ಸ್ಕ್ಯಾನ್ಡ್ ಪ್ರತಿ ಪಡೆಯಲು ₹700 ಬದಲು ₹100ಅಂಕ ಪರಿಶೀಲನೆಗೆ ₹500 ಬದಲು ₹100
ಮೊದಲು ಈ ಮೊತ್ತ ₹100 ಇತ್ತು
ಈ ವರ್ಷದಿಂದಲೇ ಬದಲಾವಣೆಗಳು ಜಾರಿಮೊದಲ ಬಾರಿ ಒಎಸ್‌ಎಂ ಬಳಸಿ ಮೌಲ್ಯಮಾಪನಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಬದಲಾವಣೆ ಮಾಡಿರುವುದಾಗಿ ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಹೊಸ ದರದ ಪ್ರಕಾರ, ಇಷ್ಟುದಿನ ಸ್ಕ್ಯಾನ್ ಮಾಡಲಾದ ಉತ್ತರಪತ್ರಿಕೆಯನ್ನು ಪಡೆಯಲು ಪ್ರತಿ ವಿಷಯಕ್ಕೆ 700 ರು. ಪಾವತಿಸುತ್ತಿದ್ದ ವಿದ್ಯಾರ್ಥಿಗಳು ಇನ್ನುಮುಂದೆ ಕೇವಲ 100 ರು. ಪಾವತಿ ಮಾಡಬೇಕಾಗುವುದು. ಅಂತೆಯೇ, ಅಂಕಗಳನ್ನು ಪರಿಶೀಲಿಸಬೇಕಾದಲ್ಲೂ 500 ರು. ಬದಲು 100 ರು. ನೀಡಿದರೆ ಸಾಕು.
ಆನ್-ಸ್ಕ್ರೀನ್ ಮಾರ್ಕಿಂಗ್ ಸಿಸ್ಟಂ(ಒಎಸ್‌ಎಂ) ವ್ಯವಸ್ಥೆಯನ್ನು 12ನೇ ತರಗತಿ ಪರೀಕ್ಷೆ ಮೌಲ್ಯಮಾಪನದ ವೇಳೆ ಇದೇ ಮೊದಲ ಬಾರಿ ಬಳಸಲಾಗಿದೆ. ಇದರಲ್ಲಿ, ವಿದ್ಯಾರ್ಥಿಗಳ ಉತ್ತರಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ರೂಪದಲ್ಲಿ ಸಿಬಿಎಸ್‌ಇ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಶಿಕ್ಷಕರು ಅದನ್ನು ಅಲ್ಲೇ ಪರಿಶೀಲಿಸಿ ಅಂಕ ನೀಡುತ್ತಾರೆ. ಇದು ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಜತೆಗೆ ಪಾರದರ್ಶಕತೆ ಕಾಯ್ದುಕೊಳ್ಳಲೂ ಸಹಕಾರಿ. ಈ ಬಾರಿ 98 ಉತ್ತರಪತ್ರಿಕೆಗಳನ್ನು ಒಎಸ್‌ಎಂ ವ್ಯವಸ್ಥೆಯಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಶಾಯಿ ಸರಿಯಾಗಿ ಮೂಡಿರದ ಅಥವಾ ಸ್ಕ್ಯಾನ್ ಮಾಡಿದಾಗ ಕೈಬರಹ ಅರ್ಥವಾದಂತೆ ಇದ್ದರೆ ಅಂತಹವುಗಳನ್ನು ಮಾತ್ರ ನೇರವಾಗಿ ಮೌಲ್ಯಮಾಪನಕ್ಕೆ ಒಳಪಡಿಸಲಾಯಿತು. 2014ರಲ್ಲಿ ಇದನ್ನು ಪರಿಚಯಿಸಲಾಗಿತ್ತಾದರೂ ತಾಂತ್ರಿಕ ಹಾಗೂ ಮೂಲಸೌಕರ್ಯ ಕೊರತೆಯಿಂದಾಗಿ ಪೂರ್ಣಪ್ರಮಾಣದ ಅಳವಡಿಕೆ ಸಾಧ್ಯವಾಗಿರಲಿಲ್ಲ.