ಸಿಬಿಎಸ್ಇ 10, 12: ಕಳೆದ ಸಲಕ್ಕಿಂತ ಉತ್ತಮ ಫಲಿತಾಂಶ

KannadaprabhaNewsNetwork |  
Published : May 14, 2024, 01:06 AM ISTUpdated : May 14, 2024, 04:45 AM IST
ಸಿಬಿಎಸ್‌ಇ | Kannada Prabha

ಸಾರಾಂಶ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಶೇ.93.60 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದೇ ವೇಳೆ, 12ನೇ ಕ್ಲಾಸ್‌ ಪರೀಕ್ಷೆಯಲ್ಲಿ ಶೇ.87.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

 ನವದೆಹಲಿ :  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಶೇ.93.60 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದೇ ವೇಳೆ, 12ನೇ ಕ್ಲಾಸ್‌ ಪರೀಕ್ಷೆಯಲ್ಲಿ ಶೇ.87.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

10 ಹಾಗೂ 12ನೇ ಕ್ಲಾಸ್‌ ಫಲಿತಾಂಶಗಳು ಕಳೆದ ಸಲಕ್ಕಿಂತ ಕೊಂಚ ಉತ್ತಮವಾಗಿವೆ. ಕಳೆದ ಸಾಲಿನಲ್ಲಿ 10ನೇ ಕ್ಲಾಸಲ್ಲಿ ಶೇ.93.12 ಹಾಗೂ 12ನೇ ಕ್ಲಾಸ್‌ನಲ್ಲಿ ಶೇ.87.33ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದರು.

10ನೇ ಕ್ಲಾಸ್‌:  10ನೇ ತರಗತಿಯಲ್ಲಿ ಒಟ್ಟಾರೆ ಶೇ.93.6 ಫಲಿತಾಂಶ ಬಂದಿದೆ. ಈ ಪೈಕಿ ಶೇ.94.75 ರಷ್ಟು ಹುಡುಗಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಾಸಾದ ಹುಡುಗಿಯರ ಪ್ರಮಾಣ ಬಾಲಕರಿಗಿಂತ ಶೇ.2.04 ಹೆಚ್ಚಿದೆ. ಈ ಮೂಲಕ ಮೇಲುಗೈ ಸಾಧಿಸಿದ್ದಾರೆ.

47,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಮತ್ತು 2.12 ಲಕ್ಷಕ್ಕೂ ಹೆಚ್ಚು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.12ನೇ ಕ್ಲಾಸ್‌:

ಈ ಸಲ 12ನೇ ತರಗತಿಯ ಶೇ. 87.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಒಟ್ಟು ತೇರ್ಗಡೆ ಪ್ರಮಾಣ ಶೇ.87.33 ಆಗಿತ್ತು.ಶೇ.91.52 ರಷ್ಟು ಹುಡುಗಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ, ಹುಡುಗರಿಗಿಂತ ಇದು ಶೇ.6.4ರಷ್ಟು ಹೆಚ್ಚು.

ಒಟ್ಟು 24,068 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಮತ್ತು 1,16,145 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 12ನೇ ಕ್ಲಾಸ್‌ನಲ್ಲಿ ಶೇ.90 ಮತ್ತು ಶೇ.95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಕ್ರಮವಾಗಿ 1,400 ಮತ್ತು 4,000ರಷ್ಟು ಹೆಚ್ಚಿದ್ದಾರೆ.

ಈ ವರ್ಷ 1.16 ಲಕ್ಷ ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಮತ್ತು 24,068 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಕಳೆದ ವರ್ಷ 1.12 ಲಕ್ಷ ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಮತ್ತು 22,622 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದರು.

ಮೆರಿಟ್‌ ಪಟ್ಟಿ ಇಲ್ಲ:ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು ಯಾವುದೇ ಮೆರಿಟ್ ಪಟ್ಟಿ ಇರುವುದಿಲ್ಲ ಸಿಬಿಎಸ್‌ಇ ಹೇಳಿದೆ. ಅಲ್ಲದೆ, ಅಂಕಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಭಾಗಗಳನ್ನು (ಡಿವಿಷನ್‌/ಗ್ರೇಡ್) ನೀಡುವುದನ್ನು ರದ್ದುಗೊಳಿಸಲು ಮಂಡಳಿಯು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜು.15ರಿಂದ ಪೂರಕ ಪರೀಕ್ಷೆ:10 ಮತ್ತು 12 ನೇ ತರಗತಿಗಳಿಗೆ ಪೂರಕ ಪರೀಕ್ಷೆಗಳನ್ನು ಜುಲೈ 15ರಿಂದ ನಡೆಸಲಾಗುವುದು ಎಂದು ಸಿಬಿಎಸ್‌ಇ ಪ್ರಕಟಿಸಿದೆ.

ಫೆ.15ರಿಂದ ಬೋರ್ಡ್‌ ಪರೀಕ್ಷೆ:2024-25ರ ಶೈಕ್ಷಣಿಕ ಅವಧಿಗೆ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ಮುಂದಿನ ವರ್ಷ ಫೆ.15 ರಿಂದ ನಡೆಸಲಾಗುವುದು ಎಂದು ಘೋಷಿಸಲಾಗಿದೆ.

ನೀಟ್‌ ಅನುತ್ತೀರ್ಣ ಭೀತಿ: ಕೋಟಾದಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ!ಕೋಟ( ರಾಜಸ್ಥಾನ): ಕಳೆದ ವಾರವಷ್ಟೇ ನೀಟ್ ಪರೀಕ್ಷೆ ಆಕಾಂಕ್ಷಿಯಾಗಿದ್ದ 19 ವರ್ಷದ ಯುವಕನೊಬ್ಬ 5 ವರ್ಷಗಳ ಕಾಲ ಮನೆಯಿಂದ ದೂರ ಉಳಿಯುತ್ತೇನೆ ಎಂದು ಸಂದೇಶ ಬರೆದು ನಾಪತ್ತೆಯಾದ ಈ ಬೆನ್ನಲ್ಲೇ ಇದೀಗ ಕೋಟದಲ್ಲಿ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಕಳೆದ ಎರಡು ವರ್ಷಗಳಿಂದ ಕೋಟದಲ್ಲಿ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಬಿಹಾರ ಮೂಲದ ಅಮನ್ ಕುಮಾರ್ ಸಿಂಗ್ ಎನ್ನುವ ಯುವಕ ಸ್ವರ್ಣ ವಿಹಾರ ಕಾಲೋನಿಯ ಪಿಜಿಯಿಂದ ಮೇ.11ರ ಮಧ್ಯರಾತ್ರಿ ನಾಪತ್ತೆಯಾಗಿದ್ದಾನೆ. ‘ತಾನು ನೀಟ್ ಪರೀಕ್ಷೆ ಉತ್ತಮವಾಗಿ ಬರೆದಿಲ್ಲ. ನನಗೆ ನೀಟ್ ಪರೀಕ್ಷೆಯನ್ನು ಪಾಸ್ ಮಾಡುವುದಕ್ಕೆ ಸಾಧ್ಯವಿಲ್ಲ’ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾನೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ