ಉಪಸಮರ ರಿಸಲ್ಟ್‌ಗೂ ಸಿಎಂಕುರ್ಚಿಗೂ ನಂಟು ಇಲ್ಲ: ಸಿದ್ದು

KannadaprabhaNewsNetwork |  
Published : Mar 29, 2026, 01:45 AM ISTUpdated : Mar 29, 2026, 08:08 AM IST
CM Siddaramaiah

ಸಾರಾಂಶ

ಉಪಚುನಾವಣೆಯ ಫಲಿತಾಂಶಕ್ಕೂ, ಸಿಎಂ ಕುರ್ಚಿ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿದ ಅವರು, ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಹೇಳಿದರೆ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಅಧಿವೇಶನದಲ್ಲೇ ಹೇಳಿದ್ದೇನೆ.

 ಮೈಸೂರು:  ಉಪಚುನಾವಣೆಯ ಫಲಿತಾಂಶಕ್ಕೂ, ಸಿಎಂ ಕುರ್ಚಿ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಹೇಳಿದರೆ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಅಧಿವೇಶನದಲ್ಲೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ಉಪಚುನಾವಣಾ ಫಲಿತಾಂಶಕ್ಕೂ, ಸಿಎಂ ಕುರ್ಚಿ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ‌

ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ‌. ದಾವಣಗೆರೆ ದಕ್ಷಿಣದಲ್ಲಿ ಯಾವ ಗೊಂದಲವೂ ಇಲ್ಲ. ಕಳೆದ ಮೂರು ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿಯೂ ನಾವೇ ಗೆದ್ದಿದ್ದೇವೆ‌. ಅದು ರಾಜ್ಯದ ಜನ ನಮ್ಮ ಸರ್ಕಾರಕ್ಕೆ ಮಾಡಿದ ಆಶೀರ್ವಾದ. ಈ ಫಲಿತಾಂಶ ಕೂಡ ನಮ್ಮ ಸರ್ಕಾರಕ್ಕೆ ಜನ ಮಾಡುವ ಆಶೀರ್ವಾದ. ಇದನ್ನು ದಿಕ್ಸೂಚಿ, ಅದು, ಇದು ಎಂದು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ನಾನು ಏಪ್ರಿಲ್ 1 ರಿಂದ ಚುನಾವಣಾ ಪ್ರಚಾರದಲ್ಲಿ

‘ನಾನು ಏಪ್ರಿಲ್ 1 ರಿಂದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಏಪ್ರಿಲ್ 5ರಂದು ಕೇರಳಕ್ಕೆ ಪ್ರಚಾರಕ್ಕೆ ಹೋಗುತ್ತೇನೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ’ ಎಂದು ಅವರು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರೇಮಂಡ್ಸ್‌ ಮಾಜಿ ಮುಖ್ಯಸ್ಥ ಸಿಂಘಾನಿಯಾ ವಿಧಿವಶ
ಮೈಸೂರು ತೋಟದ ಮನೇಲಿಸಿಕ್ಕ ಡ್ರಗ್ಸ್‌ಗೆ ಮುಂಬೈ ನಂಟು! ₹12 ಕೋಟಿಯ ಮಾದಕ ವಸ್ತು