ಚೀನಾ ದೇಶದ ಭಾಗ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ತೈವಾನ್‌ ವಿರುದ್ಧ ಮತ್ತೆ ಸೇನೆ ಬಳಸಿ ಬೆದರಿಕೆ

ಸಾರಾಂಶ

ತನ್ನನ್ನು ಚೀನಾ ದೇಶದ ಭಾಗ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ತೈವಾನ್‌ ವಿರುದ್ಧ ಮತ್ತೆ ಸೇನಾಬಳ ಬಳಸಿ ಬೆದರಿಕೆ ಹಾಕುವ ತಂತ್ರವನ್ನು ಚೀನಾ ಮಾಡಿದೆ. ಈ ಮೂಲಕ ಈಗಾಗಲೇ ಉದ್ವಿಗ್ನವಾಗಿರುವ ತೈವಾನ್‌ ಜಲಸಂಧಿ ಪ್ರದೇಶವನ್ನು ಮತ್ತಷ್ಟು ತ್ವೇಷಮಯಗೊಳಿಸಿದೆ.

ತೈಪೆ: ತನ್ನನ್ನು ಚೀನಾ ದೇಶದ ಭಾಗ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ತೈವಾನ್‌ ವಿರುದ್ಧ ಮತ್ತೆ ಸೇನಾಬಳ ಬಳಸಿ ಬೆದರಿಕೆ ಹಾಕುವ ತಂತ್ರವನ್ನು ಚೀನಾ ಮಾಡಿದೆ. ಈ ಮೂಲಕ ಈಗಾಗಲೇ ಉದ್ವಿಗ್ನವಾಗಿರುವ ತೈವಾನ್‌ ಜಲಸಂಧಿ ಪ್ರದೇಶವನ್ನು ಮತ್ತಷ್ಟು ತ್ವೇಷಮಯಗೊಳಿಸಿದೆ.

ಚೀನಾ ತನ್ನ 125ಕ್ಕೂ ಹೆಚ್ಚು ಯುದ್ಧ ವಿಮಾನ, ಯುದ್ಧವಾಹಕ ನೌಕೆ, ಹಡಗುಗಳ ಮೂಲಕ ತೈವಾನ್‌ ದೇಶವನ್ನು ಸುತ್ತುವರೆದು ಎಚ್ಚರಿಕೆ ಸಂದೇಶ ರವಾನಿಸುವ ಯತ್ನ ಮಾಡಿದೆ. ತೈವಾನ್‌ ಅಧ್ಯಕ್ಷರು ತಮ್ಮ ದೇಶವನ್ನು ಚೀನಾದ ಭಾಗವೆಂದು ಒಪ್ಪಿಕೊಳ್ಳಲು ಅಲ್ಲಿನ ಅಧ್ಯಕ್ಷ ನಿರಾಕರಿಸಿದ ಕಾರಣ ಈ ಅಭ್ಯಾಸ ನಡೆಸಿರುವುದಾಗಿ ಚೀನಾದ ರಕ್ಷಣಾ ಸಚಿವಾಲಯ ತಿಳಿಸಿದೆ. 

ಇತ್ತೀಚೆಗಷ್ಟೇ ತೈವಾನ್‌ ತನ್ನ ಸ್ಥಾಪನಾ ದಿನವನ್ನು ಆಚರಿಸಿದ್ದು, ‘ಚೀನಾಗೆ ನಮ್ಮನ್ನು ಪ್ರತಿನಿಧಿಸುವ ಹಕ್ಕಿಲ್ಲ. ಚೀನಾದಿಂದ ಎದುರಾಗುವ ಎಲ್ಲಾ ಬೆದರಿಕೆಗಳನ್ನು ನಮ್ಮ ಸೇನೆ ಎದುರಿಸುವುದು’ ಎಂದ ಅಧ್ಯಕ್ಷ ಲಾಐ ಚಿಂಗ್‌-ತೆ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುವ ಮಿಲಿಟರಿ ಪ್ರಚೋದನೆಗಳು ಹಾಗೂ ತೈವಾನ್‌ನ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕುವುದನ್ನು ನಿಲ್ಲಿಸಿ ಎಂದು ಎಚ್ಚರಿಸಿದ್ದರು.

Share this article