ಗುಜರಾತ್‌ನ ರಾಜಕೋಟ್‌ನಲ್ಲಿ ಮಕ್ಕಳು ವಿವಿಧ ಆಟಗಳನ್ನು ಆಡುವ ‘ಟಿಆರ್‌ಪಿ ಗೇಮ್ ಝೋನ್’ ಎಂಬ ಮನರಂಜನಾ ಪಾರ್ಕ್‌ನಲ್ಲಿ ಶನಿವಾರ ಸಂಜೆ ಉಂಟಾದ ಬೆಂಕಿ ಅವಘಡದಲ್ಲಿ 9 ಮಕ್ಕಳು ಸೇರಿದಂತೆ 27 ಮಂದಿ ಸಜೀವ ದಹನಗೊಂಡಿದ್ದಾರೆ
ರಾಜಕೋಟ್: ಗುಜರಾತ್‌ನ ರಾಜಕೋಟ್‌ನಲ್ಲಿ ಮಕ್ಕಳು ವಿವಿಧ ಆಟಗಳನ್ನು ಆಡುವ ‘ಟಿಆರ್‌ಪಿ ಗೇಮ್ ಝೋನ್’ ಎಂಬ ಮನರಂಜನಾ ಪಾರ್ಕ್‌ನಲ್ಲಿ ಶನಿವಾರ ಸಂಜೆ ಉಂಟಾದ ಬೆಂಕಿ ಅವಘಡದಲ್ಲಿ 9 ಮಕ್ಕಳು ಸೇರಿದಂತೆ 27 ಮಂದಿ ಸಜೀವ ದಹನಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ನಡುವೆ, ಝೋನ್‌ನ ಮಾಲೀಕನನ್ನು ಬಂಧಿಸಲಾಗಿದೆ.
ಮಕ್ಕಳು ಆಟ ಆಡಲು ನಿರ್ಮಿಸಲಾಗಿದ್ದ ಫೈಬರ್ ಡೋಮ್ ತಾತ್ಕಾಲಿಕ ಸೆಟ್‌ನಲ್ಲಿ ಸಂಜೆ 4.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಹಾಗೂ ಅದು ಅದು ಕುಸಿದುಬಿದ್ದಿದೆ. ಆಗ ಒಳಗೆ ಆಟವಾಡುತ್ತಿದ್ದ ಮಕ್ಕಳಿಗೆ ಹಾಗೂ ವಯಸ್ಕರಿಗೆ ಬೆಂಕಿ ತಗುಲಿದ್ದು, ಅವರು ಸಜೀವ ದಹನಗೊಂಡಿದ್ದಾರೆ. ಬಳಿಕ ಅಕ್ಕಪಕ್ಕದ ಪ್ರದೇಶಗಳಿಗೂ ಹರಡಿದೆ.ಬೇಸಿಗೆ ರಜೆ ಇರುವ ಕಾರಣ ಭಾರಿ ಸಂಖ್ಯೆಯಲ್ಲಿ ಇಲ್ಲಿಗೆ ಜನ ಬಂದಿದ್ದರು. ಹೀಗಾಗಿ ಭಾರೀ ಜನಸಂದಣಿ ಇದ್ದ ಕಾರಣ ಅಪಾರ ಸಾವು ನೋವು ಉಂಟಾಗಿದೆ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಒಳಗೆ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಆಘಾತ:
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಬಘೇಲ್, ಘಟನೆ ಬಗ್ಗ ಆಘಾತ ವ್ಯಕ್ತಪಡಿಸಿದ್ದು, ಕ್ಷಿಪ್ರಗತಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.‘ಬೇಸಿಗೆಯ ರಜೆ ಇದ್ದ ಕಾರಣ ಗೇಮ್‌ಝೋನ್‌ನಲ್ಲಿ ಹೆಚ್ಚಾಗಿ ಮಕ್ಕಳೇ ಭಾಗವಹಿಸಿದ್ದರು. ರಕ್ಷಣಾ ಕಾರ್ಯಾಚರಣೆ ಪೂರ್ತಿ ಮುಗಿದ ನಂತರವೇ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ‘ ಎಂಬ ನಿಖರ ಮಾಹಿತಿ ತಿಳಿಯಲಿದೆ ಎಂದು ಅಧಿಕಾರಿಳು ತಿಳಿಸಿದ್ದಾರೆ. ತಡರಾತ್ರಿವರೆಗೂ ರಕ್ಷಣಾ ಕಾರ್ಯ ಮುಂದುವರಿದಿತ್ತು.
ಮಾಲೀಕನ ಬಂಧನ:ಈ ಹಿನ್ನೆಲೆಯಲ್ಲಿ ಟಿಆರ್‌ಪಿ ಗೇಮ್‌ಝೋನ್ ಮಾಲೀಕ ಯುವರಾಜ್ ಸಿಂಗ್ ಸೋಲಂಕಿಯ ಮೇಲೆ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿ ಪೊಲೀಸರು ವಶಕ್ಕೆ ಪಡೆಯಲಾಗಿದೆ.
ಏನಿದು ಟಿಆರ್‌ಪಿ ಗೇಮ್‌ಝೋನ್?ಟಿಆರ್‌ಪಿ ಗೇಮ್‌ಝೋನ್ ಎಂಬುದು ರಾಜಕೋಟ್‌ನ ನನಮಾವಾ ಪ್ರದೇಶದಲ್ಲಿರುವ ಮನರಂಜನಾ ಪಾರ್ಕ್. ಇಲ್ಲಿ ಹೊರಾಂಗಣ ಕ್ರೀಡೆಗಳು, ಜಲಕ್ರೀಡೆಗಳು ಮತ್ತು ವಿವಿಧ ಆಟಗಳ ಕ್ಲಬ್‌ಗಳಿವೆ. 2020ರಲ್ಲಿ ಇದು ಉದ್ಘಾಟನೆಯಾಗಿತ್ತು. ಇಲ್ಲಿ ಬಿಲ್ಲುಗಾರಿಕೆ, ರೈಫಲ್ ಶೂಟಿಂಗ್, ಬೌಲಿಂಗ್ ಸೇರಿದಂತೆ ಸೇರಿದಂತೆ ಅನೇಕ ಕ್ರೀಡೆಗಳಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಇದು ಸೌರಾಷ್ಟ್ರ ಭಾಗದಲ್ಲಿರುವ ಅತಿದೊಡ್ಡ ಗೇಮ್‌ಝೋನ್ ಎಂದು ಖ್ಯಾತಿ ಗಳಿಸಿದೆ.