ಸರಿಯಾಗಿ ಕೆಲಸಕ್ಕೆ ಮಾಡದ ನೌಕರರ ಪಟ್ಟಿ ಮಾಡಿ, ನಿವೃತ್ತಿ ನೀಡಲು ಸೂಚನೆ

KannadaprabhaNewsNetwork |  
Published : Jun 29, 2024, 12:33 AM ISTUpdated : Jun 29, 2024, 05:13 AM IST
ಸರ್ಕಾರಿ ನೌಕರರು | Kannada Prabha

ಸಾರಾಂಶ

ಸರ್ಕಾರಿ ನೌಕರರ ಕೆಲಸವನ್ನು ವಿಮರ್ಶಿಸಲು ಕೇಂದ್ರ ಸರ್ಕಾರ ಎಲ್ಲಾ ಸಚಿವಾಲಯಗಳಿಗೆ ಆದೇಶಿಸಿದ್ದು, ನಿಯಮಾನುಸಾರ ಕಾರ್ಯನಿರ್ವಹಿಸದವರನ್ನು ಅಕಾಲಿಕವಾಗಿ ಸೇವೆಯಿಂದ ನಿವೃತ್ತಿಗೊಳಿಸುವಂತೆ ಸೂಚಿಸಿದೆ.

ನವದೆಹಲಿ: ಸರ್ಕಾರಿ ನೌಕರರ ಕೆಲಸವನ್ನು ವಿಮರ್ಶಿಸಲು ಕೇಂದ್ರ ಸರ್ಕಾರ ಎಲ್ಲಾ ಸಚಿವಾಲಯಗಳಿಗೆ ಆದೇಶಿಸಿದ್ದು, ನಿಯಮಾನುಸಾರ ಕಾರ್ಯನಿರ್ವಹಿಸದವರನ್ನು ಅಕಾಲಿಕವಾಗಿ ಸೇವೆಯಿಂದ ನಿವೃತ್ತಿಗೊಳಿಸುವಂತೆ ಸೂಚಿಸಿದೆ. ಸಚಿವಾಲಯಗಳ ಕೆಳಗೆ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯದ ಉದ್ಯಮಗಳು, ಬ್ಯಾಂಕ್, ಸ್ವಾಯತ್ತ ಹಾಗೂ ಶಾಸನಬದ್ಧ ಸಂಸ್ಥೆಗಳಿಗೆ ನೌಕರರ ಕಾರ್ಯಕ್ಷಮತೆಯನ್ನು ಪರಿಶೀಲಿಸುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಿರ್ದೇಶಿಸಿದೆ.

ಸರ್ಕಾರಿ ನೌಕರರ ಕೆಲಸವನ್ನು ಪರಿಶೀಲಿಸಿ ಅವರನ್ನು ಉಳಿಸಿಕೊಳ್ಳಬೇಕೆ ಅಥವಾ ಕೆಲಸದಿಂದ ತೆಗೆದುಹಾಕಬೇಕೇ ಎಂಬುದನ್ನು ನಿರ್ಧರಿಸಲು ಕಾರ್ಯಕ್ಷಮತೆಯ ಆವರ್ತಕ ಪರಿಶೀಲನೆ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ನಿಟ್ಟಿನಲ್ಲಿ ಹೊರಡಿಸಲಾದ ಮಾರ್ಗಸೂಚಿಗಳನ್ನು ಅನುಸರಿಸಿ ವರದಿಯನ್ನು ಸಲ್ಲಿಸಲು ವಿನಂತಿಸಿದರೂ ಸರ್ಕಾರದ ನಿರ್ದೇಶನಗಳನ್ನು ಪಾಲಿಸದಿರುವ ಬಗ್ಗೆ ಕೇಂದ್ರ ಅಸಮಾಧಾನ ವ್ಯಕ್ತಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸೋಲೊಪ್ಪದ ಸಾಹಸದ ಹಿಂದೆ ‘ಜಾಫರಿ’ ತಂತ್ರ!
ಇರಾನ್‌ ಶರಣಾಗತಿ ಸನ್ನಿಹಿತ: ಟ್ರಂಪ್‌