ಬೀಜಿಂಗ್: ತನ್ನ ದೇಶದ ಉತ್ಪನ್ನಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದ ಅಮೆರಿಕದ ಕ್ರಮಕ್ಕೆ ಇದೀಗ ಚೀನಾ ಪ್ರತಿಏಟು ನೀಡಲು ಮುಂದಾಗಿದೆ. ವಿಶ್ವದ ದೊಡ್ಡಣ್ಣನ ಜತೆಗೆ ನೇರವಾಗಿ ಮತ್ತೊಂದು ಬಾರಿ ತೆರಿಗೆ ಯುದ್ಧಕ್ಕೆ ಇಳಿದಿದೆ.ಅಮೆರಿಕದಿಂದ ಆಮದಾಗುವ ಕಲ್ಲಿದ್ದಲು ಮತ್ತು ಎಲ್‌ಎನ್‌ಜಿ ಉತ್ಪನ್ನಗಳಿಗೆ ಶೇ.15ರಷ್ಟು ಮತ್ತು ಕಚ್ಚಾತೈಲ, ಕೃಷಿ ಉಪಕರಣಗಳು ಹಾಗೂ ದೊಡ್ಡ ಗಾತ್ರದ ಎಂಜಿನ್ ಹೊಂದಿರುವ ಕಾರುಗಳ ಮೇಲೆ ಶೇ.10ರಷ್ಟು ತೆರಿಗೆಯನ್ನು ಚೀನಾ ವಿಧಿಸಿದೆ. ಜತೆಗೆ ಗೂಗಲ್ ವಿರುದ್ಧದ ಆ್ಯಂಟಿ ಟ್ರಸ್ಟ್(ನಂಬಿಕೆ ಉಲ್ಲಂಘನೆ) ಆರೋಪಕ್ಕೆ ಸಂಬಂಧಿಸಿ ತನಿಖೆಯನ್ನೂ ಆರಂಭಿಸಿದೆ.ಇದೇ ವೇಳೆ ಡಬ್ಲ್ಯುಟಿಒದ ವಿವಾದ ಇತ್ಯರ್ಥ ವ್ಯವಸ್ಥೆಯಡಿ ಅಮೆರಿಕದ ತೆರಿಗೆ ಕ್ರಮಗಳ ವಿರುದ್ಧ ಪ್ರಕರಣವನ್ನೂ ದಾಖಲಿಸುವುದಾಗಿ ಚೀನಾ ಹೇಳಿದೆ. ಅಮೆರಿಕದ ತೆರಿಗೆ ಕ್ರಮವು ದುರುದ್ದೇಶದಿಂದ ಕೂಡಿದೆ.