ಸಿಬಿಎಸ್ಇ 9-12ನೇ ತರಗತಿಗೆ ಪುಸ್ತಕ ನೋಡಿ ಪರೀಕ್ಷೆ ಬರೆವ ಪ್ರಯೋಗ ಶುರು

KannadaprabhaNewsNetwork | Published : Feb 23, 2024 1:49 AMUpdated   : Feb 23 2024, 08:44 AM IST
ಪರೀಕ್ಷೆ | Kannada Prabha

ಸಾರಾಂಶ

ದೇಶಾದ್ಯಂತ ಆಯ್ದ ಶಾಲೆಗಳಲ್ಲಿ ಪ್ರಯೋಗ ನಡೆಯಲಿದ್ದು, ಬೋರ್ಡ್‌ ಪರೀಕ್ಷೆಗೆ ಈ ಮಾದರಿ ಬಳಕೆ ಇಲ್ಲ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.

ನವದೆಹಲಿ: ವಿದ್ಯಾರ್ಥಿಗಳು ಪಠ್ಯಪುಸ್ತಕ, ನೋಟ್ಸ್‌ ನೋಡಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಒಪನ್‌ ಬುಕ್‌- ಎಕ್ಸಾಂ (ತೆರೆದ ಪುಸ್ತಕ) ಅನ್ನು ಈ ವರ್ಷ ಸಿಬಿಎಸ್‌ಇಯ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲು ನಿರ್ಧರಿಸಲಾಗಿದೆ.

ದೇಶವ್ಯಾಪಿ, ಆಯ್ದ ಶಾಲೆಗಳಲ್ಲಿ ಮಾತ್ರವೇ ಈ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಪಠ್ಯ ಚೌಕಟ್ಟಿನ ಶಿಫಾರಸಿನ ಅನ್ವಯ ಈ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತಿದೆ. 

ಆದರೆ ಇದನ್ನು ಬೋರ್ಡ್‌ ಎಕ್ಸಾಂ ಅಂದರೆ ಅಂತಿಮ ಪರೀಕ್ಷೆ ವೇಳೆ ಬಳಕೆ ಮಾಡುವುದಿಲ್ಲ. ಎಂದು ಸಿಬಿಎಸ್‌ಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಯಾವ ವಿಷಯ?
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಮತ್ತು 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಈ ಪರೀಕ್ಷೆ ಆಯೋಜಿಸಲಾಗುವುದು.

ಓಪನ್‌ ಎಕ್ಸಾಂ ಏಕೆ?
ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳು ತೆಗೆದುಕೊಳ್ಳುವ ಸಮಯ, ವಿದ್ಯಾರ್ಥಿಗಳ ಯೋಚನಾ ಶಕ್ತಿ, ವಿಶ್ಲೇಷಣಾ ಶಕ್ತಿ, ಗಂಭೀರ ಮತ್ತು ರಚನಾತ್ಮಕ ಆಲೋಚನೆ, ಸಮಸ್ಯೆ ಬಗೆಹರಿಸುವ ಸಾಮರ್ಥ್ಯ, ಈ ಮಾದರಿಯ ಲಾಭಗಳೇನು, ನಷ್ಟಗಳೇನು? ಇದರ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಅಭಿಪ್ರಾಯ ಏನು ಎಂಬುದರ ಅಧ್ಯಯನ ನಡೆಸಲು ಇಂಥ ಪರೀಕ್ಷೆ ಆಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV