ಮುಂಬೈ- ಮನ್ಮಾಡ್‌ಗೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಎಟಿಎಂ ಸೇವೆ ಆರಂಭ

KannadaprabhaNewsNetwork |  
Published : Apr 17, 2025, 12:00 AM ISTUpdated : Apr 17, 2025, 06:27 AM IST
ಎಟಿಎಂ | Kannada Prabha

ಸಾರಾಂಶ

ಭಾರತೀಯ ರೈಲ್ವೆ ಇದೇ ಮೊದಲ ಬಾರಿಗೆ ರೈಲಿನೊಳಗೂ ಎಟಿಎಂ ಸೌಲಭ್ಯ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ಹೀಗಾಗಿ ಅಗತ್ಯವಿದ್ದವರು ಇನ್ನು ರೈಲಿನೊಳಗೆ ಹಣ ವಿತ್‌ಡ್ರಾ ಮಾಡಬಹುದು.

 ಮುಂಬೈ: ಭಾರತೀಯ ರೈಲ್ವೆ ಇದೇ ಮೊದಲ ಬಾರಿಗೆ ರೈಲಿನೊಳಗೂ ಎಟಿಎಂ ಸೌಲಭ್ಯ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ಹೀಗಾಗಿ ಅಗತ್ಯವಿದ್ದವರು ಇನ್ನು ರೈಲಿನೊಳಗೆ ಹಣ ವಿತ್‌ಡ್ರಾ ಮಾಡಬಹುದು. 

ದೇಶದಲ್ಲಿ ಇಂಥ ಸೇವೆ ಇದೇ ಮೊದಲು.ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ಮನ್ಮದ್‌ ನಡುವೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ ರೈಲಿನ ಎಸಿ ಬೋಗಿಯಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ. ಪಂಚವಟಿ ರೈಲಿನ ಎಲ್ಲಾ 22 ಬೋಗಿಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದು, ಎಲ್ಲ ಪ್ರಯಾಣಿಕರು ಇದರ ಸೌಲಭ್ಯ ಪಡೆಯಬಹುದು. ಅಂತರ್ಜಾಲ ಸಿಗ್ನಲ್‌ ಅತ್ಯಂತ ಕನಿಷ್ಠ ಇರುವ ಕೆಲವೊಂದು ಪ್ರದೇಶ ಹೊರತುಪಡಿಸಿದರೆ ಪ್ರಾಯೋಗಿಕ ಪರೀಕ್ಷೆ ವೇಳೆ ರೈಲು ಸಂಚರಿಸುವ ಮಾರ್ಗದುದ್ದಕ್ಕೂ ಎಟಿಎಂ ಸಮರ್ಪಕವಾಗಿ ಸೇವೆ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಅನುಕೂಲ

ಈ ಎಟಿಎಂನಿಂದ ಕೇವಲ ಹಣ ವಿತ್‌ ಡ್ರಾ ಮಾತ್ರವಲ್ಲ, ಇದರ ಜೊತೆಗೆ ಚೆಕ್‌ ಬುಕ್ ಆರ್ಡರ್‌ ಪಡೆಯಬಹುದು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ ಕೂಡ ಪಡೆಯಬಹುದು.

ಸುರಕ್ಷತೆಗೂ ಆದ್ಯತೆ

ಇನ್ನು ಎಟಿಎಂ ಸುರಕ್ಷತೆ ದೃಷ್ಟಿಯಿಂದಲೂ ಕ್ರಮ ಕೈಗೊಳ್ಳಲಾಗಿದ್ದು, ಎಟಿಎಂಗೆ ಶಟರ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ 24 ಗಂಟೆಯೂ ಸಿಸಿಟೀವಿ ಕಣ್ಗಾವಲು ಇದಕ್ಕೆ ಇರಲಿದೆ. 1987ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಎಟಿಎಂ ಜಾರಿಗೆ ಬಂದಿತು. ಅದಾಗಿ 38 ವರ್ಷಗಳ ಬಳಿಕ ರೈಲಿನಲ್ಲಿ ಅಳವಡಿಸಲಾಗಿದ್ದು, ಒಂದು ವೇಳೆ ಇದು ಯಶಸ್ವಿಯಾದರೆ ಇತರ ರೈಲುಗಳಲ್ಲಿಯೂ ಈ ಸೌಲಭ್ಯ ಕಲ್ಪಿಸುವ ಸಾಧ್ಯತೆಯಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ