ಬೆದರಿಕೆ ಹಿನ್ನೆಲೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್‌- ಪ್ಲಸ್‌ ಭದ್ರತೆ

KannadaprabhaNewsNetwork |  
Published : Feb 23, 2024, 01:49 AM IST
ಖರ್ಗೆ | Kannada Prabha

ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಝಡ್‌-ಪ್ಲಸ್‌ ಭದ್ರತೆ ಒದಗಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಜೀವ ಬೆದರಿಕೆಗಳಿದ್ದ ಕಾರಣಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಝಡ್‌- ಪ್ಲಸ್‌ ಭದ್ರತೆ ಒದಗಿಸಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ.

ಖರ್ಗೆ ಅವರಿಗೆ ಬೆದರಿಕೆಗಳಿದ್ದ ಕಾರಣ ಅವರಿಗೆ ಝಡ್‌-ಪ್ಲಸ್‌ ಭದ್ರತೆಯನ್ನು ಒದಗಿಸುವ ಕುರಿತು ಸಚಿವಾಲಯವು ಫೆಬ್ರವರಿ ಆರಂಭದಲ್ಲಿ ನಿರ್ಧಾರ ತೆಗೆದುಕೊಂಡಿತ್ತು. ಈ ಪ್ರಕಾರ ಸಿಆರ್‌ಪಿಎಫ್‌ನ 30 ಕಮಾಂಡೋಗಳು 3 ಶಿಫ್ಟ್‌ ಆಧಾರದ ಮೇಲೆ 24 ಗಂಟೆಯೂ ಖರ್ಗೆಗೆ ಭದ್ರತೆ ನೀಡಲಿದ್ದಾರೆ. ಇದರೊಂದಿಗೆ ಪೈಲೆಟ್‌, ಬುಲೆಟ್ ಪ್ರೂಫ್‌ ಕಾರು, ಬೆಂಗಾವಲು ವಾಹನಗಳನ್ನು ನೀಡಲಾಗುತ್ತದೆ.

ಝಡ್‌ - ಪ್ಲಸ್‌ ಭದ್ರತೆಯು ಅತಿ ಹೆಚ್ಚು ಬೆದರಿಕೆ ಇರುವ ವ್ಯಕ್ತಿಗೆ ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಭದ್ರತಾ ವ್ಯವಸ್ಥೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ