ರಾಮ ಮಂದಿರ ಸ್ಮರಣಾರ್ಥ ಕೇಂದ್ರದಿಂದ ನಾಣ್ಯ ಬಿಡುಗಡೆ

KannadaprabhaNewsNetwork |  
Published : Feb 16, 2024, 01:46 AM ISTUpdated : Feb 16, 2024, 08:29 AM IST
Ram Mandir Coin

ಸಾರಾಂಶ

ಒಂದು ಬದಿಯಲ್ಲಿ ರಾಮಲಲ್ಲಾ, ಮತ್ತೊಂದೆಡೆ ಮಂದಿರ ಇರುವ ನಾಣ್ಯವನ್ನು ವಿತ್ತ ಸಚಿವಾಲಯ ಬಿಡುಗಡೆ ಮಾಡಿದೆ.

ನವದೆಹಲಿ: ಅಯೋಧ್ಯೆಯ ಶ್ರರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿರುವ ಸ್ಮರಣಾರ್ಥ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಸ್ಮರಣಿಕೆಯ ನಾಣ್ಯವನ್ನು ಬಿಡುಗಡೆಗೊಳಿಸಿದರು.

ಈ ನಾಣ್ಯದಲ್ಲಿ ಒಂದು ಬದಿಯಲ್ಲಿ ರಾಮಲಲ್ಲಾ ವಿಗ್ರಹ ಹಾಗೂ ಇನ್ನೊಂದು ಬದಿಯಲ್ಲಿ ಶ್ರೀರಾಮ ಮಂದಿರವನ್ನು ಮುದ್ರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟಿಂಗ್‌ ಮತ್ತು ಮಿಂಟಿಂಗ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎಸ್‌ಪಿಎಮ್‌ಸಿಐಎಲ್‌)ದ 19ನೇ ಸಂಸ್ಥಾಪನಾ ದಿನದಂದು ನಿರ್ಮಲಾ ಒಟ್ಟು 3 ನಾಣ್ಯಗಳನ್ನು ಬಿಡುಗಡೆಗೊಳಿಸಿದರು.

ಈ ಪೈಕಿ ಒಂದು ರಾಮ ಮಂದಿರ ಸ್ಮರಣಾರ್ಥವಾಗಿದ್ದರೆ ಇನ್ನೊಂದು ಭಗವಾನ್ ಬುದ್ಧ ಹಾಗೂ ಸ್ತೂಪಗಳ ಚಿತ್ರಗಳನ್ನು ಹೊಂದಿದೆ. ಮೂರನೇಯ ನಾಣ್ಯದಲ್ಲಿ ಭಾರತದ ಅಳಿವಿನಂಚಿನಲ್ಲಿರುವ ಘೇಂಡಾಮೃಗ (ಒನ್‌ ಹಾರ್ನ್ಡ್‌ ರೈನೋಸರಸ್‌) ಪ್ರಾಣಿಯ ಚಿತ್ರವನ್ನು ಹೊಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತನ್ನದೇ ಸೈನಿಕರ ಸಾಯಲು ಬಿಟ್ಟ ದ್ರೋಹಿ ಪಾಕಿಸ್ತಾನ!
ಶಾಲೇಲಿ ಬ್ಲೇಡಿಂದ ಒಂದೇ ರೀತಿ ಕೈ ಕೊಯ್ದುಕೊಂಡ 35 ಮಕ್ಕಳು!