ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ ಬೆನ್ನಲ್ಲೇ, ಚುನಾವಣಾ ಆಯೋಗವು ಹರ್ಯಾಣ ಮತ್ತು ಮಹಾರಾಷ್ಟ್ರದ ಕಳೆದ 15 ವರ್ಷಗಳ ಮತದಾರರ ಪಟ್ಟಿಯನ್ನು ಬಹಿರಂಗ ಮಾಡಲಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
* 15 ವರ್ಷದ ಮತದಾರರ ಪಟ್ಟಿ ಬಹಿರಂಗಕ್ಕೆ ಚು.ಆಯೋಗ ನಿರ್ಧಾರ: ವರದಿ
- ಹರ್ಯಾಣ, ಮಹಾರಾಷ್ಟ್ರದ ಮತದಾರರ ಪಟ್ಟಿ ಬಿಡುಗಡೆ ಎಂದು ವರದಿ
- ನಿರ್ಧಾರ ಸ್ವಾಗತಾರ್ಹ, ಪಟ್ಟಿ ಬಹಿರಂಗದ ದಿನಾಂಕ ತಿಳಿಸಿ: ರಾಹುಲ್
ನವದೆಹಲಿ: ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ ಬೆನ್ನಲ್ಲೇ, ಚುನಾವಣಾ ಆಯೋಗವು ಹರ್ಯಾಣ ಮತ್ತು ಮಹಾರಾಷ್ಟ್ರದ ಕಳೆದ 15 ವರ್ಷಗಳ ಮತದಾರರ ಪಟ್ಟಿಯನ್ನು ಬಹಿರಂಗಡಲಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಈ ಎರಡೂ ರಾಜ್ಯಗಳ 2009ರಿಂದ 2024ರ ವರೆಗಿನ ಮತದಾರರ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಧ್ಯಮ ವರದಿ ಹೇಳಿದೆ, ಈ ಬಗ್ಗೆ ಆಯೋಗ ಅಧಿಕೃತವಾಗಿ ಏನೂ ಹೇಳಿಲ್ಲ. ಈ ಕುರಿತ ವರದಿಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಇದು ಚುನಾವಣಾ ಆಯೋಗದ ಮೊದಲ ಒಳ್ಳೆಯ ನಿರ್ಧಾರ’ ಎಂದು ಸ್ವಾಗತಿಸಿದ್ದಾರೆ. ಜತೆಗೆ, ‘ಈ ಪಟ್ಟಿಯನ್ನು ಎಂದು ಬಿಡುಗಡೆ ಮಾಡಲಾಗುವುದು ಎಂಬುದನ್ನು ಆಯೋಗ ನಿಖರವಾಗಿ ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ. ಕಳೆದ ಕೆಲ ದಿನಗಳಿಂದ, ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ವೇಳೆ ಮತದಾರರ ಪಟ್ಟಿಗೆ ನಕಲಿ ಮತದಾರರನ್ನು ಸೇರಿಸಲಾಗಿತ್ತು ಹಾಗೂ ಮತದಾನದ ಪ್ರಮಾಣವನ್ನು ಕೃತಕವಾಗಿ ಹೆಚ್ಚಿಸಲಾಗಿತ್ತು ಎಂದು ಗಾಂಧಿ ಆರೋಪಿಸುತ್ತಿದ್ದಾರೆ. ಇದನ್ನು ಚುನಾವಣಾ ಆಯೋಗ ಅಲ್ಲಗಳೆಯುತ್ತಲೇ ಬಂದಿತ್ತು. ಇದರ ನಡುವೆಯೇ ಪಟ್ಟಿ ಬಿಡುಗಡೆಯ ವಿಷಯ ಹೊರಬಿದ್ದಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.