)
ಡಿಎಂಕೆ, ಅಣ್ಣಾಡಿಎಂಕೆ, ಕಾಂಗ್ರೆಸ್, ಬಿಜೆಪಿಯಿಂದ ಒಬ್ಬ ಬ್ರಾಹ್ಮಣರಿಗೂ ಸ್ಪರ್ಧೆ ಇಲ್ಲ
ಕಾಂಗ್ರೆಸ್, ಬಿಜೆಪಿ, ಡಿಎಂಕೆಯಿಂದಲೂ ಬ್ರಾಹ್ಮಣರಿಗೆ ಮಣೆ ಇಲ್ಲಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣರಾದ ಎಐಎಡಿಎಂಕೆ ನಾಯಕಿ ಜಯಲಲಿತಾ ಅಬ್ಬರಿಸುವ ಕಾಲವೊಂದಿತ್ತು. ತಮಿಳುನಾಡಿನಲ್ಲಿ ಬ್ರಾಹ್ಮಣರ ಸಂಖ್ಯೆ ಕೇವಲ ಶೇ.3 ಇದ್ದರೂ ಜಯಾ ಪ್ರಭಾವಿ ಆಗಿದ್ದರು. ಆದರೆ ಅವರದ್ದೇ ಪಕ್ಷ ಎಐಎಡಿಎಂಕೆ, 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯಾವುದೇ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಇನ್ನು ಅಣ್ಣಾಡಿಎಂಕೆ ಮಿತ್ರ ಪಕ್ಷ ಬಿಜೆಪಿ, ತನಗೆ ಹಂಚಿಕೆಯಾದ 27 ಸ್ಥಾನಗಳಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನು ಹೊಂದಿಲ್ಲ. ಡಿಎಂಕೆ ಮತ್ತು ಕಾಂಗ್ರೆಸ್ ಕೂಡ ಬ್ರಾಹ್ಮಣ ಅಭ್ಯರ್ಥಿಯನ್ನು ಹೊಂದಿಲ್ಲ.ಇದು ಜಯಾ ನಿಧನದ ತರುವಾಯ ಸಮುದಾಯದ ಪ್ರಭಾವ ಕ್ಷೀಣಿಸುತ್ತಿರುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಆದರೂ ತಮಿಳುನಾಡು ಬ್ರಾಹ್ಮಣ ಸಂಘದ (ತಾಂಬ್ರಸ್) ಬೆಂಬಲವನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಟಿವಿಕೆಯಿಂದ 2 ಬ್ರಾಹ್ಮಣ ಅಭ್ಯರ್ಥಿಗಳು, ಎನ್ ಟಿಕೆಯಿಂದ 6:ಇದಕ್ಕೆ ವ್ಯತಿರಿಕ್ತವಾಗಿ, ನಟ ವಿಜಯ್ ಅವರ ಟಿವಿಕೆ ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳನ್ನು ಮತ್ತು ತಮಿಳು ರಾಷ್ಟ್ರೀಯವಾದಿ ಸೀಮನ್ ಅವರ ಎನ್‌ಟಿಕೆ, 6 ಮಂದಿಯನ್ನು ಕಣಕ್ಕಿಳಿಸಿದೆ. ಎರಡೂ ಪಕ್ಷಗಳು ಗಣನೀಯ ಪ್ರಮಾಣದ ಬ್ರಾಹ್ಮಣ ಮತಗಳನ್ನು ಹೊಂದಿರುವ ಮೈಲಾಪುರ ಮತ್ತು ಶ್ರೀರಂಗಂನಂತಹ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿವೆ.
‘ಪೆರಿಯಾರ್ ವಿರೋಧಿ ನಿಲುವನ್ನು ತೆಗೆದುಕೊಂಡು ನ್‌ಟಿಕೆ ಆರು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಸಿದೆ. ಅದರ ನಾಯಕ ಸೀಮನ್ ಈ ಹಿಂದೆ ದ್ರಾವಿಡ ತಡೆಗೋಡೆ ಒಡೆವೆ ಎಂದಿದ್ದರು. ಇನ್ನು ಟಿವಿಕೆ, ತಾನು ಬ್ರಾಹ್ಮಣ ವಿರೋಧಿ ಅಲ್ಲ ಎಂದು ಬಿಂಬಿಸಲು 2 ಟಿಕೆಟ್‌ಗಳನ್ನು ಬ್ರಾಹ್ಮಣರಿಗೆ ನೀಡಿರಬಹುದು’ ಎಂದು ವಿಶ್ಲೇಷಕ ರವೀಂದ್ರನ್ ದುರೈಸ್ವಾಮಿ ಹೇಳಿದ್ದಾರೆ.