ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ ಹೊಂದಿರುವ ಆದಿವಾದಿಗಳು ಸಂಹಿತೆ ವ್ಯಾಪ್ತಿಗಿಲ್ಲ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ