ಪ್ರೀತ್ಸೋದ್ ತಪ್ಪಾ?: ಸುಪ್ರೀಂ

KannadaprabhaNewsNetwork |  
Published : Aug 20, 2025, 01:30 AM IST
ಸುಪ್ರೀಂ ಕೋರ್ಟ್‌ | Kannada Prabha

ಸಾರಾಂಶ

ಅಪ್ರಾಪ್ತ ವಯಸ್ಕರ ನಡುವಿನ ನಿಜವಾದ ಪ್ರೇಮ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಪ್ರೀತಿ ಮಾಡುವುದನ್ನು ಕ್ರಿಮಿನಲ್‌ ಕೃತ್ಯ ಎಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿದೆ.

ಅಪ್ರಾಪ್ತರ ಪ್ರೇಮ ಅತ್ಯಾಚಾರವಲ್ಲ: ಕೋರ್ಟ್‌

ನವದೆಹಲಿ: ಅಪ್ರಾಪ್ತ ವಯಸ್ಕರ ನಡುವಿನ ನಿಜವಾದ ಪ್ರೇಮ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಪ್ರೀತಿ ಮಾಡುವುದನ್ನು ಕ್ರಿಮಿನಲ್‌ ಕೃತ್ಯ ಎಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿದೆ.

ಸಮ್ಮತಿಯ ಪ್ರೀತಿಗೆ ಇರುವ ವಯೋಮಿತಿಯನ್ನು 18ರಿಂದ 16 ವರ್ಷಗಳಿಗೆ ಇಳಿಸುವ ಕುರಿತು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ.ವಿ. ನಾಗರತ್ನಾ ಹಾಗೂ ನ್ಯಾ. ಆರ್. ಮಹಾದೇವನ್ ಅವರ ಪೀಠ, ಪೋಕ್ಸೋ ಕಾಯ್ದೆಯ ದುರುಪಯೋಗದ ಕುರಿತು ಕಳವಳ ವ್ಯಕ್ತಪಡಿಸಿತು.

‘ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯುವಕ-ಯುವತಿಯರು ಒಟ್ಟಿಗೆ ಕಲಿಯುವಾಗ ಪರಸ್ಪರ ಭಾವನೆ ಬೆಳೆಸಿಕೊಳ್ಳುತ್ತಾರೆ. ಪ್ರೀತಿಯನ್ನು ಅಪರಾಧ ಎಂದು ಹೇಳಬಹುದೇ? ಅತ್ಯಾಚಾರದ ಅಪರಾಧಕ್ಕೂ ಇದಕ್ಕೂ ವ್ಯತ್ಯಾಸವಿದೆ. ನಿಜವಾದ ಪ್ರೀತಿಯ ಸಂಬಂಧಗಳಲ್ಲಿ, ಯುವಕ-ಯುವತಿಯರು ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ಬಯಸಿದರೆ, ಅಂತಹ ಪ್ರಕರಣಗಳನ್ನು ಅಪರಾಧದಂತೆ ಪರಿಗಣಿಸಬಾರದು’ ಎಂದು ಪೀಠ ತಿಳಿಸಿತು.

‘ಹೆಣ್ಣಿನ ಪೋಷಕರು ತಮ್ಮ ಮಗಳು ಪ್ರೀತಿಸುತ್ತಿರುವ ಹುಡುಗನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ, ಜೈಲಿಗೆ ಕಳುಹಿಸುವ ಘಟನೆಗಳು ನಡೆಯುತ್ತಿವೆ. ಕೆಲವೊಮ್ಮೆ ಮಕ್ಕಳು ಓಡಿಹೋಗಿದ್ದನ್ನು ಮರೆಮಾಚಲು ಕೂಡ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಇದು ಸಮಾಜದ ಕಠೋರ ವಾಸ್ತವ’ ಎಂದು ಕಳವಳ ವ್ಯಕ್ತಪಡಿಸಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!