ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ

KannadaprabhaNewsNetwork |  
Published : Apr 07, 2026, 03:15 AM IST
ತಮಿಳು ನಟಿ  | Kannada Prabha

ಸಾರಾಂಶ

ತಮಿಳಿನ ಕಿರುತೆರೆ ನಟಿ, ಸುಭಾಷಿಣಿ ಅಲಿಯಾಸ್‌ ಸಾಸ್ವಿಬಾಲಾ (36) ಅವರು ಪತಿಯ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗಲೇ ನೇಣು ಬಿಗಿದುಕೊಂಡು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹವೇ ದುಡುಕಿನ ನಿರ್ಧಾರಕ್ಕೆ ಕಾರಣವಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

- ಪತಿ ಜತೆ ವಿಡಿಯೋ ಕಾಲ್‌ ವೇಳೇಯೇ ಸಾವು

- ಕೌಟುಂಬಿಕ ಕಲಹ ಕಾರಣ ಶಂಕೆ

- ಬೆಂಗ್ಳೂರು ವ್ಯಕ್ತಿ ಮದುವೆಯಾಗಿದ್ದ ನಟಿ

ಚೆನ್ನೈ: ತಮಿಳಿನ ಕಿರುತೆರೆ ನಟಿ, ಸುಭಾಷಿಣಿ ಅಲಿಯಾಸ್‌ ಸಾಸ್ವಿಬಾಲಾ (36) ಅವರು ಪತಿಯ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗಲೇ ನೇಣು ಬಿಗಿದುಕೊಂಡು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹವೇ ದುಡುಕಿನ ನಿರ್ಧಾರಕ್ಕೆ ಕಾರಣವಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಶ್ರೀಲಂಕಾ ಮೂಲದ ಸುಭಾಷಿಣಿ, ಬೆಂಗಳೂರಿನ ಬಿಪಿನ್‌ ಚಂದ್ರ ಎನ್ನುವವರನ್ನು 2 ವರ್ಷಗಳ ವಿವಾಹವಾಗಿದ್ದರು. ಇಬ್ಬರೂ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಈ ಮಧ್ಯೆ ಸುಭಾಷಿಣಿ ಧಾರಾವಾಹಿ ಚಿತ್ರೀಕರಣಕ್ಕಾಗಿ ಚೆನ್ನೈಗೆ ತೆರಳಿ ಪೋರೂರು ಬಳಿಯ ಅಯ್ಯಪ್ಪಂತಂಗಲ್‌ನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಭಾನುವಾರ ಪತಿಯ ಜತೆ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಕೌಟುಂಬಿಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ನಟಿ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ವಿಡಿಯೋ ಕಾಲ್‌ನಲ್ಲಿ ನೋಡಿದ ಪತಿ ಕೂಡಲೇ ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ನೇಣು ಕುಣಿಕೆಯಿಂದ ನಟಿ ಶವ ಹೊರ ತೆಗೆದು, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರೊಳಗೆ ಸುಭಾಷಿಣಿ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೋಲ್ಕತಾ ಮೇಲೆ ದಾಳಿ ಮಾಡಿದರೆ ಪಾಕ್ ತುಂಡು ತುಂಡು: ರಾಜನಾಥ್‌
ಶಬರಿಮಲೆಗೆ ಸ್ತ್ರೀಯರ ಪ್ರವೇಶ ನಿರ್ಬಂಧಕ್ಕೆ ಕೇಂದ್ರ ಬೆಂಬಲ