ಬಿಸ್ಲೇರಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ: ವರದಿ

Published : Nov 23, 2026, 12:34 PM IST
Bisleri Water

ಸಾರಾಂಶ

ಪ್ಯಾಕೇಜ್ಡ್ ಕುಡಿಯುವ ನೀರು ಎನ್ನುತ್ತಿದ್ದಂತೆ ನೆನಪಾಗುವ ಬಿಸ್ಲೇರಿಯ ಕೆಲ ಮಾದರಿಗಳು ‘ಅಸುರಕ್ಷಿತ’ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ, ಬಿಸ್ಲೆರಿ ಇಂಟರ್‌ನ್ಯಾಷನಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿರುವುದಾಗಿ ಆಹಾರ ನಿಯಂತ್ರಕ ಸಂಸ್ಥೆ ಎಫ್‌ಎಸ್‌ಎಸ್‌ಎಐ ಭಾನುವಾರ ತಿಳಿಸಿದೆ

ನವದೆಹಲಿ: ಪ್ಯಾಕೇಜ್ಡ್ ಕುಡಿಯುವ ನೀರು ಎನ್ನುತ್ತಿದ್ದಂತೆ ನೆನಪಾಗುವ ಬಿಸ್ಲೇರಿಯ ಕೆಲ ಮಾದರಿಗಳು ‘ಅಸುರಕ್ಷಿತ’ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ, ಬಿಸ್ಲೆರಿ ಇಂಟರ್‌ನ್ಯಾಷನಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿರುವುದಾಗಿ ಆಹಾರ ನಿಯಂತ್ರಕ ಸಂಸ್ಥೆ ಎಫ್‌ಎಸ್‌ಎಸ್‌ಎಐ ಭಾನುವಾರ ತಿಳಿಸಿದೆ. ಆದರೆ ಯಾವ ವಿಧದ ಬಿಸ್ಲೇರಿ ನೀರು ಸೇವನೆಗೆ ಅನರ್ಹವಾಗಿದೆ ಎಂಬುದನ್ನು ಅದು ಬಹಿರಂಗಪಡಿಸಿಲ್ಲ.

ನಿಗದಿತ ಬ್ರೋಮೇಟ್ ಮಿತಿಗಳನ್ನು ಅನುಸರಿಸಲಾಗಿಲ್ಲ

ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೆಟ್‌ ಲಿಮಿಟೆಡ್‌ ಆವರಣದಿಂದ ಪ್ಯಾಕ್ ಮಾಡಿದ (ಮಿನರಲ್‌ ವಾಟರ್‌ ಅಲ್ಲದ) ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದ್ದು, ಆ ವೇಳೆ ನಿಗದಿತ ಬ್ರೋಮೇಟ್ ಮಿತಿಗಳನ್ನು ಅನುಸರಿಸಲಾಗಿಲ್ಲ ಎಂಬುದು ಪತ್ತೆಯಾಗಿದೆ. ಆದ್ದರಿಂದ ಅದನ್ನು ಎಫ್‌ಎಸ್‌ಎಸ್‌ ಕಾಯ್ದೆ, 2006 ರ ಅಡಿಯಲ್ಲಿ ಅಸುರಕ್ಷಿತವೆಂದು ಘೋಷಿಸಲಾಗಿದೆ ಎಂದು ನಿಯಂತ್ರಕ ಸಂಸ್ಥೆ ಎಕ್ಸ್‌ ಪೋಸ್ಟ್‌ ಮೂಲಕ ಮಾಹಿತಿ ನೀಡಿದೆ.

ಅತ್ತ ಕಂಪನಿಯು ಮೇಲ್ಮನವಿ ಸಲ್ಲಿಸಿದ್ದರಿಂದ ನೀರಿನ ಮಾದರಿಯನ್ನು ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಅಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ ಪತ್ತೆಯಿಂದಾಗಿ ಅದನ್ನು ‘ಅಸುರಕ್ಷಿತ’ ಎಂದು ಘೋಷಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.

ಮುಂದುವರಿದ ಪ್ರಹಾರ:

ಬಿಸ್ಲೇರಿ ಜತೆಗೆ ಇನ್ನೂ ಕೆಲ ಆಹಾರ ತಯಾರಿಕಾ ಸಂಸ್ಥೆಗಳ ವಿರುದ್ಧವೂ ಎಫ್‌ಎಸ್‌ಎಸ್‌ಎಐ ಕ್ರಮ ಕೈಗೊಂಡಿದೆ. ‘ಆಶಾ ಕನ್ಫೆಕ್ಷನರಿ’ ತಯಾರಿಸಿದ ಚಾಕೊಲೇಟ್ ಭರಿತ ಕುಕೀಸ್‌ನಲ್ಲಿ ಕಾರ್ಮೋಸಿನ್ ಎಂಬ ಕಲರಿಂಗ್‌ ಏಜೆಂಟ್‌ (ತಿನಿಸಿಗೆ ಆಕರ್ಷಕ ಬಣ್ಣ ನೀಡಲು ಬಳಸುವ ಪದಾರ್ಥ) ಅನ್ನು ಸೇರಿಸಲಾಗಿದ್ದರೂ ಅದನ್ನು ಕುಕೀಸ್‌ ಪ್ಯಾಕೆಟ್‌ ಮೇಲೆ ಮುದ್ರಿಸದ ಹಿನ್ನೆಲೆಯಲ್ಲಿ, ಮಾರುಕಟ್ಟೆಯಲ್ಲಿರುವ ಆ ಉತ್ಪನ್ನಗಳನ್ನು ಹಿಂಪಡೆಯುವಂತೆ ಆದೇಶಿಸಿದೆ.

ಜತೆಗೆ, ಆಶಾ ಕುಕೀಸ್‌ನಲ್ಲಿ ನಿಗದಿತ ಗರಿಷ್ಠ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಟಾರ್ಟ್ರಾಜೈನ್ ಕಂಡುಬಂದಿದೆ. ಇದಲ್ಲದೆ, ನಿಚೇಧಿತ ‘ಸನ್‌ಸೆಟ್ ಎಲ್ಲೋ ಎಫ್‌ಸಿಎಫ್’ ಎಂಬ ಬಣ್ಣಕಾರಕವೂ ಅದರಲ್ಲಿ ಇದ್ದುದು ಪರೀಕ್ಷೆ ವೇಳೆ ಪತ್ತೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಈ ವಾರ ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ
24 ಗಂಟೇಲಿ ವಿಡಿಯೋ ಗೇಮ್‌ ಜಿಟಿಎ 6 ₹ 35000 ಕೋಟಿ ಗಳಿಕೆ