ಅಧಿಕೃತವಾಗಿ ಸೇವೆ ಆರಂಭಿಸಲು ಸ್ಟಾರ್‌ಲಿಂಕ್‌ ಇಂಟರ್ನೆಟ್ ಪ್ರವೇಶ : ಭಾರತ ಕಠಿಣ ಷರತ್ತು

KannadaprabhaNewsNetwork |  
Published : Mar 15, 2025, 01:06 AM ISTUpdated : Mar 15, 2025, 04:40 AM IST
ಸ್ಟಾರ್‌ಲಿಂಕ್ | Kannada Prabha

ಸಾರಾಂಶ

ಭಾರತದಲ್ಲಿ ಅಧಿಕೃತವಾಗಿ ಸೇವೆ ಆರಂಭಿಸಲು ಸಿದ್ಧವಾಗಿರುವ ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ ಅವರ ಉಪಗ್ರಹ ಆಧಾರಿತ ಸ್ಟಾರ್‌ ಲಿಂಕ್‌ ಇಂಟರ್ನೆಟ್ ಸೇವೆಗೆ ಕೇಂದ್ರ ಸರ್ಕಾರ ವಿಧಿಸಿದೆ.

ನವದೆಹಲಿ: ಭಾರತದಲ್ಲಿ ಅಧಿಕೃತವಾಗಿ ಸೇವೆ ಆರಂಭಿಸಲು ಸಿದ್ಧವಾಗಿರುವ ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ ಅವರ ಉಪಗ್ರಹ ಆಧಾರಿತ ಸ್ಟಾರ್‌ ಲಿಂಕ್‌ ಇಂಟರ್ನೆಟ್ ಸೇವೆಗೆ ಕೇಂದ್ರ ಸರ್ಕಾರ ವಿಧಿಸಿದೆ.

ಸೂಕ್ಷ್ಮ ಮತ್ತು ವಿವಾದಿತ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕರೆ ಮತ್ತು ಇಂಟರ್ನೆಟ್‌ ಸೇವೆ ರದ್ದುಪಡಿಸಲು ಅನುಕೂಲವಾಗುವಂತೆ ಕಮಾಂಡ್‌ ಸೆಂಟರ್‌ ಅನ್ನು ಭಾರತದಲ್ಲಿ ಸ್ಥಾಪಿಸಬೇಕು. ಕರೆ ಕದ್ದಾಲಿಸಲು ಅವಕಾಶ ಮಾಡಿಕೊಡಬೇಕು ಎಂಬುವು ಆ ಷರತ್ತುಗಳು.

ಸ್ಟಾರ್‌ಲಿಂಕ್‌ನ ಸ್ಯಾಟಲೈಟ್‌ ಸಂವಹನಗಳ ಪರವಾನಗಿಗೆ ಸಂಬಂಧಿಸಿದ ಅರ್ಜಿ ಇನ್ನೂ ಅಂಗೀಕಾರವಾಗಿಲ್ಲ. ಆಗಲೇ ಸಂಸ್ಥೆಯು ಭಾರತದ ಎರಡು ಪ್ರಮುಖ ಮೊಬೈಲ್‌ ಸೇವಾ ಸಂಸ್ಥೆಗಳಾದ ಏರ್‌ಟೆಲ್‌ ಮತ್ತು ಜಿಯೋ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಕಂಟ್ರೋಲ್‌ ಕೇಂದ್ರ:

ಕಂಟ್ರೋಲ್‌ ಸೆಂಟರ್‌ ಸ್ಥಾಪನೆ ಭಾರತದ ಪಾಲಿಗೆ ಮಹತ್ವದ್ದಾಗಿದೆ. ತುರ್ತು ಸಂದರ್ಭದಲ್ಲಿ ಸರ್ಕಾರವು ಕೆಲ ಪ್ರದೇಶಗಳಲ್ಲಿ ತಕ್ಷಣ ಸ್ಯಾಟಲೈಟ್‌ ಸಂವಹನ ಸೇರಿ ಎಲ್ಲಾ ರೀತಿಯ ಸಂವಹನ ಸೇವೆಗಳನ್ನು ನಿರ್ಬಂಧಿಸಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಸರ್ಕಾರ ಸ್ಟಾರ್‌ಲಿಂಕ್‌ನ ಬಾಗಿಲು ಬಡಿಯುವ ಅಥವಾ ಅಮೆರಿಕದಲ್ಲಿರುವ ಮುಖ್ಯ ಕಚೇರಿಗೆ ಮನವಿ ಮಾಡುತ್ತಾ ಕೂರಲು ಸಮಯವಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಕದ್ದಾಲಿಕೆ:

ಕಾನೂನು ಪಾಲನಾ ಅಧಿಕಾರಿಗಳು ಅಧಿಕೃತ ಮಾರ್ಗಗಳ ಮೂಲಕ ಮನವಿ ಸಲ್ಲಿಸಿದಾಗ ಕರೆಗಳ ಕದ್ದಾಲಿಕೆಗೂ ಅವಕಾಶ ನೀಡುವಂತೆ ಅವಕಾಶ ಮಾಡಿಕೊಡಬೇಕು ಎಂಬ ಷರತ್ತನ್ನೂ ಭಾರತ ವಿಧಿಸಿದೆ ಮೂಲಗಳು ತಿಳಿಸಿವೆ.

ಪರಿಶೀಲನೆ- ಸ್ಟಾರ್‌ಲಿಂಕ್‌:

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿಚಾರಗಳ ಕುರಿತು ಪರಿಶೀಲಿಸುವುದಾಗಿ ಸ್ಟಾರ್‌ ಲಿಂಕ್‌ ಸಂಸ್ಥೆ ಕೂಡ ಹೇಳಿದೆ.

ಕಾನೂನಿನಲ್ಲಿ ಅವಕಾಶವಿದೆ:

ಭಾರತೀಯ ದೂರಸಂಪರ್ಕ ಕಾಯ್ದೆಯಡಿ ಕೇಂದ್ರ ಅಥವಾ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಯಾವುದೇ ಟೆಲಿಕಾಂ ಅಥವಾ ನೆಟ್‌ವರ್ಕ್‌ ಅನ್ನು ಸಾರ್ವಜನಿಕ ತುರ್ತು ಪರಿಸ್ಥಿತಿ, ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ.

ಕರೆ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮೂಲಗಳು, ಇದು ಹೊಸದೇನಲ್ಲ. ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್‌ ಸಂಸ್ಥೆಗಳು ಈಗಾಗಲೇ ಇದನ್ನು ಪಾಲಿಸುತ್ತಿವೆ ಎಂದು ಹೇಳಿವೆ.

PREV

Recommended Stories

ಅಗ್ಗವೆಂದು ಮುಸ್ಲಿಮರು ಗೋಮಾಂಸ ತಿಂತಾರೆ: ಸಲ್ಮಾನ್‌ ಅಪ್ಪ ಸಲೀಂ!
ಪಂಜಾಬ್‌ನ 1000 ಹಳ್ಳಿಗಳಲ್ಲಿ ಪ್ರವಾಹ