ದಿನೇದಿನೇ ತನ್ನ ಪ್ರಭಾವವನ್ನು ವೃದ್ಧಿಸಿಕೊಳ್ಳುತ್ತಿರುವ ಎಲ್‌-ನಿನೋ, 2026ರ ಸೆಪ್ಟೆಂಬರ್‌ನಿಂದ 2027ರ ಫೆಬ್ರವರಿ ವರೆಗೆ 4.51 ಲಕ್ಷ ಜೀವಗಳನ್ನು ಬಲಿ ಪಡೆಯಲಿದೆ ಎಂದು ಕ್ಲೈಮೆಟ್‌ ಇಂಪ್ಯಾಕ್ಟ್‌ ಲ್ಯಾಬ್‌ನ ವರದಿ ತಿಳಿಸಿದೆ. ಇದರಲ್ಲಿ ಈ ಹಿಂದಿನ ಸಾವುಗಳನ್ನು ಪರಿಗಣಿಸಲಾಗಿಲ್ಲ.

- ದಕ್ಷಿಣ ದೇಶಗಳ ಮೇಲೆ ಹೆಚ್ಚು ಪರಿಣಾಮ

- 6 ತಿಂಗಳಲ್ಲಿ ವಿಶ್ವದಲ್ಲಿ 4.5 ಲಕ್ಷ ಸಾವು

ನವದೆಹಲಿ: ದಿನೇದಿನೇ ತನ್ನ ಪ್ರಭಾವವನ್ನು ವೃದ್ಧಿಸಿಕೊಳ್ಳುತ್ತಿರುವ ಎಲ್‌-ನಿನೋ, 2026ರ ಸೆಪ್ಟೆಂಬರ್‌ನಿಂದ 2027ರ ಫೆಬ್ರವರಿ ವರೆಗೆ 4.51 ಲಕ್ಷ ಜೀವಗಳನ್ನು ಬಲಿ ಪಡೆಯಲಿದೆ ಎಂದು ಕ್ಲೈಮೆಟ್‌ ಇಂಪ್ಯಾಕ್ಟ್‌ ಲ್ಯಾಬ್‌ನ ವರದಿ ತಿಳಿಸಿದೆ. ಇದರಲ್ಲಿ ಈ ಹಿಂದಿನ ಸಾವುಗಳನ್ನು ಪರಿಗಣಿಸಲಾಗಿಲ್ಲ.ಹವಾಮಾನ ವಿಜ್ಞಾನ, ಅರ್ಥಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆಯ ಬಳಿಕ ಬಿಡುಗಡೆ ಮಾಡಲಾಗಿರುವ ಈ ವರದಿಯಲ್ಲಿ,

ದಕ್ಷಿಣದ ರಾಷ್ಟ್ರಗಳ ಮೇಲೆ ಎಲ್‌-ನಿನೋ ಪರಿಣಾಮ ಅತ್ಯಧಿಕವಾಗಿರಲಿದೆ ಎಂಬ ಆತಂಕಕಾರಿ ಎಚ್ಚರಿಕೆಯನ್ನೂ ನೀಡಲಾಗಿದೆ. ಭಾರತದಲ್ಲಿ 15,800 ಮಂದಿ ಬಿಸಿಲಿನ ತಾಪಕ್ಕೆ ಪ್ರಾಣ ಕಳೆದುಕೊಳ್ಳಬಹುದು ಎನ್ನಲಾಗಿದೆ.

ಈ ಮಾಹಿತಿಯು, ಬಿಸಿಲಿನಿಂದ ಜನರ ಮೇಲಾಗುವ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸರ್ಕಾರಗಳಿಗೆ ಸಹಾಯ ಮಾಡಬಹುದು ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ. ಎಲ್ಲೆಲ್ಲಿ ಎಷ್ಟೆಷ್ಟು?:

ಆಫ್ರಿಕಾದ ಸಾಹೆಲ್‌ ಎಂಬಲ್ಲಿ ಅತಿಹೆಚ್ಚು, 66800 ಮಂದಿ ಎಲ್‌ ನಿನೋಗೆ ಬಲಿಯಾಗಬಹುದು. ಉಳಿದಂತೆ ನೈಜೀರಿಯಾದಲ್ಲಿ 31400, ಸುಡಾನ್‌ನಲ್ಲಿ 17500, ನೈಜರ್‌ನಲ್ಲಿ 17500, ಛಡ್‌ನಲ್ಲಿ 8000, ಇಂಡೋನೇಷ್ಯಾದಲ್ಲಿ 19300, ಪೂರ್ವ ಏಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ, ಥಾಯ್ಲೆಂಡ್ ಮತ್ತು ಕಾಂಬೋಡಿಯಾದಲ್ಲಿ ಒಟ್ಟು 19,400 ಸಾವುಗಳು ಸಂಭವಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

==

ವಾಯುಭಾರ ಕುಸಿತ: ಬಂಗಾಳ,

ಒಡಿಶಾ, ಆಂಧ್ರದಲ್ಲಿ ಭಾರೀ ಮಳೆ

ವರ್ಷಧಾರೆ ತೀವ್ರಗೊಳ್ಳುವ ಸಾಧ್ಯತೆಶೀಘ್ರ ಅರ್ನಬ್‌ ಸೈಕ್ಲೋನ್‌ ಸೃಷ್ಟಿ?

ಭುವನೇಶ್ವರ್‌/ಅಮರಾವತಿ/ಕೋಲ್ಕತಾ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪರಿಣಾಮ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.ಈ ವಾಯುಭಾರ ಕುಸಿತವು ದಕ್ಷಿಣ ಒಡಿಶಾ ಮತ್ತು ಉತ್ತರ ಆಂಧ್ರದ ಕರಾವಳಿ ದಾಟುತ್ತಿದ್ದಂತೆ ವರ್ಷಧಾರೆ ತೀವ್ರವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ಕ್ರಮೇಣ ಅರ್ನಬ್‌ (ಬಂಗಾಳಿಯಲ್ಲಿ ಸಮುದ್ರ ಎಂದರ್ಥ) ಸೈಕ್ಲೋನ್‌ ಸೃಷ್ಟಿಯಾಗುವ ನಿರೀಕ್ಷೆಯೂ ಇದೆ.

ಒಡಿಶಾ ಅವಾಂತರ:ಒಡಿಶಾದ 16ಕ್ಕೂ ಹೆಚ್ಚು ಪ್ರದೇಶಗಳಲ್ಲಿ 10 ಸೆಂಟಿಮೀಟರ್‌ಗಿಂತ ಅಧಿಕ ಮಳೆಯಾಗಿದ್ದು, ಕೊರಾಪುಟ್ ಜಿಲ್ಲೆಯ ಸೆಮಿಲಿಗುಡಾ 23 ಸೆಂ.ಮೀ. ಮಳೆ ಕಂಡಿದೆ. ಕೆಲ ಕಡೆಗಳಲ್ಲಿ ಮರ ಬುಡಮೇಲಾಗಿ, ಮನೆಗಳಿಗೆ ನೀರು ನುಗ್ಗಿದ ಘಟನೆಗಳೂ ವರದಿಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾದ 5 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಭೂಕುಸಿತ ಸಂಭವಿಸಬಹುದಾದ ಸುಮಾರು 140 ಪ್ರದೇಶಗಳನ್ನು ಗುರುತಿಸಲಾಗಿದೆ.

10 ಜಿಲ್ಲೆಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳನ್ನು ಮುಚ್ಚಲಾಗಿದ್ದು, ತುರ್ತು ಸಂದರ್ಭದ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.ಆಂಧ್ರ, ಬಂಗಾಳದಲ್ಲೂ ಆತಂಕ:ಪಲಸಾದಲ್ಲಿ 14 ಸೆಂ.ಮೀ ಮಳೆಯಾಗಿದೆ. ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಶುಕ್ರವಾರದವರೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಹಾಗೂ ಉತ್ತರ ಬಂಗಾಳ ಕೊಲ್ಲಿಯಲ್ಲಿ ಗಂಟೆಗೆ 55-65 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಸುರಕ್ಷತೆ ದೃಷ್ಟಿಯಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲಬಹುದು ಎಂದು ಐಎಂಡಿ ತಿಳಿಸಿದೆ.