ನವದೆಹಲಿ: ಆದಾಯ ತೆರಿಗೆ ಇಲಾಖೆ ನಮ್ಮ ಬ್ಯಾಂಕ್ ಖಾತೆ ಜಪ್ತಿ ಮಾಡಿದ ಕಾರಣ ರೈಲು ಟಿಕೆಟ್ ಖರೀದಿಗೂ ಹಣ ಇಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಪೂರ್ಣ ಸುಳ್ಳು ಎಂದು ಬಿಜೆಪಿ ತಿರುಗೇಟು ನೀಡಿದೆ.
ತೆರಿಗೆ ಇಲಾಖೆ ಜಪ್ತಿ ಮಾಡಿದ್ದು ಕೇವಲ 3-4 ಬ್ಯಾಂಕ್ ಖಾತೆ. ಆದರೆ ಇದಕ್ಕೆ ಹೊರತಾಗಿ ಕಾಂಗ್ರೆಸ್ ಬೇರೆ ಬೇರೆ ಪಾನ್ ಸಂಖ್ಯೆಯಡಿ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದೆ.
2023ರ ಮಾರ್ಚ್ ಅಂತ್ಯಕ್ಕೆ ಈ ಖಾತೆಗಳಲ್ಲಿ ಹೆಚ್ಚು ಕಡಿಮೆ 1000 ಕೋಟಿ ರು. ಹಣ ಇದೆ ಎಂದು ಸ್ವತಃ ಪಕ್ಷವೇ ಮಾಹಿತಿ ನೀಡಿದೆ.
ಹೀಗಿರುವಾಗ ಹಣ ಖಾಲಿ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ, ತೆರಿಗೆ ಮೇಲ್ಮನವಿ ಪ್ರಾಧಿಕಾರಕ್ಕೆ ನೀಡಿದ ಮಾಹಿತಿಯಲ್ಲಿ ಕಾಂಗ್ರೆಸ್‌ನ ಇತರೆ ಖಾತೆಗಳಲ್ಲಿ ಅಂದಾಜು 1000 ಕೋಟಿ ರು. ಇರುವ ಮಾಹಿತಿ ಇತ್ತು.