ಕೇಂದ್ರದಿಂದಲೇ ‘ಟ್ರೂಕಾಲರ್‌’ ಮಾದರಿ ಸೇವೆಗೆ ಶಿಫಾರಸು

KannadaprabhaNewsNetwork |  
Published : Feb 25, 2024, 01:51 AM ISTUpdated : Feb 25, 2024, 08:24 AM IST
ಟ್ರೂಕಾಲರ್‌ | Kannada Prabha

ಸಾರಾಂಶ

ಕೇಂದ್ರ ಸರ್ಕಾರವೇ ಟ್ರೂಕಾಲರ್‌ ಮಾದರಿಯಲ್ಲಿ ಗ್ರಾಹಕರಿಗೆ ಕರೆ ಮಾಡಿದವರ ವಿವರ ತಿಳಿಸಲು ಟ್ರಾಯ್‌ ಸಲಹೆ ನೀಡಿದೆ.

ನವದೆಹಲಿ: ಅನಪೇಕ್ಷಿತ (ಸ್ಪ್ಯಾಮ್‌) ಕರೆಗಳ ಹಾವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ, ಅಪರಿಚಿತರು ಕರೆ ಮಾಡಿದಾಗ ಅವರ ಹೆಸರು ಮೊಬೈಲ್‌ ಸ್ಕ್ರೀನ್‌ಗಳಲ್ಲಿ ಬಿತ್ತರಗೊಳ್ಳುವಂತೆ ಮಾಡುವ ವ್ಯವಸ್ಥೆ ಜಾರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌)ವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. 

ಈಗಾಗಲೇ ಈ ಸೇವೆಯನ್ನು ‘ಟ್ರೂ ಕಾಲರ್‌’ನಂತಹ ಖಾಸಗಿ ಆ್ಯಪ್‌ಗಳು ಒದಗಿಸುತ್ತಿವೆ.‘ಕಾಲಿಂಗ್‌ ನೇಮ್‌ ಪ್ರೆಸೆಂಟೇಷನ್‌’ (ಕರೆ ಮಾಡುವವರ ಹೆಸರು ಪ್ರಸ್ತುತಿ) ಎಂಬ ಸೌಲಭ್ಯ ಇದಾಗಿದೆ. 

ದೇಶದ ಎಲ್ಲ ಮೊಬೈಲ್‌ ನೆಟ್‌ವರ್ಕ್‌ಗಳಲ್ಲೂ ಇದನ್ನು ಜಾರಿಗೆ ತರಲು ಟ್ರಾಯ್‌ ಸಲಹೆ ಮಾಡಿದೆ.ಈ ಸೌಲಭ್ಯದಿಂದಾಗಿ ಮೊಬೈಲ್‌ ಗ್ರಾಹಕರಿಗೆ ತಮಗೆ ಕರೆ ಮಾಡುತ್ತಿರುವವರು ಯಾರು? ಅದೇನು ಅನಪೇಕ್ಷಿತ ಕರೆಯೇ ಎಂಬುದು ಅದನ್ನು ಸ್ವೀಕರಿಸುವ ಮೊದಲೇ ಗೊತ್ತಾಗಲಿದೆ. 

ಸಿಮ್‌ ಖರೀದಿಸುವಾಗ ಗ್ರಾಹಕರು ನೀಡಿರುವ ಅರ್ಜಿಯಲ್ಲಿರುವ ಮಾಹಿತಿಯನ್ನು ಇದಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ಟ್ರಾಯ್‌ ಹೇಳಿದೆ.

ಟ್ರೂ ಕಾಲರ್‌ನಂತಹ ಆ್ಯಪ್‌ಗಳು ಜನರಿಂದಲೇ ಮಾಹಿತಿ ಗಳಿಸಿ ಈ ಸೇವೆಯನ್ನು ಒದಗಿಸುತ್ತಿವೆ. ಆದರೆ ಸಿಮ್‌ ಖರೀದಿ ವೇಳೆ ಗ್ರಾಹಕರು ನೀಡಿರುವ ವಿವರವನ್ನೇ ಬಳಸಿಕೊಂಡಿರುವ ಕಾರಣಕ್ಕೆ ಕರೆ ಮಾಡಿದವರ ಹೆಸರು ನಿಖರವಾಗಿರುತ್ತೆ ಎಂಬ ಅಭಿಪ್ರಾಯವಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ