ನವದೆಹಲಿ: ಉಜ್ವಲಾ ಯೋಜನೆ ಅಡಿಯ 300 ರು. ಎಲ್‌ಪಿಜಿ ಸಬ್ಸಿಡಿ 1 ವರ್ಷ ಮುಂದುವರಿಸಲು (2024-25ನೇ ಸಾಲಿಗೆ) ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.ಇದರಡಿ ಫಲಾನುಭವಿಗಳಿಗೆ ಪ್ರತಿ ವರ್ಷಕ್ಕೆ 12 ರೀಫಿಲ್‌ಗಳಿಗೆ ತಲಾ 300 ರು. ಸಬ್ಸಿಡಿ ದೊರಕುತ್ತದೆ.
ಯೋಜನೆಯನ್ನು 1 ವರ್ಷ ಮುಂದುವರಿಸಿರುವ ಕಾರಣ 2024-25ರ ಆರ್ಥಿಕ ವರ್ಷಕ್ಕೆ ಒಟ್ಟು 12,000 ರು. ಸಬ್ಸಿಡಿಯನ್ನು ಸರ್ಕಾರ ನೀಡಲಿದೆ.
ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.