ಕೇಂದ್ರದ ವಿರುದ್ಧ ಮುಗಿಬೀಳಲು ಸಿದ್ಧತೆ
ಪಿಟಿಐ ನವದೆಹಲಿ
ಮತಪಟ್ಟಿ ಸಮಗ್ರ ಪರಿಷ್ಕರಣೆ ಬಗ್ಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡ ಆರೋಪ ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಜಾ ಹಾಗೂ ಬಂಧನಕ್ಕೆ ಗಟ್ಟಿ ಧ್ವನಿಯಲ್ಲಿ ಆಗ್ರಹಿಸುತ್ತಿರುವ ಕಾಂಗ್ರೆಸ್ ಮತ್ತು ಅದನ್ನೊಳಗೊಂಡ ಇಂಡಿಯಾ ಕೂಟವು ಸೆ.30ರಂದು ಸಭೆ ಸೇರಲಿದೆ. ಈ ವೇಳೆ ಚುನಾವಣಾ ಆಯೋಗ ಮತ್ತು ವಿಶೇಷ ಮತಪಟ್ಟಿ ಪರಿಷ್ಕರಣೆಯ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಿದೆ.ಈ ಸಭೆಯು ಪಶ್ಚಿಮ ಬಂಗಾಳದಲ್ಲಿ ಹಾವು-ಮುಂಗುಸಿಯಂತಾಗಿರುವ ಟಿಎಂಸಿ ಮತ್ತು ಸಿಪಿಎಂ, ಸಿಪಿಐ (ಎಂಎಲ್) ಪಕ್ಷಗಳನ್ನು ಒಟ್ಟಿಗೆ ತರಲಿದೆ. ಈ ಮೂಲಕ, ಇತ್ತೀಚೆಗೆ ವಿವಿಧ ಕಾರಣಗಳಿಂದಾಗಿ ಮೂಡಿದ್ದ ವೈಮನಸ್ಯವನ್ನು ಬದಿಗಿಟ್ಟು, ತಮ್ಮ ಮೈತ್ರಿಗೆ ಬಲ ತುಂಬಿ ಸರ್ಕಾರದ ವಿರುದ್ಧ ಒಟ್ಟಾಗಿ ಮುಗಿಬೀಳು ಕೂಟ ಸಿದ್ಧವಾಗಿದೆ. ಇದರ ಮುನ್ನಾದಿನ (ಸೆ.29ರಂದು) ಇದೇ ವಿಷಯವಾಗಿ ಚರ್ಚಿಸಲು ಹಾಗೂ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡ ಬ್ಲ್ಯುಸಿ) ಸಭೆ ನಡೆಯಲಿದೆ.
ಕಾನೂನಿನ ಉಲ್ಲಂಘನೆ ಎಂದು ತಿಳಿದಿದ್ದರೂ ಇನ್ನಿಬ್ಬರು ಚುನಾವಣಾ ಆಯುಕ್ತರ ಗಮನಕ್ಕೆ ತರದೆ, ಹೊಸ ಮತದಾರರನ್ನು ಮತಪಟ್ಟಿಗೆ ಸೇರಿಸಲು ಬಳಸುವ ಫಾರ್ಮ್ 6ರಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಬದಲಾವಣೆ ಮಾಡಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಕೋರ್ಟ್‌ಗೆ ಆಗ್ರಹಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ‘ಕುಮಾರ್ ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ಭಾರತದ ಜನರಿಗೆ ಮಾಡಿದ ಅವಮಾನವಾಗಿದೆ ಮತ್ತು ಅವರು ರಾಜೀನಾಮೆ ನೀಡಲೇಬೇಕು’ ಎಂದೂ ಒತ್ತಾಯಿಸಿದ್ದಾರೆ.‘ಶುಕ್ರವಾರ ರಾತ್ರಿ ಎಚ್ಚೆತ್ತ ಆಯೋಗವು ಯುವ ಮತದಾರರಿಗಾಗಿ ವಿಶೇಷ ನೋಂದಣಿ ಕ್ಯಾಂಪ್‌ಗಳನ್ನು ಆಯೋಜಿಸುವಂತೆ ಹಾಗೂ ಆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ’ ಎಂದೂ ಅವರು ಆರೋಪಿಸಿದರು.
ಜ್ಞಾನೇಶ್ ಕುಮಾರ್ ಅಲ್ಲ, ವ್ಯಾನಿಶ್ ಕುಮಾರ್: ದೀದಿ ಕಿಡಿ
==
- ಪ.ಬಂಗಾಳದಲ್ಲಿ ಬಾಂಗ್ಲಾ ಮತದಾರರ ತೆಗೆಸಿದ್ದಾರೆ
- ಇದಕ್ಕಾಗಿ ಪ್ರಶಸ್ತಿಗೆ ಅವರು ಅರ್ಹ: ಸಮಿಕ್ ಭಟ್ಟಾಚಾರ್ಯ
ಏಕಪಕ್ಷೀಯ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ರೋಶ ಹೊರಹಾಕುತ್ತಿರುವ ಹೊತ್ತಿನಲ್ಲೇ ಬಿಜೆಪಿ ರಾಜ್ಯ ಅಧ್ಯಕ್ಷರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.‘ಜ್ಞಾನೇಶ್ ಕನಿಷ್ಠಪಕ್ಷ ಪದ್ಮಭೂಷಣ ಪ್ರಶಸ್ತಿಗಾದರೂ ಅರ್ಹರು. ತುಂಬಾ ಸಮಯದ ನಂತರ ಪಶ್ಚಿಮ ಬಂಗಾಳದಲ್ಲಿ ಹತ್ಯೆಗಳಿಲ್ಲದೆ ಚುನಾವಣೆ ನಡೆದಿದೆ. ಮತದಾರರ ಪಟ್ಟಿ ಶುದ್ಧೀಕರಣದಲ್ಲಿ ಜ್ಞಾನೇಶ್ ಕುಮಾರ್ ಮಹತ್ವದ ಪಾತ್ರವಹಿಸಿದ್ದರು. ಪಶ್ಚಿಮ ಬಂಗಾಳದಂಥ ಗಡಿ ರಾಜ್ಯಗಳಲ್ಲಿ ಜ್ಞಾನೇಶ್ ಕುಅಕ್ರಮ ಬಾಂಗ್ಲಾ ನಿವಾಸಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಉಪಕ್ರಮ ಕೈಗೆತ್ತಿಕೊಂಡರು. ಇದಕ್ಕೆ ಬಂಗಾಳಿಗಳು ಅವರಿಗೆ ಕೃತಜ್ಞರು’ ಎಂದರು.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ಅವರು ದೇಶದ್ರೋಹಿಗಳು ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಅವರನ್ನು ಅವರ ಪಕ್ಷದವರೇ ಗಂಭೀರವಾಗಿ ಪರಿಣಿಸುವುದಿಲ್ಲ ಎಂದು ತಿರುಗೇಟು ನೀಡಿದರು